ETV Bharat / sports

Jasprit Bumrah: ತಂದೆಯಾದ ಬುಮ್ರಾ.. ಸಂತಸದ ಸುದ್ದಿ ಹಂಚಿಕೊಂಡ ಯಾರ್ಕರ್​ ಸ್ಟಾರ್ - ನಮ್ಮ ಪುಟ್ಟ ಕುಟುಂಬ ಬೆಳೆದಿದೆ

ಟೀಂ ಇಂಡಿಯಾ ಕ್ರಿಕೆಟಿಗ ಬುಮ್ರಾ ಸಂತಸದ ಸುದ್ದಿ ಹಂಚಿಕೊಂಡಿದ್ದಾರೆ. ಅವರ ಪತ್ನಿ ಸಂಜನಾ ಗಣೇಶನ್ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ.

cricketer jasprit bumrah blessed  cricketer jasprit bumrah blessed with baby boy  cricketer jasprit bumrah news  ಸಂತಸದ ಸುದ್ದಿ ಹಂಚಿಕೊಂಡ ಯಾರ್ಕರ್​ ಸ್ಟಾರ್  ತಂದೆಯಾದ ಬುಮ್ರಾ  ಟೀಂ ಇಂಡಿಯಾ ಕ್ರಿಕೆಟಿಗ ಬುಮ್ರಾ ಸಂತಸದ ಸುದ್ದಿ  ಪತ್ನಿ ಸಂಜನಾ ಗಣೇಶನ್ ಗಂಡು ಮಗುವಿಗೆ ಜನ್ಮ  ಟೀಂ ಇಂಡಿಯಾದ ಸ್ಟಾರ್ ವೇಗಿ ಜಸ್ಪ್ರೀತ್ ಬುಮ್ರಾ  ಸ್ಟಾರ್ ವೇಗಿ ಜಸ್ಪ್ರೀತ್ ಬುಮ್ರಾ ತಂದೆಯಾಗಿದ್ದಾರೆ  ಸಂಜನಾ ಗಣೇಶನ್ ಸೋಮವಾರ ಗಂಡು ಮಗುವಿಗೆ ಜನ್ಮ  ನಮ್ಮ ಪುಟ್ಟ ಕುಟುಂಬ ಬೆಳೆದಿದೆ  ಕ್ರಿಕೆಟಿಗರು ಹಾಗೂ ಅಭಿಮಾನಿಗಳು ಬುಮ್ರಾ
ತಂದೆಯಾದ ಬುಮ್ರಾ
author img

By ETV Bharat Karnataka Team

Published : Sep 4, 2023, 2:11 PM IST

ನವದೆಹಲಿ: ಟೀಂ ಇಂಡಿಯಾದ ಸ್ಟಾರ್ ವೇಗಿ ಜಸ್ಪ್ರೀತ್ ಬುಮ್ರಾ ತಂದೆಯಾಗಿದ್ದಾರೆ. ಅವರ ಪತ್ನಿ ಸಂಜನಾ ಗಣೇಶನ್ ಸೋಮವಾರ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಬುಮ್ರಾ ಈ ಸಂತಸದ ಸುದ್ದಿಯನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಫೋಟೋವನ್ನು ಶೇರ್​ ಮಾಡಿದ್ದಾರೆ.

ನಮ್ಮ ಪುಟ್ಟ ಕುಟುಂಬ ಬೆಳೆದಿದೆ. ನಮ್ಮ ಹೃದಯಗಳು ಸಂತೋಷದಿಂದ ತುಂಬಿವೆ. ಇಂದು ಬೆಳಗ್ಗೆ ನಾವು ನಮ್ಮ ಮಗು ಅಂಗದ್ ಜಸ್ಪ್ರೀತ್ ಬುಮ್ರಾ ಅವರನ್ನು ಈ ಜಗತ್ತಿಗೆ ಸ್ವಾಗತಿಸಿದೆವು. ಈಗ ನಮ್ಮ ಸಂತೋಷಕ್ಕೆ ಮಿತಿಯಿಲ್ಲ. ಪೋಷಕರಾಗಿ ನಮ್ಮ ಜೀವನದಲ್ಲಿ ಈ ಹೊಸ ಅಧ್ಯಾಯದ ಪ್ರತಿ ಕ್ಷಣವನ್ನು ಆನಂದಿಸಲು ನಾವು ಎದುರು ನೋಡುತ್ತಿದ್ದೇವೆ ಎಂದು ಜಸ್ಪ್ರೀತ್ ಬುಮ್ರಾ ಇನ್​ಸ್ಟಾಗ್ರಾಂನಲ್ಲಿ ಬರೆದಿದ್ದಾರೆ. ಈ ಸಂದರ್ಭದಲ್ಲಿ, ಬುಮ್ರಾ ದಂಪತಿಗಳು ಮಗುವಿನ ಕೈ ಹಿಡಿದಿರುವ ಫೋಟೋವನ್ನು ಹಂಚಿಕೊಂಡಿದ್ದಾರೆ.

  • Our little family has grown & our hearts are fuller than we could ever imagine! This morning we welcomed our little boy, Angad Jasprit Bumrah into the world. We are over the moon and can’t wait for everything this new chapter of our lives brings with it ❤️ - Jasprit and Sanjana pic.twitter.com/j3RFOSpB8Q

    — Jasprit Bumrah (@Jaspritbumrah93) September 4, 2023 " class="align-text-top noRightClick twitterSection" data=" ">

ಇದರೊಂದಿಗೆ ಕ್ರಿಕೆಟಿಗರು ಹಾಗೂ ಅಭಿಮಾನಿಗಳು ಬುಮ್ರಾ ದಂಪತಿಗೆ ಶುಭಾಶಯ ಕೋರುತ್ತಿದ್ದಾರೆ. ಕ್ರಿಕೆಟಿಗರಾದ ಸೂರ್ಯ ಕುಮಾರ್ ಯಾದವ್, ದಿನೇಶ್ ಕಾರ್ತಿಕ್, ರೋಹಿತ್ ಶರ್ಮಾ ಪತ್ನಿ ರಿತಿಕಾ ಸಜ್ದೆ, ಯುವರಾಜ್ ಪತ್ನಿ ಹೇಜಲ್ ಕೀಚ್ ಮತ್ತು ಇತರರು ಬುಮ್ರಾ ಅವರನ್ನು ಅಭಿನಂದಿಸಿದ್ದಾರೆ. ಈ ಕಾರಣದಿಂದ ಏಷ್ಯಾಕಪ್​ನಲ್ಲಿ ನೇಪಾಳ ವಿರುದ್ಧದ ಇಂದಿನ ಪಂದ್ಯಕ್ಕೆ ಬುಮ್ರಾ ಲಭ್ಯರಿಲ್ಲ ಎಂಬುದು ಗೊತ್ತೇ ಇದೆ.

ಬುಮ್ರಾ ಮಾರ್ಚ್ 2021 ರಲ್ಲಿ ಸಂಜನಾ ಗಣೇಶನ್ ಅವರನ್ನು ವಿವಾಹವಾದರು. ಬೆನ್ನುನೋವಿನಿಂದಾಗಿ ದೀರ್ಘಕಾಲದವರೆಗೆ ಕ್ರಿಕೆಟ್‌ನಿಂದ ದೂರವಿದ್ದ ಬುಮ್ರಾ ಇತ್ತೀಚೆಗೆ ಟೀಂ ಇಂಡಿಯಾಕ್ಕೆ ಮರಳಿದ್ದರು.

ಓದಿ: ನೇಪಾಳ ಜೊತೆ ಭಾರತ ಸೆಣಸು.. ಮಳೆಯಿಂದ ಪಂದ್ಯ ರದ್ದಾದ್ರೂ ಸೂಪರ್​4ಗೆ ಟೀಂ ಇಂಡಿಯಾ ಲಗ್ಗೆ!

ತವರಿಗೆ ಮರಳಿದ ಜಸ್ಪ್ರೀತ್ ಬುಮ್ರಾ : ನಿನ್ನೆ ಭಾರತದ ಸ್ಟಾರ್ ವೇಗಿ ಜಸ್ಪ್ರೀತ್ ಬುಮ್ರಾ ವೈಯಕ್ತಿಕ ಕಾರಣಗಳಿಂದಾಗಿ ಏಷ್ಯಾಕಪ್ ನಡುವೆ ಮುಂಬೈಗೆ ತೆರಳಿದ್ದರು. ಸೆಪ್ಟೆಂಬರ್ 6 ರಿಂದ ಪ್ರಾರಂಭವಾಗುವ ಪಂದ್ಯಾವಳಿಯ ಸೂಪರ್ ಸ್ಟೇಜ್‌ಗೆ ಬೌಲರ್ ಸಮಯಕ್ಕೆ ಮರಳುವ ನಿರೀಕ್ಷೆಯಿದೆ ಎಂದು ಮೂಲಗಳು ತಿಳಿಸಿವೆ. ಪಾಕ್​ ವಿರುದ್ಧ ನಡೆದ ಪಂದ್ಯದಲ್ಲಿ ಬುಮ್ರಾಗೆ ಬೌಲಿಂಗ್​ ಅವಕಾಶ ಸಿಗಲಿಲ್ಲ. ಸಿಕ್ಕ ಬ್ಯಾಟಿಂಗ್​ನಲ್ಲಿ ಮೂರು ಬೌಂಡರಿ ಸಹಿತ 16 ರನ್​ ಗಳಿಸಿದ್ದರು.

ಗಾಯದಿಂದ ಚೇತರಿಸಿಕೊಂಡ ನಂತರ ಬುಮ್ರಾ ಐರ್ಲೆಂಡ್​ ಪ್ರವಾಸ ಮುಗಿಸಿ ಏಷ್ಯಾಕಪ್​ಗೆ ಆಯ್ಕೆ ಆಗಿದ್ದರು. ಬುಮ್ರಾ ಏಕದಿನ ಮಾದರಿಯ ಪಂದ್ಯ ಆಡದೇ ವರ್ಷಗಳೇ ಕಳೆದಿವೆ. ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್​ ಅಕಾಡೆಮಿ (ಎನ್​ಸಿಎ) ಯಲ್ಲಿ 10 ಓವರ್​ಗಳನ್ನು ಮಾಡಿ ಫಿಟ್​ನೆಸ್​ ಸಾಬೀತು ಪಡಿಸಿದ್ದರು. ಭಾರತದಲ್ಲಿ ನಡೆಯುವ ವಿಶ್ವಕಪ್​ಗೆ ಭರವಸೆಯ ಆಟಗಾರ ಆಗಿದ್ದು, ಅವರ ಕಮ್​ಬ್ಯಾಕ್​ಗೆ ಇಡೀ ಕ್ರಿಕೆಟ್​ ಜಗತ್ತು ಎದುರು ನೋಡುತ್ತಿದೆ.

ಮೊದಲ ಮಗುವಿನ ನಿರೀಕ್ಷೆಯಲ್ಲಿದ್ರೂ ಬುಮ್ರಾ: ಕ್ರಿಕೆಟಿಗ ಜಸ್ಪ್ರೀತ್ ಬುಮ್ರಾ ಮತ್ತು ಟಿವಿ ನಿರೂಪಕಿ ಸಂಜನಾ ಗಣೇಶನ್ 2021ರಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಈ ಜೋಡಿ ಮೊದಲ ಮಗುವಿನ ನಿರೀಕ್ಷೆಯಲ್ಲಿತ್ತು. ಈ ಕಾರಣಕ್ಕೆ ಬುಮ್ರಾ ಮುಂಬೈಗೆ ಮರಳಿದ್ದಾರೆ ಎಂದು ವರದಿಯಾಗಿತ್ತು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.