ಹೈದರಾಬಾದ್: ಪ್ರಸಕ್ತ ಸಾಲಿನ ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಸನ್ರೈಸರ್ಸ್ ಹೈದರಾಬಾದ್ ತಂಡ ಕಳಪೆ ಪ್ರದರ್ಶನ ನೀಡಿ, ಇನ್ನಿಲ್ಲದ ಟೀಕೆಗೊಳಗಾಯಿತು. ಅದೇ ಕಾರಣಕ್ಕಾಗಿ ಡೇವಿಡ್ ವಾರ್ನರ್ ತಮ್ಮ ನಾಯಕತ್ವ ಸ್ಥಾನ ಬಿಟ್ಟುಕೊಡಬೇಕಾದ ಪರಿಸ್ಥಿತಿ ಸಹ ನಿರ್ಮಾಣಗೊಂಡಿತ್ತು.
ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಇದೀಗ ಟೀಂ ಇಂಡಿಯಾ ಮಾಜಿ ಪ್ಲೇಯರ್ ಇರ್ಫಾನ್ ಪಠಾಣ್ ಮಾತನಾಡಿದ್ದಾರೆ. ಐಪಿಎಲ್ನಲ್ಲಿ ಸನ್ರೈಸರ್ಸ್ ಹೈದರಾಬಾದ್ ತಂಡದ ಕಳಪೆ ಆಟಕ್ಕೆ ಡೇವಿಡ್ ವಾರ್ನರ್ ಅವರ ನಾಯಕತ್ವ ಮುಖ್ಯ ಕಾರಣವಾಗಿದೆ ಎಂದಿದ್ದಾರೆ. ಪಂದ್ಯದ ವೇಳೆ ಹಾಗೂ ಮುಕ್ತಾಯದ ನಂತರ ತಂಡದ ಪ್ಲೇಯರ್ಸ್ಗಳಲ್ಲಿ ಯಾವುದೇ ರೀತಿಯ ಸ್ಪೂರ್ತಿದಾಯಕ ಮಾತುಗಳನ್ನಾಡದೇ ಇರುತ್ತಿದ್ದರು ಎಂದು ಪಠಾಣ್ ತಿಳಿಸಿದ್ದಾರೆ.
ಇದನ್ನೂ ಓದಿ: ಹೈದರಾಬಾದ್ ತಂಡದೊಂದಗಿನ ವಾರ್ನರ್ ಸಂಬಂಧ ಈ ವರ್ಷವೇ ಕೊನೆ: ಭವಿಷ್ಯ ನುಡಿದ ಸ್ಟಾರ್ ವೇಗಿ
ವಾರ್ನರ್ ನಾಯಕತ್ವದಲ್ಲಿ ಹೈದರಾಬಾದ್ ಆರು ಪಂದ್ಯಗಳಲ್ಲಿ ಐದರಲ್ಲಿ ಸೋಲು ಕಂಡಿತ್ತು. ಇದಾದ ಬಳಿಕ ಎಸ್ಆಆರ್ಹೆಚ್ ಕೇನ್ ವಿಲಿಯಮ್ಸನ್ಗೆ ನಾಯಕತ್ವ ಜವಾಬ್ದಾರಿ ನೀಡಿತು. ಇದರ ಹೊರತಾಗಿ ಕೂಡ ರಾಜಸ್ಥಾನ ವಿರುದ್ಧದ ಪಂದ್ಯದಲ್ಲಿ ಸೋಲು ಕಂಡಿತ್ತು. ಇದರ ಜತೆಗೆ ಅಂಕ ಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿ ಉಳಿದುಕೊಂಡಿತು.