ಜೈಪುರ್: ನ್ಯೂಜಿಲ್ಯಾಂಡ್ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಭಾರತ 5 ವಿಕೆಟ್ ಜಯ ಸಾಧಿಸಿದೆ. ಈ ಪಂದ್ಯದಲ್ಲಿ ಭಾರತದ ವೇಗಿ ದೀಪಕ್ ಚಾಹರ್ (Deepak Chahar) ಹೆಚ್ಚು ರನ್ ಬಿಟ್ಟುಕೊಟ್ಟು ದುಬಾರಿಯಾದರೂ, ಕೇವಲ ದುರುಗುಟ್ಟಿ ನೋಡಿ ಒಂದು ಲಕ್ಷ ರೂ ಜೇಬಿಗಿಳಿಸಿಕೊಂಡಿದ್ದಾರೆ.
ಬುಧವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ನ್ಯೂಜಿಲ್ಯಾಂಡ್ ತಂಡ 20 ಓವರ್ಗಳಲ್ಲಿ 164 ರನ್ಗಳಿಸಿತ್ತು. ಮಾರ್ಕ್ ಚಾಪ್ಮನ್ 63 ರನ್ಗಳಿಸಿದರೆ, ಮಾರ್ಟಿನ್ ಗಪ್ಟಿಲ್ 70 ರನ್ಗಳಿಸಿದ್ದರು. ಈ ಮೊತ್ತವನ್ನು ಭಾರತ 19.45 ಓವರ್ಗಳಲ್ಲಿ 5 ವಿಕೆಟ್ ಕಳೆದುಕೊಂಡು ತಲುಪಿ ಜಯ ಸಾಧಿಸಿತ್ತು.
ಮೊದಲ ಇನ್ನಿಂಗ್ಸ್ 18 ಓವರ್ನಲ್ಲಿ ತಮ್ಮ ಕೊನೆಯ ಓವರ್ ಎಸೆಯಲು ಬಂದ ದೀಪಕ್ ಮೊದಲ ಎಸೆತದಲ್ಲಿಯೇ ಗಪ್ಟಿಲ್ ಭಾರಿ ಸಿಕ್ಸರ್ ಬಾರಿಸಿದರಲ್ಲದೆ, ಭಾರತೀಯ ಬೌಲರ್ನತ್ತ ಗುರಾಯಿಸಿ ಗಂಭೀರ ನೋಟ ಬೀರಿದ್ದರು. ಆದರೆ ನಂತರ ಎಸೆತವನ್ನು ಸಿಕ್ಸರ್ಗಟ್ಟುವ ಯತ್ನದಲ್ಲಿ ಶ್ರೇಯಸ್ ಅಯ್ಯರ್ಗೆ ಕ್ಯಾಚ್ ನೀಡಿದರು. ತಕ್ಷಣ ದೀಪಕ್ ಚಾಹರ್ ಕಿವೀಸ್ ಬ್ಯಾಟರ್ನನ್ನು ಗುರಾಯಿಸುತ್ತಾ ಸೇಡು ತೀರಿಸಿಕೊಂಡೆ ಎಂಬಂತೆ ನೋಟ ಬೀರಿದರು.
ಈ ಇಬ್ಬರ ನಡುವಿನ ರೋಚಕ ಕಾದಾಟದಲ್ಲಿ ವಿಜಯಿಯಾದ ದೀಪಕ್ ಚಾಹರ್ಗೆ ಪಂದ್ಯದ ರೋಚಕ ಕ್ಷಣ (Moment of the match) ಪ್ರಶಸ್ತಿ ಮತ್ತು ಒಂದು ಲಕ್ಷ ರೂ ನೀಡಲಾಯಿತು.
ರೋಹಿತ್-ಸೂರ್ಯ ಕಮಾಲ್
ನ್ಯೂಜಿಲ್ಯಾಂಡ್ ನೀಡಿದ 164 ರನ್ಗಳ ಗುರಿಯನ್ನು ಭಾರತ ತಂಡ ಈ 5 ವಿಕೆಟ್ ಕಳೆದುಕೊಂಡು 19.4 ಓವರ್ಗಳಲ್ಲಿ ತಲುಪಿತು. ಭಾರತ ತಂಡದ ಅಧಿಕೃತ ನಾಯಕನಾಗಿ ಆಡಿದ ಮೊದಲ ಪಂದ್ಯದಲ್ಲೇ ರೋಹಿತ್ ಶರ್ಮಾ 48 ಗಳಿಸಿ ಮಿಂಚಿದರೆ, ಸೂರ್ಯಕುಮಾರ್ ಯಾದವ್ 62 ರನ್ಗಳಿಸಿ ಭಾರತಕ್ಕೆ ಗೆಲುವು ತಂದುಕೊಟ್ಟರು.
ಇದನ್ನೂ ಓದಿ: ಎರಡು ದೇಶಗಳ ಪರ ಆಡಿ ಅರ್ಧಶತಕ ಬಾರಿಸಿ ದಾಖಲೆ ನಿರ್ಮಿಸಿದ ಕಿವೀಸ್ ಬ್ಯಾಟರ್