ನವದೆಹಲಿ: ಈ ವರ್ಷದ ಕೊನೆಯಲ್ಲಿ ನಡೆಯಲಿರುವ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2023 ಮಿನಿ ಹರಾಜಿನ ಮೊದಲು ಡೆಲ್ಲಿ ಕ್ಯಾಪಿಟಲ್ಸ್ ತಂಡ ಉಳಿಸಿಕೊಂಡಿರುವ ಮತ್ತು ಬಿಡುಗಡೆ ಮಾಡಿದ ಆಟಗಾರರ ಪಟ್ಟಿಯನ್ನು ಇಂದು ಬಹಿರಂಗಪಡಿಸಿದೆ.
ದೆಹಲಿ ಮೂಲದ ಫ್ರಾಂಚೈಸಿ ಆರು ವಿದೇಶಿ ಆಟಗಾರರನ್ನು ಒಳಗೊಂಡಂತೆ ಒಟ್ಟು 19 ಆಟಗಾರರನ್ನು ಉಳಿಸಿಕೊಂಡಿದೆ. ಇದರಲ್ಲಿ ಭಾರತೀಯ ಆಟಗಾರರಾದ ರಿಷಭ್ ಪಂತ್, ಪೃಥ್ವಿ ಶಾ, ಚೇತನ್ ಸಕರಿಯಾ, ಖಲೀಲ್ ಅಹ್ಮದ್, ಕುಲದೀಪ್ ಯಾದವ್ ಮತ್ತು ಅಕ್ಷರ್ ಪಟೇಲ್ ಜೊತೆಗೆ ರಿಪಾಲ್ ಪಟೇಲ್, ಸರ್ಫರಾಜ್ ಖಾನ್, ಯಶ್ ಧುಲ್, ಕಮಲೇಶ್ ನಾಗರಕೋಟಿ, ಪ್ರವೀಣ್ ದುಬೆ, ವಿಕ್ಕಿ ಓಸ್ತ್ವಾಲ್ ಮತ್ತು ಲಲಿತ್ ಯಾದವ್ ಸೇರಿ 19 ಜನರಿದ್ದಾರೆ.
-
Presenting 👉🏼 The 𝐑𝐞𝐭𝐚𝐢𝐧𝐞𝐝 𝐃𝐂 𝐒𝐭𝐚𝐫𝐬 for #IPL2023 🔥
— Delhi Capitals (@DelhiCapitals) November 15, 2022 " class="align-text-top noRightClick twitterSection" data="
We will head into the #IPLAuction in pursuit of more talent to accompany them 🤝🏻#YehHaiNayiDilli #IPLRetention pic.twitter.com/VDOSZflneG
">Presenting 👉🏼 The 𝐑𝐞𝐭𝐚𝐢𝐧𝐞𝐝 𝐃𝐂 𝐒𝐭𝐚𝐫𝐬 for #IPL2023 🔥
— Delhi Capitals (@DelhiCapitals) November 15, 2022
We will head into the #IPLAuction in pursuit of more talent to accompany them 🤝🏻#YehHaiNayiDilli #IPLRetention pic.twitter.com/VDOSZflneGPresenting 👉🏼 The 𝐑𝐞𝐭𝐚𝐢𝐧𝐞𝐝 𝐃𝐂 𝐒𝐭𝐚𝐫𝐬 for #IPL2023 🔥
— Delhi Capitals (@DelhiCapitals) November 15, 2022
We will head into the #IPLAuction in pursuit of more talent to accompany them 🤝🏻#YehHaiNayiDilli #IPLRetention pic.twitter.com/VDOSZflneG
ಆಸ್ಟ್ರೇಲಿಯಾದ ಬ್ಯಾಟರ್ ಡೇವಿಡ್ ವಾರ್ನರ್, ವೆಸ್ಟ್ ಇಂಡೀಸ್ ಬ್ಯಾಟರ್ ರೋವ್‌ಮನ್ ಪೊವೆಲ್, ದಕ್ಷಿಣ ಆಫ್ರಿಕಾದ ವೇಗದ ಬೌಲರ್‌ಗಳಾದ ಅನ್ರಿಚ್ ನಾರ್ಟ್ಜೆ ಮತ್ತು ಲುಂಗಿ ಎನ್‌ಗಿಡಿ, ಬಾಂಗ್ಲಾದೇಶದ ವೇಗಿ ಮುಸ್ತಾಫಿಜುರ್ ರೆಹಮಾನ್ ಮತ್ತು ಆಸ್ಟ್ರೇಲಿಯಾದ ಆಲ್‌ರೌಂಡರ್ ಮಿಚೆಲ್ ಮಾರ್ಷ್ ಸೇರಿದಂತೆ ಆರು ವಿದೇಶಿ ಆಟಗಾರರನ್ನು ಡೆಲ್ಲಿ ಕ್ಯಾಪಿಟಲ್ಸ್ ಉಳಿಸಿಕೊಂಡಿದೆ.
ಡೆಲ್ಲಿ ಕ್ಯಾಪಿಟಲ್ಸ್ ಉಳಿಸಿಕೊಂಡಿರುವ ಆಟಗಾರರ ಪೈಕಿ ಒಬ್ಬರಾದ ಪ್ರವೀಣ್ ದುಬೆ ದೇಶೀಯ ಕ್ರಿಕೆಟ್‌ನಲ್ಲಿ ಕರ್ನಾಟಕದ ಪರವಾಗಿ ಆಡುತ್ತಾರೆ. ಕರ್ನಾಟಕ ಕ್ರಿಕೆಟ್ ತಂಡ ಮತ್ತು ಹುಬ್ಬಳ್ಳಿ ಟೈಗರ್ಸ್ ತಂಡವನ್ನು ಪ್ರತಿನಿಧಿಸುವ ಪ್ರವೀಣ್ ದುಬೆ ಬಲಗೈ ಬ್ಯಾಟ್ಸ್‌ಮನ್ ಮತ್ತು ಲೆಗ್ ಬ್ರೇಕ್ ಗೂಗ್ಲಿ ಬೌಲರ್ ಆಗಿದ್ದಾರೆ. 2016 ಮತ್ತು 2017ರಲ್ಲಿ ಐಪಿಎಲ್ ಆಟಗಾರರ ಹರಾಜಿನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) ತಂಡದ ಪಾಲಾಗಿದ್ದರು. 2020ರಲ್ಲಿ ಗಾಯಾಳು ಅಮಿತ್ ಮಿಶ್ರಾ ಬದಲಿಗೆ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಪ್ರವೀಣ್ ದುಬೆ ಸೇರಿದ್ದರು.
ಇದನ್ನೂ ಓದಿ: ಮುಂಬೈ ತಂಡದ ಆಲ್‌ರೌಂಡರ್ ಕಿರಾನ್ ಪೊಲ್ಲಾರ್ಡ್ ಐಪಿಎಲ್ಗೆ ಗುಡ್ಬೈ
ಏತನ್ಮಧ್ಯೆ, ಡೆಲ್ಲಿ ಕ್ಯಾಪಿಟಲ್ಸ್ ತಂಡದ ಫ್ರಾಂಚೈಸ್ ನಾಲ್ವರು ಆಟಗಾರರನ್ನು ಬಿಡುಗಡೆ ಮಾಡಿದೆ. ಇದರಲ್ಲಿ ಭಾರತೀಯ ಆಟಗಾರರಾದ ಮನ್ದೀಪ್ ಸಿಂಗ್, ಕೆಎಸ್ ಭರತ್ ಮತ್ತು ಅಶ್ವಿನ್ ಹೆಬ್ಬಾರ್ ಮತ್ತು ನ್ಯೂಜಿಲ್ಯಾಂಡ್ ವಿಕೆಟ್ ಕೀಪರ್ ಮತ್ತು ಬ್ಯಾಟರ್ ಟಿಮ್ ಸೀಫರ್ಟ್ ಅವರನ್ನು ಕೈಬಿಟ್ಟಿದೆ.
-
Memories made in a season to remember 🥺
— Delhi Capitals (@DelhiCapitals) November 15, 2022 " class="align-text-top noRightClick twitterSection" data="
तहे दिल से शुक्रिया आपका and we wish you the best for your upcoming journey 💙#YehHaiNayiDilli #IPLRetention #IPLAuction #IPL2023 pic.twitter.com/uIqpu95UJk
">Memories made in a season to remember 🥺
— Delhi Capitals (@DelhiCapitals) November 15, 2022
तहे दिल से शुक्रिया आपका and we wish you the best for your upcoming journey 💙#YehHaiNayiDilli #IPLRetention #IPLAuction #IPL2023 pic.twitter.com/uIqpu95UJkMemories made in a season to remember 🥺
— Delhi Capitals (@DelhiCapitals) November 15, 2022
तहे दिल से शुक्रिया आपका and we wish you the best for your upcoming journey 💙#YehHaiNayiDilli #IPLRetention #IPLAuction #IPL2023 pic.twitter.com/uIqpu95UJk
ದೆಹಲಿ ಕ್ಯಾಪಿಟಲ್ಸ್ ಆಲ್ ರೌಂಡರ್ ಶಾರ್ದೂಲ್ ಠಾಕೂರ್ ಅವರನ್ನು ಕೋಲ್ಕತ್ತಾ ನೈಟ್ ರೈಡರ್ಸ್‌ಗೆ ಬಿಟ್ಟುಕೊಟ್ಟಿದ್ದು, ಅವರ ಸ್ಥಾನದಲ್ಲಿ ಆಲ್ ರೌಂಡರ್ ಅಮನ್ ಖಾನ್ ಅವರನ್ನು ಕರೆತಂದಿದೆ.
ತಂಡದ ಭಾರತೀಯರು ಆಟಗಾರರು: ರಿಷಬ್ ಪಂತ್, ಪೃಥ್ವಿ ಶಾ, ಚೇತನ್ ಸಕರಿಯಾ, ಖಲೀಲ್ ಅಹ್ಮದ್, ಕುಲದೀಪ್ ಯಾದವ್, ಅಕ್ಸರ್ ಪಟೇಲ್, ರಿಪಾಲ್ ಪಟೇಲ್, ಸರ್ಫರಾಜ್ ಖಾನ್, ಯಶ್ ಧುಲ್, ಕಮಲೇಶ್ ನಾಗರಕೋಟಿ, ಪ್ರವೀಣ್ ದುಬೆ, ವಿಕ್ಕಿ ಓಸ್ತ್ವಾಲ್, ಲಲಿತ್ ಯಾದವ್.
ವಿದೇಶಿ ಆಟಗಾರರು: ಡೇವಿಡ್ ವಾರ್ನರ್, ರೋವ್‌ಮನ್ ಪೊವೆಲ್, ಅನ್ರಿಚ್ ನಾರ್ಟ್ಜೆ, ಲುಂಗಿ ಎನ್‌ಗಿಡಿ, ಮುಸ್ತಾಫಿಜುರ್ ರೆಹಮಾನ್, ಮಿಚೆಲ್ ಮಾರ್ಷ್.
ಕೈಬಿಟ್ಟ ಆಟಗಾರರು: ಟಿಮ್ ಸೀಫರ್ಟ್, ಮನದೀಪ್ ಸಿಂಗ್, ಕೆಎಸ್ ಭರತ್, ಅಶ್ವಿನ್ ಹೆಬ್ಬಾರ್
ಇದನ್ನೂ ಓದಿ: ಭಾರತ ತಂಡಕ್ಕೆ ಮಹೇಂದ್ರ ಸಿಂಗ್ ಧೋನಿ ವಾಪಸ್.. ಬಿಸಿಸಿಐನಿಂದ ಮಾಂತ್ರಿಕನಿಗೆ ದೊಡ್ಡ ಹೊಣೆ