ಅಬುಧಾಬಿ: ರವೀಂದ್ರ ಜಡೇಜಾ ಅವರ ಸ್ಪೋಟಕ ಬ್ಯಾಟಿಂಗ್ ನೆರವಿನಿಂದ ಚೆನ್ನೈ ಸೂಪರ್ ಕಿಂಗ್ಸ್ ತಂಡ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ 2 ವಿಕೆಟ್ಗಳ ರೋಚಕ ಜಯ ಸಾಧಿಸಿ ಅಂಕ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ.
172 ರನ್ಗಳ ಸ್ಪರ್ಧಾತ್ಮಕ ಗುರಿ ಬೆನ್ನತ್ತಿದ ಚೆನ್ನೈ ಆರಂಭದಿಂದಲೂ ಆಕ್ರಮಣಕಾರಿ ಬ್ಯಾಟಿಂಗ್ ನಡೆಸಿತು. ಆರಂಭಿಕರಾದ ರುತುರಾಜ್ ಗಾಯಕ್ವಾಡ್ ಮತ್ತು ಫಾಫ್ ಡು ಪ್ಲೆಸಿಸ್ ಮೊದಲ ವಿಕೆಟ್ಗೆ 74 ರನ್ಗಳ ಜೊತೆಯಾಟ ನೀಡಿ ಭರ್ಜರಿ ಆರಂಭ ಒದಗಿಸಿಕೊಟ್ಟರು.
28 ಎಸೆತಗಳಲ್ಲಿ 2 ಬೌಂಡರಿ ಮತ್ತು 3 ಸಿಕ್ಸರ್ಗಳ ನೆರವಿನಿಂದ 40 ರನ್ಗಳಿಸಿದ್ದ ಗಾಯಕ್ವಾಡ್ ರಸೆಲ್ ಬೌಲಿಂಗ್ನಲ್ಲಿ ಮಾರ್ಗನ್ಗೆ ಕ್ಯಾಚಿತ್ತು ಔಟಾದರು. ನಂತರ ಡುಪ್ಲೆಸಿಸ್ ಜೊತೆಗೂಡಿದ ಮೊಯೀನ್ ಅಲಿ(32) 2ನೇ ವಿಕೆಟ್ಗೆ 28 ರನ್ ಸೇರಿಸಿದರು. ಉತ್ತಮವಾಗಿ ಆಡುತ್ತಿದ್ದ ಪ್ಲೆಸಿಸ್(43) ಪ್ರಸಿಧ್ ಕೃಷ್ಣಾಗೆ ವಿಕೆಟ್ ಒಪ್ಪಿಸಿದರು.
-
WHAT. A. MATCH! 👌 👌
— IndianPremierLeague (@IPL) September 26, 2021 " class="align-text-top noRightClick twitterSection" data="
Absolute scenes in Abu Dhabi as @ChennaiIPL win the last-ball thriller against the spirited @KKRiders. 👏 👏#VIVOIPL #CSKvKKR
Scorecard 👉 https://t.co/l5Nq3WwQt1 pic.twitter.com/Q53ym5uxtI
">WHAT. A. MATCH! 👌 👌
— IndianPremierLeague (@IPL) September 26, 2021
Absolute scenes in Abu Dhabi as @ChennaiIPL win the last-ball thriller against the spirited @KKRiders. 👏 👏#VIVOIPL #CSKvKKR
Scorecard 👉 https://t.co/l5Nq3WwQt1 pic.twitter.com/Q53ym5uxtIWHAT. A. MATCH! 👌 👌
— IndianPremierLeague (@IPL) September 26, 2021
Absolute scenes in Abu Dhabi as @ChennaiIPL win the last-ball thriller against the spirited @KKRiders. 👏 👏#VIVOIPL #CSKvKKR
Scorecard 👉 https://t.co/l5Nq3WwQt1 pic.twitter.com/Q53ym5uxtI
ಇವರ ವಿಕೆಟ್ ಬೀಳುತ್ತಿದ್ದಂತೆ ಸಿಎಸ್ಕೆ ದಿಢೀರ್ ಕುಸಿತ ಕಂಡಿದ್ದಲ್ಲದೆ, ರನ್ ಗಳಿಸಲು ಕೂಡ ಪರದಾಡಿತು. ಮೊಯೀನ್ ಅಲಿ 32, ಅಂಬಾಟಿ ರಾಯುಡು 10, ಸುರೇಶ್ ರೈನಾ 11, ಎಂ.ಎಸ್.ಧೋನಿ 1 ರನ್ಗಳಿಸಿ ಔಟಾದರು.
19ನೇ ಓವರ್ನಲ್ಲಿ 22 ರನ್ ಚಚ್ಚಿದ ಜಡೇಜಾ:
138ಕ್ಕೆ 4 ವಿಕೆಟ್ ಕಳೆದುಕೊಂಡರೂ ಗೆಲುವಿನ ನೆಚ್ಚಿನ ತಂಡವಾಗಿದ್ದ ಸಿಎಸ್ಕೆ ದಿಢೀರ್ ಕುಸಿತ ಅನುಭವಿಸಿದ್ದರಿಂದ ಕೊನೆಯ 2 ಓವರ್ಗಳಲ್ಲಿ ಗೆಲ್ಲಲು 26 ರನ್ ಗಳಿಸಬೇಕಿತ್ತು. ಮೇಲ್ನೋಟಕ್ಕೆ ಕೆಕೆಆರ್ ಗೆಲ್ಲಬಹುದು ಎಂದೇ ಅಂದಾಜಿಸಲಾಗಿತ್ತು. ಆದರೆ ರವೀಂದ್ರ ಜಡೇಜಾ ಎಲ್ಲವನ್ನು ತಲೆಕೆಳಗೆ ಮಾಡಿದರು. ಪ್ರಸಿಧ್ ಕೃಷ್ಣ ಎಸೆದ 19ನೇ ಓವರ್ನಲ್ಲಿ 22 ರನ್‌ಸೂರೆಗೈದು ಪಂದ್ಯವನ್ನು ಸಿಎಸ್ಕೆ ಕಡೆಗೆ ತಿರುಗಿಸಿದರು.
ರೋಚಕವಾಗಿದ್ದ ಕೊನೆಯ ಓವರ್:
ಸಿಎಸ್ಕೆ ಗೆಲುವಿಗೆ ಕೊನೆಯ ಓವರ್ನಲ್ಲಿ 4 ರನ್ ಅಗತ್ಯವಿತ್ತು. ನರೈನ್ ಎಸೆದ 20ನೇ ಓವರ್ನ ಮೊದಲ ಎಸೆತದಲ್ಲಿ ಸ್ಯಾಮ್ ಕರ್ರನ್ ಕ್ಯಾಚ್ ನೀಡಿ ಔಟಾದರು. ನಂತರದ ಎಸೆತ ಡಾಟ್ ಆದರೆ 3ನೇ ಎಸೆತದಲ್ಲಿ ಶಾರ್ದೂಲ್ ಠಾಕೂರ್ 3 ರನ್ ತೆಗೆದುಕೊಂಡರು. 3 ಎಸೆತಕ್ಕೆ ಕೇವಲ 1 ರನ್ ಅಗತ್ಯವಿತ್ತು. 4ನೇ ಎಸೆತದಲ್ಲಿ ಡಾಟ್ ಮಾಡಿದ ಜಡೇಜಾ 5ನೇ ಎಸೆತದಲ್ಲಿ ಎಲ್ಬಿ ಬಲೆಗೆ ಬಿದ್ದರು. ಕೊನೆಯ ಎಸೆತದಲ್ಲಿ ದೀಪಕ್ ಚಹರ್ ಸಿಂಗಲ್ ತೆಗೆಯುವುದರೊಂದಿಗೆ ಸಿಎಸ್ಕೆಗೆ ರೋಚಕ ಗೆಲುವು ತಂದುಕೊಟ್ಟರು.
ಕೆಕೆಆರ್ ಪರ ಸುನೀಲ್ ನರೈನ್ 3 ವಿಕೆಟ್, ವರುಣ್ ಚಕ್ರವರ್ತಿ 22ಕ್ಕೆ1, ಪ್ರಸಿಧ್ ಕೃಷ್ಣ 41ಕ್ಕೆ1, ಲಾಕಿ ಫರ್ಗುಸನ್ 33ಕ್ಕೆ1, ಆ್ಯಂಡ್ರೆ ರಸೆಲ್ 28ಕ್ಕೆ 1 ವಿಕೆಟ್ ಪಡೆದರು.
ಇದಕ್ಕೂ ಮುನ್ನ ಬ್ಯಾಟಿಂಗ್ ನಡೆಸಿದ್ದ ಕೆಕೆಆರ್ ತಂಡದ ರಾಹುಲ್ ತ್ರಿಪಾಠಿ 45, ನಿತೀಶ್ ರಾಣಾ 37, ಆ್ಯಂಡ್ರೆ ರಸೆಲ್ 20 ಮತ್ತು ಕಾರ್ತಿಕ್ ಅವರ 26 ರನ್ಗಳ ನೆರವಿನಿಂದ 20 ಓವರ್ಗಳಲ್ಲಿ 6 ವಿಕೆಟ್ ನಷ್ಟಕ್ಕೆ 171 ರನ್ಗಳಿಸಿತ್ತು.