ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‌ಕೆ) ವೇಗಿ ತುಷಾರ್ ದೇಶಪಾಂಡೆ ಸೋಮವಾರ (ಜೂನ್ 12) ತನ್ನ ಬಾಲ್ಯದ ಗೆಳತಿ ನಭಾ ಗಡ್ಡಮ್ವಾರ್ ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಕ್ರಿಕೆಟಿಗ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಖುಷಿ ಸುದ್ದಿಯನ್ನು ಪ್ರಕಟಿಸಿದ್ದಾರೆ.
ಚೆನ್ನೈ ಸೂಪರ್ ಕಿಂಗ್ಸ್ ತಂಡದ ಸಹ ಆಟಗಾರ ಶಿವಂ ದುಬೆ ನಿಶ್ಚಿತಾರ್ಥ ಸಮಾರಂಭದಲ್ಲಿ ಭಾಗವಹಿಸಿದ್ದರು. ತುಷಾರ್ ದೇಶಪಾಂಡೆಗೆ ಸಾಮಾಜಿಕ ಮಾಧ್ಯಮದಲ್ಲಿ ಅಭಿನಂದನಾ ಸಂದೇಶವನ್ನು ಪೋಸ್ಟ್ ಮಾಡಿದ್ದಾರೆ. ಇನ್‌ಸ್ಟಾಗ್ರಾಮ್ ಪೋಸ್ಟ್ ಮೂಲಕ ನಭಾ ತುಷಾರ್ ಅವರ ಶಾಲಾ ಸಹಪಾಠಿಯಾಗಿದ್ದರು. ಇದೀಗ ಈ ಜೋಡಿ ಮದುವೆಗೆ ಸಿದ್ಧರಾಗಿದ್ದಾರೆ.
"ಅವಳು ನನಗೆ ಶಾಲಾ ದಿನಗಳ ಕ್ರಶ್ ಆಗಿದ್ದು ಈಗ ಬಡ್ತಿ ಪಡೆದು Fiance ಆಗಿದ್ದಾಳೆ! #onelove #engaged #dreamscometrue," ತುಷಾರ್ ಎಂದು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ. ಇದಕ್ಕೆ ಕ್ರಿಕೆಟಿಗರು ಕಾಮೆಂಟ್ ಮಾಡಿದ್ದಾರೆ. "ಇಬ್ಬರಿಗೂ ಅಭಿನಂದನೆಗಳು" ಎಂದು ಸೂರ್ಯಕುಮಾರ್ ಯಾದವ್ ಶುಭಕೋರಿದ್ದಾರೆ.
ಸಿಎಸ್‌ಕೆ ತಂಡದ ಸಹ ಆಟಗಾರ ರುತುರಾಜ್ ಗಾಯಕ್ವಾಡ್ ವೈವಾಹಿಕ ಕ್ಲಬ್ ಸ್ವಾಗತ ಎಂಬ ರೀತಿಯಲ್ಲಿ ಬರೆದಿದ್ದಾರೆ. "ಅಭಿನಂದನೆಗಳು bhauuuuuuu, ಕ್ಲಬ್ಗೆ ಸ್ವಾಗತ" ಎಂದಿದ್ದಾರೆ. ರುತುರಾಜ್ ಗಾಯಕ್ವಾಡ್ ಅವರು ತಮ್ಮ ಕ್ರಿಕೆಟರ್ ಗೆಳತಿ ಉತ್ಕರ್ಷ ಪವಾರ್ ಅವರನ್ನು ಇತ್ತೀಚೆಗೆ ವಿವಾಹವಾಗಿದ್ದರು.
ನಭಾ ಗಡ್ಡಮ್ವಾರ್ ಚಿತ್ರಕಲಾವಿದೆ. ಅವರ ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಅವರು ಹಂಚಿಕೊಂಡಿರುವ ಹಳೆಯ ಫೋಟೋಗಳಿವೆ. ಇದು ಬಿಟ್ಟು ಅವರ ಇತರ ಆಸಕ್ತಿಗಳ ಬಗ್ಗೆ ಮಾಹಿತಿ ಇಲ್ಲ. ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನ 2023 ರ ಆವೃತ್ತಿಯಲ್ಲಿ ಅಂತಿಮವಾಗಿ ಚಾಂಪಿಯನ್ ಸಿಎಸ್‌ಕೆಗಾಗಿ ತುಷಾರ್ ದೇಶಪಾಂಡೆ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಆಗಿದ್ದರು. ಅವರು ಹಳದಿ ಜರ್ಸಿಯಲ್ಲಿ ಬಹುತೇಕ ಎಲ್ಲ ಪಂದ್ಯಗಳನ್ನು ಆಡಿದ್ದಾರೆ.
ತುಷಾರ್ ದೇಶಪಾಂಡೆ ಅಂತಾರಾಷ್ಟ್ರೀಯ ತಂಡಕ್ಕೆ ಪಾದಾರ್ಪಣೆ ಮಾಡಿಲ್ಲ. ತುಷಾರ್ 2016ರಲ್ಲಿ ಎಫ್‌ಸಿ ಪಾದಾರ್ಪಣೆ ಮಾಡಿದರು ಮತ್ತು ದೇಶೀಯ ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ನೀಡಿದ್ದಾರೆ. ಮುಂಬೈ ಮೂಲದ ಆಟಗಾರ ಮೊದಲು ಡೆಲ್ಲಿ ಕ್ಯಾಪಿಟಲ್ಸ್ ಪ್ರತಿನಿಧಿಸಿದರು. 2020ರಲ್ಲಿ ಅವರು ಡಿಸಿ ತಂಡವನ್ನು ಸೇರಿಕೊಂಡ ಅವರು 5 ಪಂದ್ಯಗಳನ್ನು ಆಡಿದ್ದರು. ಐಪಿಎಲ್ 2022ರ ಮೆಗಾ ಹರಾಜಿನಲ್ಲಿ ಮುಂಬೈ ಹುಡುಗ ತುಷಾರ್ ದೇಶಪಾಂಡೆ ಅವರನ್ನು ಚೆನ್ನೈ ಸೂಪರ್ ಕಿಂಗ್ಸ್ ಮೂಲ ಬೆಲೆ 20 ಲಕ್ಷಕ್ಕೆ ಆಯ್ಕೆ ಮಾಡಿದೆ. 2022ರಲ್ಲಿ ಚೆನ್ನೈನಲ್ಲಿ ಕೇಲವ ಎರಡು ಪಂದ್ಯಗಳನ್ನು ತುಷಾರ್ ಆಡಿದ್ದಾರೆ.
2023 ಭರ್ಜರಿ ಪ್ರದರ್ಶನ: 28 ವರ್ಷದ ತುಷಾರ್ ಈ ವರ್ಷ ಚೆನ್ನೈ ಸೂಪರ್ ಕಿಂಗ್ಸ್ ತಂಡದಲ್ಲಿ ಎಲ್ಲ ಪಂದ್ಯಗಳನ್ನು ಆಡಿದ್ದಾರೆ. 16 ಪಂದ್ಯದಲ್ಲಿ 564 ರನ್ ಬಿಟ್ಟುಕೊಟ್ಟಿದ್ದು 21 ವಿಕೆಟ್ ಪಡೆದು 26.86ರ ಸರಾಸರಿಯಲ್ಲಿ ಬೌಲಿಂಗ್ ಮಾಡಿದ್ದಾರೆ.
ಇದನ್ನೂ ಓದಿ: Sourav Ganguly: ವಿರಾಟ್ ಕೊಹ್ಲಿ ಟೆಸ್ಟ್ ನಾಯಕತ್ವ ಯಾಕೆ ಬಿಟ್ರು ಎಂಬುದೇ ಪ್ರಶ್ನೆ: ಸೌರವ್ ಗಂಗೂಲಿ