ETV Bharat / sports

ಅರೆರೆ ಏನಿದು? ಕ್ರಿಕೆಟಿಗ ಡೇವಿಡ್​ ವಾರ್ನರ್ ಹೊಸ ಅವತಾರ ನೋಡಿ: ವಿಡಿಯೋ

author img

By

Published : Feb 26, 2023, 10:58 AM IST

ಸಿನಿಮಾ ಕ್ರೇಜ್​ ಇರುವ ಆಸ್ಟ್ರೇಲಿಯಾ ಕ್ರಿಕೆಟಿಗ ಡೇವಿಡ್​ ವಾರ್ನರ್​ ಐ ಸಿನಿಮಾದ ರೀಲ್ಸ್​ ಮಾಡಿ ಗಮನ ಸೆಳೆದಿದ್ದಾರೆ.

David Warner In i film Vikram Wrestler Avatar
ಐ ಅವತಾರದಲ್ಲಿ ಡೇವಿಡ್​ ವಾರ್ನರ್

ಆಸೀಸ್ ತಂಡದ ಆರಂಭಿಕ ಬ್ಯಾಟರ್ ಡೇವಿಡ್ ವಾರ್ನರ್ ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾಗಿರುತ್ತಾರೆ. ಇನ್​ಸ್ಟಾಗ್ರಾಮ್​ನಲ್ಲಿ ಆಗಾಗ ರೀಲ್ಸ್​​ಗಳನ್ನು ಪೋಸ್ಟ್‌ ಮಾಡುತ್ತಾರೆ. ಭಾರತ ಸಿನಿಮಾ ರಂಗದ ಮೇಲೆ ಇವರಿಗೆ ವಿಶೇಷ ಆಸಕ್ತಿ ಇದೆ. ಟಿಕ್​ಟಾಕ್​ ಆ್ಯಪ್ ಪ್ರಚಲಿತದಲ್ಲಿದ್ದಾಗ ಅನೇಕ ಸಿನಿಮಾ ಹಾಡುಗಳಿಗೆ ನೃತ್ಯ ಮಾಡಿ ತಮ್ಮ ಅಭಿಮಾನಿಗಳಿಗೆ ಮನರಂಜನೆ ನೀಡುತ್ತಿದ್ದರು.

ಈಗ ಹೊಸ ರೀತಿಯ ವಿಡಿಯೋಗಳನ್ನು ಇನ್​ಸ್ಟಾಗ್ರಾಮ್​ನಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಭಾರತೀಯ ಇತ್ತೀಚಿನ ಸಿನಿಮಾಗಳ ತುಣುಕುಗಳಿಗೆ ತಮ್ಮ ಮುಖವನ್ನು ಮಾರ್ಫ್ ಮಾಡಿರುವ ವಿಡಿಯೋ ಇದು. ಕೆಲದಿನಗಳ ಹಿಂದೆ ಶಾರುಖ್​ ಖಾನ್​ ಅಭಿನಯದ ಪಠಾಣ್​ ಸಿನಿಮಾದ ಟ್ರೇಲರ್​ ಬಿಡುಗಡೆ ಆದಾಗ ಶಾರುಖ್​ ಮುಖಕ್ಕೆ ತಮ್ಮ ಮುಖ ಮಾರ್ಫ್​ ಮಾಡಿ ವಿಡಿಯೋ ಮಾಡಿದ್ದರು.

ಇದಕ್ಕೂ ಮೊದಲು ತೆಲುಕಿಗ ಪುಷ್ಪ ದಿ ರೈಸ್ ಸಿನಿಮಾದ ನಟ ವಿಜಯ್​ ದೇವರಕೊಂಡ ಪಾತ್ರಕ್ಕೆ ಇದೇ ರೀತಿಯ ವಿಡಿಯೋ ಮಾಡಿದ್ದರು. ಈಗ ತಮಿಳು ಚಲನಚಿತ್ರ ನಿರ್ಮಾಪಕ ಎಸ್.ಶಂಕರ್ ಅವರ ಐ ಸಿನಿಮಾದ ಫೈಟ್ ಸೀಕ್ವೆಲ್​ಗೆ ಮುಖವಾಗಿದ್ದಾರೆ. ವಿಡಿಯೋ ಹಂಚಿಕೊಂಡು, "ನನ್ನ ಇಷ್ಟದ ಸಿನಿಮಾಗಳಲ್ಲಿ ಇದೂ ಒಂದು. ಸಿನಿಮಾ ಗುರುತಿಸಿ" ಎಂದು ಬರೆದಿದ್ದಾರೆ."

ಇದಕ್ಕೆ ಕ್ರಿಕೆಟ್​, ಸಿನಿಮಾ ಅಭಿಮಾನಿಗಳು ಪ್ರತಿಕ್ರಿಯಿಸುತ್ತಿದ್ದಾರೆ. 5 ಲಕ್ಷಕ್ಕೂ ಹೆಚ್ಚು ಜನ ಲೈಕ್ ಮಾಡಿದ್ದಾರೆ. 14 ಸಾವಿರ ಕಮೆಂಟ್​ಗಳು ಬಂದಿವೆ. ಒಳ್ಳೆಯ ಸಿನಿಮಾ ನೋಡಿ ಒಮ್ಮೆ ಎಂದು ಹಲವಾರು ಅಭಿಮಾನಿಗಳು ಬರೆದಿದ್ದಾರೆ. ನಟ ವಿಕ್ರಮ್​ ಅಭಿನಯದ ಐ ಸಿನಿಮಾ 2015ರಲ್ಲಿ ಬಿಡುಗಡೆಯಾಗಿ ಉತ್ತಮ ವಿಮರ್ಶೆ ಗಳಿಸಿದೆ. ಚಿತ್ರಕ್ಕೆ ಐಮ್​ಡಿಬಿ 7.4ರ ರೇಟಿಂಗ್ ನೀಡಿದೆ. ಪಿಲ್ಮ್ ಫೇರ್​ ಅವಾರ್ಡ್​ಗೂ ಪಾತ್ರವಾಗಿತ್ತು.

ತವರಿಗೆ ಮರಳಿದ ವಾರ್ನರ್​: ಭಾರತ-ಆಸ್ಟ್ರೇಲಿಯಾ ನಡುವೆ ಬಾರ್ಡರ್​-ಗವಾಸ್ಕರ್​ ಟ್ರೋಫಿ ಪಂದ್ಯ ಟೆಸ್ಟ್‌ ನಡೆಯುತ್ತಿದೆ. ನಾಗ್ಪುರ ಮತ್ತು ದೆಹಲಿಯಲ್ಲಿ ಪಂದ್ಯಗಳು ನಡೆದಿದ್ದು, ಮೂರನೇ ಪಂದ್ಯ ಮಾರ್ಚ್​ 1 ರಿಂದ ಇಂದೋರ್​ನ ಹೋಳ್ಕರ್​ ಸ್ಟೇಡಿಯಂನಲ್ಲಿ ನಡೆಯಲಿದೆ. ದೆಹಲಿಯಲ್ಲಿ ಎರಡನೇ ಟೆಸ್ಟ್​ ಪಂದ್ಯದ ಮೊದಲ ಇನ್ನಿಂಗ್ಸ್​ ಆಡುವಾಗ ಮೊಹಮ್ಮದ್​ ಸಿರಾಜ್​ ಎಸೆತದಲ್ಲಿ ಮೊಣಕೈಗೆ ಗಾಯವಾಗಿ ವಾರ್ನರ್‌ ಅರ್ಧ ಪಂದ್ಯದಿಂದಲೇ ತವರಿಗೆ ಮರಳಿದ್ದರು. ಅವರ ಜಾಗದಲ್ಲಿ ಮ್ಯಾಥ್ಯೂ ರೆನ್​ ಶಾ ಕಣಕ್ಕಿಳಿದಿದ್ದರು.

ಫಾರ್ಮ್​ ಬಗ್ಗೆ ಟೀಕೆ: ಭಾರತ ಪ್ರವಾಸ ಸರಣಿಯ ಮೂರು ಟೆಸ್ಟ್‌ ಇನ್ನಿಂಗ್ಸ್​ನಲ್ಲಿ ವಾರ್ನರ್ ಕೇವಲ 1, 10 ಮತ್ತು 15 ರನ್ ಗಳಿಸಿದ್ದಾರೆ. ಇದರಿಂದ ಮತ್ತೆ 36 ವರ್ಷದ ಆಟಗಾರನ ವಿರುದ್ಧ ಟೀಕೆಗಳ ಸುರಿಮಳೆಯಾಗಿದೆ. ಈ ಬಗ್ಗೆ ವಾರ್ನರ್​ ಮಾತನಾಡಿದ್ದು, ನಾನು ತಂಡಕ್ಕೆ ಅರ್ಹನಲ್ಲ ಎನಿಸಿದರೆ ಆಯ್ಕೆಗಾರರು ಕೈ ಬಿಡಲಿ. ಆದರೆ ಆಸ್ಟ್ರೇಲಿಯಾಕ್ಕಾಗಿ ಇನ್ನಷ್ಟೂ ರನ್​ ಗಳಿಸುವ ಆಸೆ ಇದೆ ಎಂದು ಹೇಳಿಕೊಂಡಿದ್ದಾರೆ.

ಆಸ್ಟ್ರೇಲಿಯಾದ ಇನ್ನೊಬ್ಬ ಆರಂಭಿಕ ಉಸ್ಮಾನ್​ ಖವಾಜಾ ಅವರು ಕೇವಲ ಮೂರು ಇನ್ನಿಂಗ್ಸ್​ನಿಂದ ವಾರ್ನರ್​ ಅವರ ಬ್ಯಾಟಿಂಗ್​ ಅಳೆಯಲಾಗದು. ಅವರ ಅನುಭವ ತಂಡಕ್ಕೆ ಅಗತ್ಯವಿದೆ. ಅವರ ಬ್ಯಾಟ್​ನಿಂದ ಇನ್ನಷ್ಟು ರನ್‌ಗಳು ಬರಲಿವೆ ಎಂದು ಎರಡನೇ ಟೆಸ್ಟ್​ ನಂತರ ಅಭಿಪ್ರಾಯ ವ್ಯಕ್ತಪಡಿಸಿದ್ದರು.

ಇದನ್ನೂ ಓದಿ: ಸಚಿನ್‌ ಡಬಲ್‌ ಸೆಂಚುರಿಗೆ 13 ವರ್ಷ: ಭಾರತದ 'ದ್ವಿಶತಕ' ವೀರರು ಇವರು..

ETV Bharat Logo

Copyright © 2024 Ushodaya Enterprises Pvt. Ltd., All Rights Reserved.