ETV Bharat / sports

Commonwealth Games ಟಿ -20 ಕ್ರಿಕೆಟ್​​: ಟಾಸ್​ ಗೆದ್ದು ಬ್ಯಾಟಿಂಗ್​ ಆಯ್ದುಕೊಂಡ ಟೀಂ ಇಂಡಿಯಾ - ಈಟಿವಿ ಭಾರತ ಕನ್ನಡ

ಕಾಮನ್​ವೆಲ್ತ್​ ಗೆಮ್ಸ್​ನ ಟಿ-20 ಕ್ರಿಕೆಟ್ ಪಂದ್ಯದಲ್ಲಿ ಭಾರತ - ಆಸ್ಟ್ರೇಲಿಯಾ ಕಣಕ್ಕಿಳಿದಿವೆ. ಟಾಸ್​ ಗೆದ್ದಿರುವ ಹರ್ಮನ್​ಪ್ರೀತ್ ಕೌರ್ ಪಡೆ ಬ್ಯಾಟಿಂಗ್ ಮಾಡುವ ನಿರ್ಧಾರ ಕೈಗೊಂಡಿದೆ.

India vs Australia cricket match
India vs Australia cricket match
author img

By

Published : Jul 29, 2022, 3:44 PM IST

ಬರ್ಮಿಂಗ್​ಹ್ಯಾಮ್​: ಬರೋಬ್ಬರಿ 24 ವರ್ಷಗಳ ಬಳಿಕ ಕಾಮನ್​ವೆಲ್ತ್​ ಗೆಮ್ಸ್​​ನಲ್ಲಿ ಕ್ರಿಕೆಟ್ ಮರುಸೇರ್ಪಡೆಯಾಗಿದ್ದು, ಮೊದಲ ಪಂದ್ಯದಲ್ಲಿ ಬಲಿಷ್ಠ ಆಸ್ಟ್ರೇಲಿಯಾ ಸವಾಲು ಎದುರಿಸಲು ಮಹಿಳಾ ಪಡೆ ಕಣಕ್ಕಿಳಿದಿದ್ದು, ಟಾಸ್​ ಗೆದ್ದು ಬ್ಯಾಟಿಂಗ್ ಆಯ್ದುಕೊಂಡಿದೆ. ಬರ್ಮಿಂಗ್​ಹ್ಯಾಮ್​​ನ ಎಡ್ಜ್​ಬಾಸ್ಟನ್​ ಮೈದಾನದಲ್ಲಿ ಉಭಯ ತಂಡಗಳ ಮಧ್ಯೆ ಮೊದಲ ಪಂದ್ಯ ಆರಂಭಗೊಂಡಿದ್ದು, ಹರ್ಮಿನ್ ಪ್ರೀತ್ ಕೌರ್ ಬಳಗ ಗೆಲುವಿನೊಂದಿಗೆ ಶುಭಾರಂಭ ಮಾಡುವ ಇರಾದೆಯಲ್ಲಿದೆ.

ಟೀಂ ಇಂಡಿಯಾ: ಸ್ಮೃತಿ ಮಂಧಾನ, ಶಫಾಲಿ ವರ್ಮಾ, ಯಾಸ್ತಿಕಾ ಭಾಟಿಯಾ (ವಿ.ಕೀ), ಜೆಮಿಮಾ ರೊಡ್ರಿಗಸ್, ಹರ್ಮನ್‌ಪ್ರೀತ್ ಕೌರ್ (ಕ್ಯಾಪ್ಟನ್​), ಹರ್ಲೀನ್ ಡಿಯೋಲ್, ದೀಪ್ತಿ ಶರ್ಮಾ, ರಾಧಾ ಯಾದವ್, ರಾಜೇಶ್ವರಿ ಗಾಯಕ್ವಾಡ್, ಮೇಘನಾ ಸಿಂಗ್, ರೇಣುಕಾ ಸಿಂಗ್

ಕಾಮನ್​ವೆಲ್ತ್​ ಗೆಮ್ಸ್​​ನಲ್ಲಿ ಟೀಂ ಇಂಡಿಯಾ
ಕಾಮನ್​ವೆಲ್ತ್​ ಗೆಮ್ಸ್​​ನಲ್ಲಿ ಟೀಂ ಇಂಡಿಯಾ

ಆಸ್ಟ್ರೇಲಿಯಾ ತಂಡ: ಅಲಿಸ್ಸಾ ಹೀಲಿ (ವಿ.ಕೀ), ಬೆತ್ ಮೂನಿ, ಮೆಗ್ ಲ್ಯಾನಿಂಗ್ (ಕ್ಯಾಪ್ಟನ್​), ತಹ್ಲಿಯಾ ಮೆಕ್‌ಗ್ರಾತ್, ರಾಚೆಲ್ ಹೇನ್ಸ್, ಆಶ್ಲೀ ಗಾರ್ಡ್ನರ್, ಗ್ರೇಸ್ ಹ್ಯಾರಿಸ್, ಜೆಸ್ ಜೊನಾಸೆನ್, ಅಲಾನಾ ಕಿಂಗ್, ಮೇಗನ್ ಶುಟ್, ಡಾರ್ಸಿ ಬ್ರೌನ್

ಶ್ರೀಲಂಕಾ ವಿರುದ್ಧ ಇತ್ತೀಚೆಗೆ ಮುಕ್ತಾಯಗೊಂಡ ಟಿ-20 ಸರಣಿಯಲ್ಲಿ ಟೀಂ ಇಂಡಿಯಾ ಗೆಲುವು ದಾಖಲು ಮಾಡಿದ್ದು, ಅದೇ ಆತ್ಮವಿಶ್ವಾಸದೊಂದಿಗೆ ಇಂದು ಕಣಕ್ಕಿಳಿದಿದೆ. ಈ ಪಂದ್ಯದಲ್ಲಿ ಬಲಿಷ್ಠ ಆಸ್ಟ್ರೇಲಿಯಾ ವಿರುದ್ಧ ಗೆಲ್ಲುವ ಲೆಕ್ಕಾಚಾರ ಹಾಕಿಕೊಂಡಿದೆ. ಉಭಯ ತಂಡಗಳು ಇಲ್ಲಿಯವರೆಗೆ 22 ಪಂದ್ಯಗಳಲ್ಲಿ ಮುಖಾಮುಖಿಯಾಗಿದ್ದು, ಆಸ್ಟ್ರೇಲಿಯಾ 16 ಹಾಗೂ ಭಾರತ 6 ಪಂದ್ಯಗಳಲ್ಲಿ ಗೆದ್ದಿದೆ.

ಇದನ್ನೂ ಓದಿರಿ: IND vs WI T20I: ಶುಭಾರಂಭದ ತವಕದಲ್ಲಿ ರೋಹಿತ್ ಬಳಗ..ಯಾರಿಗೆಲ್ಲ ಚಾನ್ಸ್​?

ETV Bharat Logo

Copyright © 2025 Ushodaya Enterprises Pvt. Ltd., All Rights Reserved.