ವಡೋದರಾ (ಗುಜರಾತ್): ಟೀಂ ಇಂಡಿಯಾದ ಸ್ಟಾರ್ ಆಲ್‌ರೌಂಡರ್ ಅಕ್ಷರ್ ಪಟೇಲ್ ತಮ್ಮ ಪ್ರೇಯಸಿ ಮೇಹಾ ಪಟೇಲ್ ಅವರೊಂದಿಗೆ ಬದುಕಿನ ಹೊಸ ಇನಿಂಗ್ಸ್‌ಗೆ ಆರಂಭಿಸಿದ್ದಾರೆ. ಇಬ್ಬರ ನಿಶ್ಚಿತಾರ್ಥ ಕಳೆದ ವರ್ಷ ಅಕ್ಷರ್ ಪಟೇಲ್ ಅವರ ಜನ್ಮದಿನದಿಂದೇ ನಡೆದಿತ್ತು. ಇದೀಗ ಗುಜರಾತ್‌ನ ವಡೋದರಾದಲ್ಲಿ ವಿವಾಹೋತ್ಸವ ನಡೆದಿದ್ದು ವಿಡಿಯೋ ಮತ್ತು ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ.
ಜಯದೇವ್ ಉನದ್ಕತ್ ಸೇರಿದಂತೆ ಹಲವು ಕ್ರಿಕೆಟಿಗರು ಸಮಾರಂಭಕ್ಕೆ ಆಗಮಿಸಿದ್ದರು. ಆದರೆ, ನ್ಯೂಜಿಲೆಂಡ್ ವಿರುದ್ಧದ ಸರಣಿಯಿಂದಾಗಿ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಸೇರಿದಂತೆ ಅನೇಕರು ಮದುವೆಗೆ ಆಗಮಿಸಲು ಸಾಧ್ಯವಾಗಲಿಲ್ಲ. ಅಕ್ಷರ್ ಪಟೇಲ್ ಮತ್ತು 28 ವರ್ಷದ ಮೇಹಾ ಬಹುದಿನಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು.
-
Axar Patel married to me, took seven rounds with his meha in Vadodara... #axarpatel #mehapatel pic.twitter.com/yimPDvfUaD
— Meha Patel (@Meha2026) January 27, 2023 " class="align-text-top noRightClick twitterSection" data="
">Axar Patel married to me, took seven rounds with his meha in Vadodara... #axarpatel #mehapatel pic.twitter.com/yimPDvfUaD
— Meha Patel (@Meha2026) January 27, 2023Axar Patel married to me, took seven rounds with his meha in Vadodara... #axarpatel #mehapatel pic.twitter.com/yimPDvfUaD
— Meha Patel (@Meha2026) January 27, 2023
ಅಕ್ಷರ್ ಮತ್ತು ಮೇಹಾ ಅವರ ಮದುವೆ ಡ್ಯಾನ್ಸ್ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ನವಜೋಡಿ ಸಂಗೀತೋತ್ಸವದಲ್ಲಿ ಸಖತ್ ಹೆಜ್ಜೆ ಹಾಕುತ್ತಿರುವುದನ್ನು ನೋಡಬಹುದು. ಸ್ವತಃ ಮೇಹಾ ಪಟೇಲ್ ಅವರೇ ತಮ್ಮ ಟ್ವಿಟರ್ ಹ್ಯಾಂಡಲ್ನಲ್ಲಿ ಮದುವೆಯ ಹಲವು ಫೋಟೋ, ವಿಡಿಯೋಗಳನ್ನು ಹಂಚಿಕೊಂಡಿದ್ದಾರೆ.
ಮೇಹಾ ಪಟೇಲ್ ವೃತ್ತಿಯಲ್ಲಿ ಆಹಾರ ಮತ್ತು ಪೌಷ್ಟಿಕಾಂಶ ತಜ್ಞೆ. ಸಾಮಾಜಿಕ ಜಾಲತಾಣದಲ್ಲಿ ಆಹಾರ ಯೋಜನೆಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಅಕ್ಷರ್ ಮತ್ತು ಮೇಹಾ ಅನೇಕ ಬಾರಿ ಒಟ್ಟಿಗೆ ರಜಾದಿನಗಳನ್ನೂ ಕಳೆದಿದ್ದಾರೆ. ಇತ್ತೀಚೆಗೆ ಅಮೆರಿಕಕ್ಕೆ ಹೋಗಿ ಬಂದಿದ್ದರು.
-
Me and my Husband Axer Patel Dance Last Night Thank you everyone #AxarPatel #MehaPatel #AxarPatelWedding pic.twitter.com/2GNyNxP67h
— Meha Patel (@Meha2026) January 27, 2023 " class="align-text-top noRightClick twitterSection" data="
">Me and my Husband Axer Patel Dance Last Night Thank you everyone #AxarPatel #MehaPatel #AxarPatelWedding pic.twitter.com/2GNyNxP67h
— Meha Patel (@Meha2026) January 27, 2023Me and my Husband Axer Patel Dance Last Night Thank you everyone #AxarPatel #MehaPatel #AxarPatelWedding pic.twitter.com/2GNyNxP67h
— Meha Patel (@Meha2026) January 27, 2023
ಅಕ್ಷರ್ ಪಟೇಲ್ಗಾಗಿ ಮೇಹಾ ತನ್ನ ಒಂದು ಕೈಯಲ್ಲಿ ಅಕ್ಷ್ ಎಂಬ ಹೆಸರನ್ನು ಹಚ್ಚೆ ಹಾಕಿಸಿಕೊಂಡಿದ್ದಾರೆ. ಮೇಹಾ ಪಟೇಲ್ ರೀಲ್ಸ್ ಇಷ್ಟಪಡುತ್ತಾರೆ. ಅವರು ನಿರಂತರವಾಗಿ Instagram ನಲ್ಲಿ ರೀಲ್ಸ್ಗಳನ್ನು ಹಂಚಿಕೊಳ್ಳುತ್ತಿದ್ದು, 27 ಸಾವಿರ ಫಾಲೋವರ್ಸ್ ಇದ್ದಾರೆ.
ನ್ಯೂಜಿಲೆಂಡ್ ಸರಣಿಯಿಂದ ಅಕ್ಷರ್‌ಗೆ ವಿರಾಮ: ಅಕ್ಷರ್ ಪಟೇಲ್ ಈ ವರ್ಷದ ಆರಂಭದಲ್ಲಿ ಶ್ರೀಲಂಕಾ ವಿರುದ್ಧ ಟಿ20 ಮತ್ತು ಏಕದಿನ ಕ್ರಿಕೆಟ್ ಸರಣಿಗಳನ್ನು ಆಡಿದ್ದರು. ಇದರಲ್ಲಿ ಅವರ ಪ್ರದರ್ಶನ ಅತ್ಯುತ್ತಮವಾಗಿತ್ತು. ಭಾರತ ಇತ್ತೀಚೆಗೆ ನ್ಯೂಜಿಲೆಂಡ್ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಯನ್ನು ಕ್ಲೀನ್ ಸ್ವೀಪ್ ಗೆದ್ದುಕೊಂಡಿದೆ. ಇಂದಿನಿಂದ ಉಭಯ ತಂಡಗಳ ನಡುವೆ ಮೂರು ಪಂದ್ಯಗಳ ಟಿ20 ಸರಣಿ ನಡೆಯಲಿದೆ. ಅಕ್ಷರ್ ತಮ್ಮ ಮದುವೆಗಾಗಿ ಈ ಎರಡೂ ಸರಣಿಗಳಿಂದ ಹೊರಗುಳಿದಿದ್ದಾರೆ.
ಇತ್ತೀಚೆಗೆ ಕನ್ನಡಿಗ ರಾಹುಲ್ ಮದುವೆ: ಬಾಲಿವುಡ್ ನಟಿ ಅಥಿಯಾ ಶೆಟ್ಟಿ ಮತ್ತು ಕನ್ನಡಿಗ ಕೆ.ಎಲ್.ರಾಹುಲ್ ಅವರು ಜನವರಿ 23ರಂದು ಸಪ್ತಪದಿ ತುಳಿದಿದ್ದರು. ಮಹಾರಾಷ್ಟ್ರದ ಖಂಡಾಲಾದಲ್ಲಿರುವ ಸುನಿಲ್ ಶೆಟ್ಟಿ ಅವರ ಫಾರ್ಮ್‌ಹೌಸ್‌ನಲ್ಲಿ ನಿಕಟ ಕುಟುಂಬ ಮತ್ತು ಸ್ನೇಹಿತರು ಭಾಗವಹಿಸಿದ್ದ ಸಮಾರಂಭದಲ್ಲಿ ವಿವಾಹೋತ್ಸವ ನಡೆದಿತ್ತು.
ಇದನ್ನೂ ಓದಿ: ಅಥಿಯಾ ಕೈಹಿಡಿದ ರಾಹುಲ್: ಸಾಕ್ಷೀಕರಿಸಿದ ಸುನಿಲ್ ಶೆಟ್ಟಿ