ಟೆಸ್ಟ್ ಕ್ರಿಕೆಟ್ನಲ್ಲಿ ತ್ರಿಶತಕ ಬಾರಿಸಿ ಭರವಸೆ ಮೂಡಿಸಿದ್ದರೂ ಕೂಡ ಬಳಿಕ ತಂಡದಿಂದ ಕಡೆಗಣಿಸಲ್ಪಟ್ಟಿರುವ ಕ್ರಿಕೆಟರ್, ಕನ್ನಡಿಗ ಕರುಣ್ ನಾಯರ್ ಹತಾಶೆಯಿಂದ ಟ್ವೀಟ್ ಮಾಡಿದ್ದು, ಸಾಕಷ್ಟು ವೈರಲ್ ಆಗಿದೆ. ರಣಜಿ ಟ್ರೋಫಿ ಹಾಗೂ ಭಾರತ-ಬಾಂಗ್ಲಾದೇಶ ನಡುವಿನ ಟೆಸ್ಟ್ ಸರಣಿ ಆರಂಭಕ್ಕೂ ಮುನ್ನ ಟ್ವೀಟ್ ಮೂಲಕ ಕರುಣ್ ನಾಯರ್ ಬೇಸರ ಹೊರಹಾಕಿದ್ದಾರೆ.
ರಾಷ್ಟ್ರೀಯ ತಂಡದಲ್ಲಿ ಸ್ಥಾನ ಕಳೆದುಕೊಂಡರೂ ಸಹ ಕರುಣ್ ಬಳಿಕ ದೇಶಿ ಕ್ರಿಕೆಟ್ನಲ್ಲಿ ಕರ್ನಾಟಕ ತಂಡದ ಅವಿಭಾಜ್ಯ ಭಾಗವಾಗಿದ್ದರು. ಆದರೆ ಇತ್ತೀಚೆಗೆ ರಣಜಿ ತಂಡದಲ್ಲೂ ಸಹ ಅವಕಾಶ ಕ್ಷೀಣಿಸುತ್ತಿದೆ. ಇತ್ತೀಚೆಗೆ ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಮತ್ತು ವಿಜಯ್ ಹಜಾರೆ ಟ್ರೋಫಿಗೂ ಕೂಡ ತಂಡದಲ್ಲಿ ಸ್ಥಾನ ಪಡೆದಿಲ್ಲ. ಶನಿವಾರ ಈ ಬಾರಿಯ ರಣಜಿ ಟ್ರೋಫಿಯ ಆರಂಭಿಕ ಕೆಲ ಪಂದ್ಯಗಳಿಗೆ ಪ್ರಕಟಗೊಂಡ ತಂಡದಲ್ಲೂ ಕೂಡ ನಾಯರ್ಗೆ ಅವಕಾಶ ದೊರೆತಿಲ್ಲ.
-
Dear cricket, give me one more chance.🤞🏽
— Karun Nair (@karun126) December 10, 2022 " class="align-text-top noRightClick twitterSection" data="
">Dear cricket, give me one more chance.🤞🏽
— Karun Nair (@karun126) December 10, 2022Dear cricket, give me one more chance.🤞🏽
— Karun Nair (@karun126) December 10, 2022
2016ರಲ್ಲಿ ಟೀಮ್ ಇಂಡಿಯಾ ಟೆಸ್ಟ್ ತಂಡದಲ್ಲಿ ಪಾದಾರ್ಪಣೆ ಮಾಡಿದ್ದ ಕರುಣ್ ನಾಯರ್, ಇಂಗ್ಲೆಂಡ್ ವಿರುದ್ಧ ಚೆನ್ನೈನಲ್ಲಿ ನಡೆದ ಪಂದ್ಯದಲ್ಲಿ ತಮ್ಮ ಚೊಚ್ಚಲ ಟೆಸ್ಟ್ ಶತಕ ಬಾರಿಸಿದ್ದರು. ಅಜೇಯ 303 ರನ್ ಪೇರಿಸಿ ಭವಿಷ್ಯದ ಆಟಗಾರ ಎಂಬ ಭರವಸೆ ಮೂಡಿಸಿದ್ದರು. ಈ ಸಾಧನೆಯೊಂದಿಗೆ ಆಡಿದ ಕಡಿಮೆ ಟೆಸ್ಟ್ ಪಂದ್ಯಗಳಲ್ಲೇ ತ್ರಿಶಕ ಸಾಧನೆಗೈದ ಆಟಗಾರ ಎಂಬ ಶ್ರೇಯಕ್ಕೆ ಪಾತ್ರರಾಗಿದ್ದರು. ಭಾರತವು ಈ ಪಂದ್ಯವನ್ನು ಇನಿಂಗ್ಸ್ ಮತ್ತು 75 ರನ್‌ಗಳಿಂದ ಜಯಿಸಿತ್ತು. ಆದರೆ 2017ರ ಮಾರ್ಚ್ನಲ್ಲಿ ಟೆಸ್ಟ್ ಮತ್ತು ಜೂನ್ 2016ರಲ್ಲಿ ಏಕದಿನ ಪಂದ್ಯವಾಡಿದ್ದ ನಾಯರ್, ಬಳಿಕ ಭಾರತ ತಂಡದಿಂದ ಕಡೆಗಣಿಸಲ್ಪಟ್ಟಿದ್ದಾರೆ.
ಇದೆಲ್ಲದರ ನಡುವೆ, 'ಡಿಯರ್ ಕ್ರಿಕೆಟ್, ನನಗೆ ಇನ್ನೊಂದು ಅವಕಾಶ ಕೊಡು' ಎಂದು ಕರುಣ್ ನಾಯರ್ ಭಾವನಾತ್ಮಕ ಟ್ವೀಟ್ ಮಾಡಿದ್ದಾರೆ. ಈ ಪೋಸ್ಟ್ಗೆ ಸಾಕಷ್ಟು ಪ್ರತಿಕ್ರಿಯೆ, ಲೈಕ್ಸ್ ಬಂದಿದ್ದು, ಅಭಿಮಾನಿಗಳು 'ಕರುಣ್ ಗಟ್ಟಿಯಾಗಿರಿ, ನಿಮ್ಮ ಮೇಲೆ ನಂಬಿಕೆ ಇಡಿ, ನೀವು ಖಂಡಿತವಾಗಿ ತಂಡಕ್ಕೆ ಮರಳುತ್ತೀರಿ' ಎಂದೆಲ್ಲ ರೀಟ್ವೀಟ್ ಮೂಲಕ ಬೆಂಬಲ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಸೆಮೀಸ್ನಲ್ಲಿ ಅರ್ಜೆಂಟೀನಾ ಕ್ರೊವೇಷಿಯಾ, ಮೊರಾಕ್ಕೊ ಫ್ರಾನ್ಸ್ ಫೈಟ್: ಯಾರಿಗೆ ಫೈನಲ್ ಟಿಕೆಟ್?