ಚೆನ್ನೈ: ಕಳೆದ ವರ್ಷದ ಐಪಿಎಲ್ನಲ್ಲಿ ಕಳಪೆ ಪ್ರದರ್ಶನ ನೀಡಿದ್ದ ಚೆನ್ನೈ ಸೂಪರ್ ಕಿಂಗ್ಸ್ ಪ್ರಸಕ್ತ ಸಾಲಿನಲ್ಲಿ ಅದ್ಭುತ ಕಮ್ಬ್ಯಾಕ್ ಮಾಡಿದ್ದು, ಸದ್ಯ ಆಡಿರುವ ನಾಲ್ಕು ಪಂದ್ಯಗಳ ಪೈಕಿ ಮೂರರಲ್ಲಿ ಗೆಲುವು ಸಾಧಿಸಿ ಪಾಯಿಂಟ್ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ.
ತಂಡದ ವೇಗದ ಬೌಲರ್ ದೀಪಕ್ ಚಹರ್ ಅದ್ಭುತ ಬೌಲಿಂಗ್ ಪ್ರದರ್ಶನ ನೀಡುತ್ತಿದ್ದು, ಮೊದಲ ಪಂದ್ಯದಲ್ಲಿ ವೈಫಲ್ಯ ಅನುಭವಿಸಿದ್ರೂ, ನಂತರದ ಮೂರು ಪಂದ್ಯಗಳಿಂದ 8ವಿಕೆಟ್ ಪಡೆದುಕೊಂಡಿದ್ದಾರೆ.
ಇದನ್ನೂ ಓದಿ: ಪಡಿಕ್ಕಲ್ ಎಲ್ಲ ಮಾದರಿ ಕ್ರಿಕೆಟ್ ಆಡಲು ಸಮರ್ಥ: ಗವಾಸ್ಕರ್ ಬಣ್ಣನೆ
ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಮೊದಲ ಓವರ್ನಲ್ಲೇ ವಿಕೆಟ್ ಪಡೆದುಕೊಂಡು ಮಿಂಚಿರುವ ದೀಪಕ್ ಚಹರ್ ಒಟ್ಟು 4 ಓವರ್ಗಳಿಂದ 4 ವಿಕೆಟ್ ಪಡೆದು ಗಮನ ಸೆಳೆದಿದ್ದಾರೆ. ಈ ಮೂಲಕ ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ 50 ವಿಕೆಟ್ ಪಡೆದು ಸಾಧನೆ ಮಾಡಿದ್ದಾರೆ.
-
And many more to come 😘 @deepak_chahar9 https://t.co/15CRmKtgt8
— Malti Chahar🇮🇳 (@ChaharMalti) April 23, 2021 " class="align-text-top noRightClick twitterSection" data="
">And many more to come 😘 @deepak_chahar9 https://t.co/15CRmKtgt8
— Malti Chahar🇮🇳 (@ChaharMalti) April 23, 2021And many more to come 😘 @deepak_chahar9 https://t.co/15CRmKtgt8
— Malti Chahar🇮🇳 (@ChaharMalti) April 23, 2021
ಸಹೋದರಿಯಿಂದ ವಿಶ್!
ಐಪಿಎಲ್ನಲ್ಲಿ ಈ ಸಾಧನೆ ಮಾಡುತ್ತಿದ್ದಂತೆ ದೀಪಕ್ ಚಹರ್ ಸಹೋದರಿ ಮಾಲ್ತಿ ಅವರಿಗೆ ವಿಶ್ ಮಾಡಿದ್ದು, ಅದ್ಭುತವಾದ ಸಾಧನೆ. ಇಂತಹ ಮತ್ತಷ್ಟು ಸಾಧನೆಗಳು ಬರಲಿ ಎಂದು ಟ್ವೀಟ್ ಮಾಡಿದ್ದಾರೆ.
2016ರಲ್ಲಿ ಐಪಿಎಲ್ನಲ್ಲಿ ಪದಾರ್ಪಣೆ ಮಾಡಿದ್ದ ಚಹರ್ ತಾವು ಆಡಿದ್ದ ಎರಡು ಪಂದ್ಯಗಳಲ್ಲಿ ವಿಕೆಟ್ ಪಡೆದುಕೊಳ್ಳುವಲ್ಲಿ ವಿಫಲವಾಗಿದ್ದರು. ನಂತರದ ಆವೃತ್ತಿಯಲ್ಲಿ ಆಡಿರುವ ಮೂರು ಪಂದ್ಯಗಳಿಂದ ಕೇವಲ 1 ವಿಕೆಟ್ ಪಡೆದುಕೊಂಡಿದ್ದರು. 2018ರಲ್ಲಿ ಸಿಎಸ್ಕೆ ರಿಟೈನ್ ಮಾಡಿಕೊಂಡಿದ್ದು, ಈ ವೇಳೆ, 10 ವಿಕೆಟ್ ಪಡೆದು ಗಮನ ಸೆಳೆದಿದ್ದರು. 2019ರಲ್ಲಿ ಆಡಿರುವ 17 ಪಂದ್ಯಗಳಿಂದ 22 ವಿಕೆಟ್ ಪಡೆದುಕೊಂಡಿದ್ದರು. ಆದರೆ, ಕಳೆದ ವರ್ಷ ದುಬೈನಲ್ಲಿ ನಡೆದ ಐಪಿಎಲ್ನಲ್ಲಿ 12 ವಿಕೆಟ್ ಪಡೆದುಕೊಂಡು ವೈಫಲ್ಯ ಅನುಭವಿಸಿದ್ದರು. ಆದರೆ, ಇದೀಗ ಕಮ್ಬ್ಯಾಕ್ ಮಾಡಿರುವ ಅವರು ಉತ್ತಮ ಬೌಲಿಂಗ್ ಪ್ರದರ್ಶನ ನೀಡುತ್ತಿದ್ದಾರೆ.