ದಕ್ಷಿಣ ಆಫ್ರಿಕಾ ವಿರುದ್ಧ ನಡೆಯುತ್ತಿರುವ ಏಕದಿನ ಸರಣಿಯಲ್ಲೂ ಭಾರತಕ್ಕೆ ಗಾಯದ ಸಮಸ್ಯೆ ತಲೆದೋರಿದೆ. ಮೊದಲ ಏಕದಿನ ಪಂದ್ಯವನ್ನು ಸೋತಿರುವ ಟೀಂ ಇಂಡಿಯಾ 0-1 ಹಿನ್ನಡೆ ಅನುಭವಿಸಿದೆ. ಈ ನಡುವೆ ವೇಗಿ ದೀಪಕ್ ಚಹರ್ ಕಾಲು ನೋವಿಗೆ ಗುರಿಯಾಗಿದ್ದು, ಸರಣಿಯಿಂದಲೇ ಹೊರಬೀಳುವ ಸಾಧ್ಯತೆ ಇದೆ.
ಮೊದಲ ಏಕದಿನ ಪಂದ್ಯದಲ್ಲಿ ಆಡಿರಲಿಲ್ಲ. ಅಭ್ಯಾಸದ ವೇಳೆ ದೀಪಕ್ ಮೊಣಕಾಲು ನೋವಿಗೆ ತುತ್ತಾಗಿದ್ದಾರೆ. ಇದರಿಂದ ರಾಂಚಿಯಲ್ಲಿ ಇಂದು ನಡೆಯುವ ದಕ್ಷಿಣ ಆಫ್ರಿಕಾ ವಿರುದ್ಧದ 2 ನೇ ಏಕದಿನ ಪಂದ್ಯಕ್ಕೆ ಅಲಭ್ಯರಾಗಲಿದ್ದಾರೆ ಎಂದು ತಿಳಿದು ಬಂದಿದೆ.
ಇನ್ನು, ದೀಪಕ್ ಚಹರ್ ಟಿ-20 ವಿಶ್ವಕಪ್ ತಂಡದ ಮೀಸಲು ಆಟಗಾರರಲ್ಲಿ ಒಬ್ಬರಾಗಿದ್ದರು. ಇದೀಗ ಗಾಯಗೊಂಡಿದ್ದು, ಏಕದಿನವಲ್ಲದೇ, ವಿಶ್ವಕಪ್ ಮೀಸಲು ಪಡೆಯಿಂದಲೂ ಹೊರಬೀಳುವ ಸಾಧ್ಯತೆ ಇದೆ. ಮೊಹಮದ್ ಶಮಿ ಜೊತೆಗೆ ಆಸ್ಟ್ರೇಲಿಯಾಗೆ ಹಾರುವುದು ಅನುಮಾನವಿದೆ. ಎಡಗೈ ವೇಗಿ ಮುಖೇಶ್ ಚೌಧರಿ ಮತ್ತು ಚೇತನ್ ಸಕಾರಿಯಾ ಆಸ್ಟ್ರೇಲಿಯಾದಲ್ಲಿ ವಿಶ್ವಕಪ್ ನೆಟ್ ಬೌಲರ್‌ಗಳಾಗಿ ತಂಡವನ್ನು ಸೇರಿಕೊಂಡಿದ್ದಾರೆ.
ಓದಿ: ಟಿ20 ವಿಶ್ವಕಪ್: ಜಡೇಜಾ - ಬುಮ್ರಾ ಅನುಪಸ್ಥಿತಿ.. ಹೊಸ ಚಾಂಪಿಯನ್ಗಳಿಗೆ ಅವಕಾಶ ಎಂದ ರವಿಶಾಸ್ತ್ರಿ