ಫಿಟ್ನೆಸ್ಗಾಗಿ ಕ್ರಿಕೆಟರ್ಸ್, ಸಿಲೆಬ್ರಿಟಿಗಳು ಡಯಟ್, ಮಿತ ಆಹಾರ ಸೇವನೆ ಪದ್ಧತಿ ಅನುಸರಿಸುವುದು ಸಾಮಾನ್ಯ. ಭಾರತ ತಂಡದ ಬ್ಯಾಟಿಂಗ್ ಸ್ಟಾರ್ ವಿರಾಟ್ ಕೊಹ್ಲಿ ಜಗತ್ತಿನಲ್ಲೇ ಫಿಟ್ ಆಗಿರುವ ಕ್ರೀಡಾಪಟುಗಳಲ್ಲೊಬ್ಬರು. ಜೊತೆಗೆ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ, ಕೆಎಲ್ ರಾಹುಲ್ ಸೇರಿ ಹಲವರು ಫಿಟ್ನೆಸ್ನಿಂದ ಗಮನ ಸೆಳೆಯುತ್ತಾರೆ. ಅದರಲ್ಲೂ ಹಾರ್ದಿಕ್ ವಿದೇಶ ಪ್ರವಾಸದಲ್ಲಿರುವಾಗ ತಮಗಿಷ್ಟದ ಅಡುಗೆ ಹಾಗೂ ಫಿಟ್ನೆಸ್ಗೋಸ್ಕರ ಬಾಣಸಿಗನನ್ನೂ ಕರೆದೊಯ್ಯುತ್ತಾರೆಂಬುದು ವಿಶೇಷವಾಗಿದೆ.
ಕಳೆದ ಕೆಲ ದಿನಗಳಿಂದ ಆಸ್ಟ್ರೇಲಿಯಾದಲ್ಲಿ ಟಿ20 ವಿಶ್ವಕಪ್ ಟೂರ್ನಿ ನಡೆಯುತ್ತಿದ್ದು ಹಲವಾರು ತಂಡಗಳು ಭಾಗವಹಿಸಿವೆ. ಅದರಲ್ಲಿ ಟೀಂ ಇಂಡಿಯಾ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ತಮಗೆ ರುಚಿಕರ ಹಾಗೂ ಇಷ್ಟದ ಭೋಜನಕ್ಕಾಗಿ ತಮ್ಮೊಂದಿಗೆ ಅಡುಗೆಯವರನ್ನೂ ಕರೆದೊಯ್ದಿದ್ದಾರಂತೆ. ಇದರಿಂದ ಹಾರ್ದಿಕ್ ತಮ್ಮ ಫಿಟ್ನೆಸ್ ಮಟ್ಟವನ್ನು ಕಾಯ್ದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ಹಾರ್ದಿಕ್ ಅವರೊಂದಿಗಿನ ಭಾರತ ತಂಡ ತಂಗಿರುವ ಆಸ್ಟ್ರೇಲಿಯಾದ ಹೋಟೆಲ್‌ಗಳ ಸಮೀಪದ ಅಪಾರ್ಟ್‌ಮೆಂಟ್‌ನಿಂದ ಅಡುಗೆ ಕೋಣೆಯಿಂದ ಪರಿಮಳ ಹೊಮ್ಮುತ್ತಿದೆ. ಅದರಲ್ಲೂ ವಿಶೇಷವಾಗಿ ಕೆಲ ಮಸಾಲೆ ಮತ್ತು ತುಪ್ಪದೊಂದಿಗೆ ಹದಗೊಂಡಿರುವ ಬೆಚ್ಚಗಿನ ಹೆಸರು ಬೇಳೆ ದಾಲ್ ಮತ್ತು ರೈಸ್ ಕಿಚಡಿ ಪಾಂಡ್ಯರ ನಿತ್ಯದ ಆಹಾರವಾಗಿದೆ. ಬಾಣಸಿಗ ಆರವ್ ನಾಂಗಿಯಾ ಅವರು ಹಾರ್ದಿಕ್ ಪಾಂಡ್ಯರ ನೆಚ್ಚಿನ ಬಾಣಸಿಗ.
ನಿರ್ದಿಷ್ಟ ಪೌಷ್ಠಿಕಾಂಶಯುಕ್ತ ಆಹಾರ ಸೇವನೆಗೆ ಹಾರ್ದಿಕ್, ಬಾಣಸಿಗ ನಾಂಗಿಯಾರನ್ನು ಕರೆದೊಯ್ಯುವುದು ಆಟದಲ್ಲಿ ಅವರ ಫಿಟ್ನೆಸ್ ಮಟ್ಟ ಸ್ಥಿರವಾಗಿಡಲು ತೆಗೆದುಕೊಂಡ ಪ್ರಮುಖ ನಿರ್ಧಾರವಾಗಿದೆ. ಇದರಿಂದ ಹೆಚ್ಚು ಖರ್ಚಾದರೂ ಸಹ ತಮ್ಮ ಆಹಾರ ಪದ್ಧತಿಗೋಸ್ಕರ ಪಾಂಡ್ಯ ಹಣ ವ್ಯಯಿಸುತ್ತಿದ್ದಾರೆ.
ಭಾರತ ಕ್ರಿಕೆಟ್ ತಂಡವು ಎಲ್ಲಿಗೂ ಸಹ ವೈಯಕ್ತಿಕ ಬಾಣಸಿಗರೊಂದಿಗೆ ಪ್ರಯಾಣಿಸುವುದಿಲ್ಲ ಮತ್ತು ಆಟಗಾರರು ಸಾಮಾನ್ಯವಾಗಿ ತಮ್ಮ ಊಟಕ್ಕೆ ದೈನಂದಿನ ಭತ್ಯೆ ಪಾವತಿಸುತ್ತಾರೆ. ಆದರೂ ಸಹ ಪಾಂಡ್ಯ ತಮ್ಮ ಊಟದ ಅಗತ್ಯತೆಗಾಗಿ ಬಾಣಸಿಗರೊಂದಿಗೆ ಪ್ರವಾಸ ತೆರಳುತ್ತಾರೆ.
ವೃತ್ತಿಪರ ಕ್ರೀಡಾಪಟುವಾಗಿ ಜೀವನದಲ್ಲಿ ಲಭ್ಯವಿರುವ ಎಲ್ಲವನ್ನೂ ಬಳಸಿಕೊಳ್ಳಬೇಕು. ನನ್ನ ದೈಹಿಕ ಸಾಮರ್ಥ್ಯದಿಂದ ಮಾತ್ರ ಕ್ರೀಡೆಯಲ್ಲಿ ಭಾಗಿಯಾಗಲು ಸಾಧ್ಯ, ಹೀಗಾಗಿ ನಾನು ಯಾವುದಕ್ಕೂ ರಾಜಿ ಮಾಡಿಕೊಳ್ಳಬಾರದೆಂದು ಅಂದುಕೊಂಡಿದ್ದೇನೆ. ಫಿಟ್ನೆಸ್ಗಾಗಿ ಉತ್ತಮ ಬಾಣಸಿಗರನ್ನು ಇಟ್ಟುಕೊಳ್ಳುವುದು ಹಾಗೂ ಅಗತ್ಯ ನಿದ್ರೆ ಮಾಡುವುದು ಮುಖ್ಯವಾಗಿದೆ. ನಾನು ಬಾಣಸಿಗನನ್ನು ನೇಮಿಸಿಕೊಂಡಿದ್ದೇನೆ, ಆಟ ಆಡುವ ದಿನದವರೆಗೂ ನನ್ನ ಊಟದ ಬಗ್ಗೆ ಅವರು ನೋಡಿಕೊಳ್ಳುತ್ತಾರೆ ಎನ್ನುತ್ತಾರೆ ಹಾರ್ದಿಕ್ ಪಾಂಡ್ಯ.
ಸದ್ಯ ಬಾಣಸಿಗ ನಂಗಿಯಾ ಹೆಚ್ಚಾಗಿ ಭಾರತೀಯ ತಂಡದ ಜೊತೆಗೇ ವಿಮಾನದಲ್ಲಿ ಪ್ರಯಾಣಿಸುತ್ತಾರೆ. ಪಾಂಡ್ಯ ತಂಗಿರುವ ಹೋಟೆಲ್ ಸಮೀಪದ ಅಪಾರ್ಟ್ಮೆಮಂಟ್ನಲ್ಲಿ ವಾಸ್ತವ್ಯ ಹೂಡುತ್ತಾರೆ.
ಇದನ್ನೂ ಓದಿ: ಕ್ರಿಕೆಟ್ನಿಂದ ನಿವೃತ್ತಿಯಾದರೂ ಧೋನಿ ಆದಾಯ ಹೆಚ್ಚು: ಆರು ತಿಂಗಳಲ್ಲಿ ಕಟ್ಟಿದ ತೆರಿಗೆ ಎಷ್ಟು?