ETV Bharat / sports

ಡೆಲ್ಲಿಗೆ ವಾರ್ನರ್​ ಬಲ, ಲಖನೌ ಮಣಿಸಿ ಗೆಲುವಿನ ಹಳಿಗೆ ಮರಳುವತ್ತ ಕ್ಯಾಪಿಟಲ್ಸ್ ಚಿತ್ತ

ಕೆ.ಎಲ್.ರಾಹುಲ್ ಮತ್ತು ರಿಷಭ್ ಪಂತ್ ಇಬ್ಬರು ಮ್ಯಾಚ್​ ವಿನ್ನರ್​ಗಳೇ. ತಮ್ಮದೇ ಆದ ಶೈಲಿಯಲ್ಲಿ ಬ್ಯಾಟಿಂಗ್ ಮಾಡಿ ಈಗಾಗಲೇ ತಮ್ಮ ಸಾಮರ್ಥ್ಯ ಸಾಬೀತುಪಡಿಸಿದ್ದಾರೆ. ಭಾರತ ಕ್ರಿಕೆಟ್‌ ತಂಡದ ಭವಿಷ್ಯದ ನಾಯಕರ ಪಟ್ಟಿಯಲ್ಲಿರುವ ಈ ಇಬ್ಬರು ಕ್ರಿಕೆಟಿಗರಿಗೆ ಪ್ರತಿಷ್ಠಿತ ಟಿ20 ಲೀಗ್​ನಲ್ಲಿ ತಂಡವನ್ನು ಮುನ್ನಡೆಸುವ ಅವಕಾಶ ಸಿಕ್ಕಿದ್ದು, ನಾಯಕತ್ವ ಕೌಶಲ್ಯಗಳನ್ನು ಪ್ರದರ್ಶಿಸಲು ಇಬ್ಬರಿಗೂ ಇದೊಂದು ಅತ್ಯುತ್ತಮ ವೇದಿಕೆ.

Lucknow Super Giants vs Delhi Capitals
ಡೆಲ್ಲಿ ಕ್ಯಾಪಿಟಲ್ಸ್ vs ಲಖನೌ ಸೂಪರ್ ಜೈಂಟ್ಸ್
author img

By

Published : Apr 7, 2022, 3:24 PM IST

ಮುಂಬೈ: ಭಾರತದ ಪ್ರತಿಭಾನ್ವಿತ ಕ್ರಿಕೆಟಿಗರು, ಭವಿಷ್ಯದ ನಾಯಕರೆಂದೇ ಗುರುತಿಸಿಕೊಂಡಿರುವ ಕೆ.ಎಲ್.ರಾಹುಲ್​ ಮತ್ತು ರಿಷಭ್​ ಪಂತ್ ನೇತೃತ್ವದ ಲಖನೌ ಸೂಪರ್​ ಜೈಂಟ್ಸ್​ ಮತ್ತು ಡೆಲ್ಲಿ ಕ್ಯಾಪಿಟಲ್ಸ್​ ತಂಡಗಳು ಗುರುವಾರದ ಐಪಿಎಲ್ ಪಂದ್ಯದಲ್ಲಿ ಮುಖಾಮುಖಿಯಾಗುತ್ತಿವೆ. ರಾಹುಲ್ ಮತ್ತು ಪಂತ್ ಇಬ್ಬರು ಮ್ಯಾಚ್​ ವಿನ್ನರ್​ಗಳೇ. ತಮ್ಮದೇ ಆದ ಶೈಲಿಯಲ್ಲಿ ಬ್ಯಾಟಿಂಗ್ ಮಾಡಿ ಈಗಾಗಲೇ ತಮ್ಮ ಸಾಮರ್ಥ್ಯ ಸಾಬೀತುಪಡಿಸಿದ್ದಾರೆ.

ಭವಿಷ್ಯದ ನಾಯಕರ ಪಟ್ಟಿಯಲ್ಲಿರುವ ಈ ಇಬ್ಬರು ಕ್ರಿಕೆಟಿಗರಿಗೆ ಪ್ರತಿಷ್ಠಿತ ಟಿ20 ಲೀಗ್​ನಲ್ಲಿ ತಂಡವನ್ನು ಮುನ್ನಡೆಸುವ ಅವಕಾಶ ಸಿಕ್ಕಿದೆ. ಹಾಗಾಗಿ, ತಮ್ಮ ನಿರ್ಧಾರ ತೆಗೆದುಕೊಳ್ಳುವುದು ಮತ್ತು ನಾಯಕತ್ವ ಕೌಶಲ್ಯಗಳನ್ನು ಪ್ರದರ್ಶಿಸಲು ಉಭಯತ್ರಯರಿಗೆ ಇದು ಅತ್ಯುತ್ತಮ ವೇದಿಕೆಯಾಗಿದೆ. 15ನೇ ಆವೃತ್ತಿಯಲ್ಲಿ ತಲಾ ಒಂದು ಜಯ ಮತ್ತು ಸೋಲು ಕಂಡಿರುವ ಡೆಲ್ಲಿ ಕ್ಯಾಪಿಟಲ್ಸ್​ಗೆ ಈ ಪಂದ್ಯದಲ್ಲಿ ವಾರ್ನರ್​ ಮತ್ತು ಎನ್ರಿಚ್​ ನಾರ್ಕಿಯಾ ಅವರ ಸೇರ್ಪಡೆ ಬಲ ತಂದರೆ, ಇತ್ತ ಬಲಿಷ್ಠ ಬ್ಯಾಟಿಂಗ್ ಬಲ ಹೊಂದಿರುವ ಲಖನೌ ತಂಡಕ್ಕೆ ಮಾರ್ಕಸ್ ಸ್ಟೋಯಿನಿಸ್​ ತಂಡಕ್ಕೆ ಸೇರುವ ಮೂಲಕ ಬೌಲಿಂಗ್ ಮತ್ತು ಬ್ಯಾಟಿಂಗ್ ವಿಭಾಗವನ್ನು ಬಲಿಷ್ಠಗೊಳಿಸಲಿದ್ದಾರೆ.

ಕಿವೀಸ್​ ವಿಕೆಟ್ ಕೀಪರ್ ಟಿಮ್ ಸೀಫರ್ಟ್​ ಅವರೂ ವಾರ್ನರ್​ಗೂ, ರೋವ್ಮನ್​ ಪೊವೆಲ್ ಅಥವಾ ಮುಸ್ತಫಿಜುರ್​ ರೆಹಮಾನ್​ ಇಬ್ಬರಲ್ಲಿ ಒಬ್ಬರು ನಾರ್ಕಿಯಾಗೆ ಅವಕಾಶ ಬಿಟ್ಟುಕೊಡಬೇಕಾಗುತ್ತದೆ. ರಿಟೈನ್ ಮಾಡಿಕೊಂಡಿರುವ ಆಲ್​ರೌಂಡರ್​ ಸ್ಟೋಯಿನಿಸ್​ ಖಂಡಿತ ಆಡುವ 11ರ ಬಳಗದಲ್ಲಿರಬೇಕಾಗಿದೆ. ಹಾಗಾಗಿ ಅವರಿಗೆ ಕಳೆದ ಪಂದ್ಯದಲ್ಲಿ ಆಡಿದ್ದ ಆ್ಯಂಡ್ರೂ ಟೈ ಅಥವಾ ಎವಿನ್ ಲೂಯಿಸ್​ ಹೊರಗುಳಿಯಬೇಕಾಗುತ್ತದೆ. ಸಿಎಸ್​ಕೆ ವಿರುದ್ಧ ನಡೆದ ಪಂದ್ಯದಲ್ಲಿ ಆಕರ್ಷಕ ಅರ್ಧಶತಕ ಸಿಡಿಸಿ ಗೆಲುವಿನಲ್ಲಿ ಲೂಯಿಸ್ ಪ್ರಮುಖ ಪಾತ್ರವಹಿಸಿರುವುದರಿಂದ ಅವರನ್ನು ಕೈಬಿಡುವ ಸಾಧ್ಯತೆ ಕಡಿಮೆಯಿದೆ.

ಮನೀಶ್ ಪಾಂಡೆ ಕಳೆದ 3 ಪಂದ್ಯಗಳಲ್ಲೂ ನಿರೀಕ್ಷಿತ ಪ್ರದರ್ಶನ ತೋರಿಲ್ಲ. ಹಾಗಾಗಿ ಈ ಪಂದ್ಯದಲ್ಲಿ ಅವರಿಗೆ ಅಂತಿಮ ಅವಕಾಶ ನೀಡಬಹುದು. ಈಗಾಗಲೇ ಗಂಭೀರ್​ ತಮ್ಮ ಆಟಗಾರರ ಮೇಲೆ ನಂಬಿಕೆಯಿದೆ ಎಂದು ತಿಳಿಸಿರುವುದರಿಂದ ಅವರಿಗೆ ಮತ್ತೊಂದು ಅವಕಾಶ ಸಿಗುವ ಸಾಧ್ಯತೆಯಿದೆ. ಆದರೆ ಲಖನೌ ತಂಡದಲ್ಲಿ ಹೋಲ್ಡರ್​ಗೆ ಅವಕಾಶ ಸಿಗಬಹುದೇ ಎನ್ನುವುದು ಇನ್ನೂ ಖಚಿತವಾಗಿಲ್ಲ.

ಆದರೆ ತಂಡದಲ್ಲಿ ಮಾರ್ಕ್​ವುಡ್​ ತಂಡದಿಂದ ಹೊರಬಿದ್ದಿರುವುದರಿಂದ ಹೋಲ್ಡರ್​ ಅನಿವಾರ್ಯವಾಗಿ ಆಡಲೇಬೇಕಿದೆ. ಏಕೆಂದರೆ, ಡೆಲ್ಲಿ ತಂಡದಲ್ಲಿ ಪೃಥ್ವಿ ಶಾ, ವಾರ್ನರ್, ಪಂತ್ ಅಂತಹ ಸ್ಫೋಟಕ ಬ್ಯಾಟರ್​ಗಳನ್ನು ತಡೆಯಲು ಹಿರಿಯ ಬೌಲರ್​ಗಳ ಅನುಭವ ಅಗತ್ಯವಿದೆ. ಡೆಲ್ಲಿ ಕೂಡ ಮಂದೀಪ್ ಸಿಂಗ್​ಗೆ ವಿಶ್ರಾಂತಿ ನೀಡಿ ಯುವ ಆಟಗಾರರಾದ ಕೆಎಸ್ ಭರತ್​, ಯಶ್ ಧುಲ್ ಅಥವಾ ಸರ್ಫರಾಜ್​ ಖಾನ್​ಗೆ ಅವಕಾಶ ನೀಡುವ ಸಾಧ್ಯತೆಯಿದೆ.

ತಂಡಗಳು ಇಂತಿವೆ: ಲಖನೌ ಸೂಪರ್ ಜೈಂಟ್ಸ್- ಕೆ.ಎಲ್ ರಾಹುಲ್ (ನಾಯಕ), ಮನನ್ ವೋಹ್ರಾ, ಎವಿನ್ ಲೂಯಿಸ್, ಮನೀಶ್ ಪಾಂಡೆ, ಕ್ವಿಂಟನ್ ಡಿ ಕಾಕ್, ರವಿ ಬಿಷ್ಣೋಯ್, ದುಷ್ಮಂತ ಚಮೀರಾ, ಶಹಬಾಜ್ ನದೀಮ್, ಮೊಹ್ಸಿನ್ ಖಾನ್, ಮಯಾಂಕ್ ಯಾದವ್, ಅಂಕಿತ್ ರಾಜ್‌ಪೂತ್, ಅವೇಶ್ ಖಾನ್, ಆಂಡ್ರ್ಯೂ ಟೈ, ಮಾರ್ಕಸ್ ಸ್ಟೋಯಿನಿಸ್, ಕೈಲ್ ಮೇಯರ್ಸ್, ಕರಣ್ ಶರ್ಮಾ, ಕೃಷ್ಣಪ್ಪ ಗೌತಮ್, ಆಯುಷ್ ಬಡೋನಿ, ದೀಪಕ್ ಹೂಡಾ, ಕೃನಾಲ್ ಪಾಂಡ್ಯ. ಜೇಸನ್ ಹೋಲ್ಡರ್.

ದೆಹಲಿ ಕ್ಯಾಪಿಟಲ್ಸ್: ರಿಷಬ್ ಪಂತ್ (ನಾಯಕ), ಅಶ್ವಿನ್ ಹೆಬ್ಬಾರ್, ಡೇವಿಡ್ ವಾರ್ನರ್, ಮನ್‌ದೀಪ್ ಸಿಂಗ್, ಪೃಥ್ವಿ ಶಾ, ರೋವ್‌ಮನ್ ಪೊವೆಲ್, ಅನ್ರಿಚ್ ನಾರ್ಕಿಯಾ, ಚೇತನ್ ಸಕರಿಯಾ, ಖಲೀಲ್ ಅಹ್ಮದ್, ಕುಲದೀಪ್ ಯಾದವ್, ಲುಂಗಿ ಎನ್‌ಗಿಡಿ, ಮುಸ್ತಫಿಜುರ್ ರೆಹಮಾನ್, ಶಾರ್ದೂಲ್ ಠಾಕೂರ್, ಕಮಲೇಶ್ ನಾಗರಕೋಟಿ, ಅಕ್ಷರ್ ಪಟೇಲ್ , ಲಲಿತ್ ಯಾದವ್, ಮಿಚೆಲ್ ಮಾರ್ಷ್, ಪ್ರವೀಣ್ ದುಬೆ, ರಿಪಾಲ್ ಪಟೇಲ್, ಸರ್ಫರಾಜ್ ಖಾನ್, ವಿಕ್ಕಿ ಓಸ್ಟ್ವಾಲ್, ಯಶ್ ಧುಲ್, ಕೆಎಸ್ ಭರತ್ ಮತ್ತು ಟಿಮ್ ಸೀಫರ್ಟ್

ಇದನ್ನೂ ಓದಿ:ಅಯ್ಯರ್​-ಕಮಿನ್ಸ್​ ಭರ್ಜರಿ ಆಟ.. ಮುಂಬೈ ಇಂಡಿಯನ್ಸ್​ಗೆ ಸತತ 3ನೇ ಸೋಲು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.