ETV Bharat / sports

ಐಪಿಎಲ್ 2023: ಚೆನ್ನೈ ತಂಡಕ್ಕೆ ಮಹೇಂದ್ರ ಸಿಂಗ್​ ದೋನಿ ನಾಯಕನಾಗಿ ಘೋಷಣೆ

author img

By

Published : Nov 16, 2022, 4:53 PM IST

2023 ರ ಐಪಿಎಲ್​ ಆವೃತ್ತಿಯಲ್ಲಿ ಚೆನ್ನೈ ಸೂಪರ್​ ಕಿಂಗ್ಸ್​ ತಂಡವನ್ನು ಮಹೇಂದ್ರ ಸಿಂಗ್​ ದೋನಿ ಅವರು ಮುನ್ನಡೆಸಲಿದ್ದಾರೆ ಎಂದು ಆಡಳಿತ ಮಂಡಳಿ ಘೋಷಿಸಿದೆ.

dhoni-will-lead
ಚೆನ್ನೈ ತಂಡಕ್ಕೆ ಮಹೇಂದ್ರ ಸಿಂಗ್​ ದೋನಿ ನಾಯಕ

ಚೆನ್ನೈ(ತಮಿಳುನಾಡು): ಭಾರತ ಕ್ರಿಕೆಟ್​ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್​ ದೋನಿ ಕ್ರಿಕೆಟ್​ನಿಂದಲೇ ನಿವೃತ್ತಿ ಪಡೆಯುವ ವದಂತಿ ಮಧ್ಯೆಯೇ ಐಪಿಎಲ್​ ಚೆನ್ನೈ ಸೂಪರ್​ ಕಿಂಗ್ಸ್​​ ನಾಯಕರಾಗಿ ಮುಂದುವರಿಯಲಿದ್ದಾರೆ ಎಂದು ತಂಡ ಹೇಳಿದೆ. ಈ ಬಗ್ಗೆ ಅಧಿಕೃತ ಹೇಳಿಕೆ ನೀಡಿರುವ ಆಡಳಿತ ಮಂಡಳಿ, ಯಶಸ್ವಿ ನಾಯಕ ದೋನಿ ಅವರು ಮುಂದಿನ ಐಪಿಎಲ್​ನಲ್ಲಿ ಚೆನ್ನೈ ತಂಡದ ನಾಯಕರಾಗಲಿದ್ದಾರೆ ಎಂದಿದೆ.

ತಂಡದ ಸಿಇಒ ಕೆಎಸ್ ವಿಶ್ವನಾಥನ್ ಮಾತನಾಡಿ, ನಾಲ್ಕು ಬಾರಿಯ ಚಾಂಪಿಯನ್​ ಮಾಡಿರುವ ಮಹೇಂದ್ರ ಸಿಂಗ್​ ದೋನಿ ಅವರು ತಂಡದ ಸಾರಥ್ಯ ವಹಿಸಲಿದ್ದಾರೆ ಎಂಬುದು ನಿಸ್ಸಂಶಯ. 2023 ರ ಇಂಡಿಯನ್​ ಪ್ರೀಮಿಯರ್​ ಲೀಗ್​ನಲ್ಲಿ ತಂಡ ದೋನಿ ನಾಯಕತ್ವದಲ್ಲಿ ಅತ್ಯುತ್ತಮ ಪ್ರದರ್ಶನ ನೀಡಲಿದೆ ಎಂದು ಭವಿಷ್ಯ ನುಡಿದರು.

ಈ ಬಾರಿಯ ಐಪಿಎಲ್​ ಪಂದ್ಯಗಳು ತವರು ಮೈದಾನದಲ್ಲಿ ನಡೆಯಲಿವೆ. ಇದು ಅಭಿಮಾನಿಗಳ ಸಂತಸಕ್ಕೆ ಕಾರಣವಾಗಿದೆ. ಎಂಎಸ್​ಕೆ ತಂಡದ ನಾಯಕರಾಗುವುದೂ ಖುಷಿ ದ್ವಿಗುಣಗೊಳಿಸಲಿದೆ ಎಂದು ಹೇಳಿದರು.

ಆಟಗಾರರೊಂದಿಗೆ ತಂಡ ಭಾವನಾತ್ಮಕ ಸಂಬಂಧ ಹೊಂದಿದೆ. ಮುಂದಿನ ತಿಂಗಳು ಕೊಚ್ಚಿಯಲ್ಲಿ ನಡೆಯುವ ಕಿರು ಐಪಿಎಲ್​ ಹರಾಜಿನಲ್ಲಿ ಕೆಲ ಆಟಗಾರರು ತಂಡ ಸೇರಲಿದ್ದು, ಇನ್ನು ಕೆಲವರು ತಂಡದಿಂದ ಮುಕ್ತರಾಗಲಿದ್ದಾರೆ. ಟೀಂ ಬಲಿಷ್ಠವನ್ನಾಗಿ ಮಾಡಿ ಮುಂದಿನ ಚಾಂಪಿಯನ್​ ಆಗಲು ಪ್ರಯತ್ನಿಸಲಾಗುವುದು ಎಂದು ಹೇಳಿದ್ದಾರೆ.

ಕಳೆದ ಆವೃತ್ತಿಯಲ್ಲಿ ಆಲ್​ರೌಂಡರ್ ರವೀಂದ್ರ ಜಡೇಜಾಗೆ ತಂಡದ ನಾಯಕತ್ವ ವಹಿಸಲಾಗಿತ್ತು. ದೋನಿ ನೆರವಿನ ಮಧ್ಯೆಯೂ ತಂಡ ಹೀನಾಯ ಪ್ರದರ್ಶನ ನೀಡಿತ್ತು. ಇದರಿಂದ ಟೂರ್ನಿ ಅರ್ಧಕ್ಕೆ ಜಡೇಜಾ ನಾಯಕತ್ವದಿಂದ ಹಿಂದೆ ಸರಿದಿದ್ದರು. ಇದೀಗ ತೆರವಾದ ಸ್ಥಾನಕ್ಕೆ ತಂಡದ ಆಡಳಿತ ಮಂಡಳಿ ಮತ್ತೆ ದೋನಿ ಅವರನ್ನು ಆಯ್ಕೆ ಮಾಡಿದೆ.

ತಂಡ ಕೈ ಬಿಟ್ಟ ಆಟಗಾರರು: ಡಿಸೆಂಬರ್​ 23 ರಂದು ನಡೆಯುವ ಕಿರು ಹರಾಜಿಗೆ ಚೆನ್ನೈ ತಂಡ ಕೆಲ ಆಟಗಾರರನ್ನು ಮುಕ್ತ ಮಾಡಿದೆ. ಅದರಲ್ಲಿ ಹಿರಿಯ ಆಲ್​ರೌಂಡರ್ ಡ್ವೇನ್ ಬ್ರಾವೋ, ಆಡಮ್ ಮಿಲ್ನೆ, ಕ್ರಿಸ್ ಜೋರ್ಡಾನ್, ಎನ್. ಜಗದೀಶನ್, ಸಿ. ಹರಿ ನಿಶಾಂತ್, ಕೆ. ಭಗತ್ ವರ್ಮಾ, ಕೆ.ಎಂ ಆಸಿಫ್ ಮತ್ತು ನಿವೃತ್ತಿ ಘೋಷಿಸಿರುವ ರಾಬಿನ್ ಉತ್ತಪ್ಪ ಅವರನ್ನು ತಂಡ ಬಿಡುಗಡೆ ಮಾಡಿದೆ.

ಓದಿ: ವಯಸ್ಸು ಬರೀ 12 ಒಲಿದ ಪದಕಗಳು 151.. ಇದು ವಂಡರ್ ಗರ್ಲ್ ಪವರ್​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.