ETV Bharat / sports

ವಿಶ್ವಕಪ್​ ಟೂರ್ನಿಯಲ್ಲಿ ನಾವು ಇನ್ನೂ ತುಂಬಾ ದೂರ ಸಾಗಬೇಕಿದೆ: ದಕ್ಷಿಣ ಆಫ್ರಿಕಾದ ವೇಗಿ ಕಗಿಸೊ ರಬಾಡ - South Africa won by 134 runs

Cricket World Cup: ಏಕದಿನ ವಿಶ್ವಕಪ್​ ಟೂರ್ನಿಯಲ್ಲಿ ಶ್ರೀಲಂಕಾ ಹಾಗೂ ಆಸ್ಟ್ರೇಲಿಯಾದಂತಹ ಪ್ರಬಲ ಎರಡು ತಂಡಗಳನ್ನು ಮಣಿಸುವ ಮೂಲಕ ದಕ್ಷಿಣ ಆಫ್ರಿಕಾ ಭರ್ಜರಿ ಪ್ರದರ್ಶನ ನೀಡಿದೆ.

ವೇಗಿ ಕಗಿಸೊ ರಬಾಡ
Kagiso Rabada
author img

By ETV Bharat Karnataka Team

Published : Oct 13, 2023, 2:02 PM IST

Updated : Oct 13, 2023, 2:08 PM IST

ಲಖನೌ (ಉತ್ತರ ಪ್ರದೇಶ): ದಕ್ಷಿಣ ಆಫ್ರಿಕಾ ತಂಡ ತನ್ನ ಮೊದಲೆರಡು ಪಂದ್ಯಗಳನ್ನು ಆರಾಮವಾಗಿ ಗೆಲ್ಲುವ ಮೂಲಕ ಏಕದಿನ ವಿಶ್ವಕಪ್​ನಲ್ಲಿ ಶುಭಾರಂಭ ಮಾಡಿದೆ. ಆದಾಗ್ಯೂ, ದಕ್ಷಿಣ ಆಫ್ರಿಕಾದ ವೇಗಿ ಕಗಿಸೊ ರಬಾಡ, ನಮ್ಮ ತಂಡ ಟೂರ್ನಿಯಲ್ಲಿ ಇನ್ನೂ ತುಂಬಾ ದೂರ ಸಾಗಬೇಕಿದೆ ಎಂದು ಹೇಳಿದ್ದಾರೆ.

ವಿಶ್ವಕಪ್​ ಇತಿಹಾಸದಲ್ಲಿ ದಕ್ಷಿಣ ಆಫ್ರಿಕಾ ತಂಡ 'ಚೋಕರ್ಸ್' ಎಂಬ ಹಣೆಪಟ್ಟಿ ಹೊಂದಿದೆ. ಪ್ರಸ್ತುತ ಸರಣಿಯಲ್ಲೂ ಆರಂಭ ಪಂದ್ಯಗಳಲ್ಲಿ ಹರಿಣಗಳು ಅದ್ಭುತ ಆಟದ ಪ್ರದರ್ಶನ ನೀಡಿದ್ದಾರೆ. ದೆಹಲಿಯಲ್ಲಿ ನಡೆದ ಮೊದಲ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ 102 ರನ್‌ಗಳ ಜಯದೊಂದಿಗೆ ವಿಶ್ವಕಪ್​ ಅಭಿಯಾನವನ್ನು ದಕ್ಷಿಣ ಆಫ್ರಿಕಾ ಪ್ರಾರಂಭಿಸಿದೆ. ಈ ಪಂದ್ಯದಲ್ಲಿ ಕ್ವಿಂಟನ್ ಡಿ ಕಾಕ್, ರಾಸ್ಸಿ ವ್ಯಾನ್ ಡೆರ್ ಡಸ್ಸೆನ್ ಮತ್ತು ಏಡೆನ್ ಮಾರ್ಕ್ರಾಮ್ ಮೂವರು ಕೂಡ ಶತಕಗಳನ್ನು ಬಾರಿಸಿದ್ದರು. ಗುರುವಾರ ಆಸ್ಟ್ರೇಲಿಯಾ ವಿರುದ್ಧದ ತನ್ನ ಎರಡನೇ ಪಂದ್ಯವನ್ನೂ ದಕ್ಷಿಣ ಆಫ್ರಿಕಾ ಗೆದ್ದು ಬೀಗಿದೆ. ಕ್ವಿಂಟನ್ ಡಿ ಕಾಕ್ ಅವರ ಬಿರುಸಿನ ಶತಕದ ನೆರವಿನೊಂದಿಗೆ ಕಾಂಗರೂ ಪಡೆ ಮೇಲೆ ಸವಾರಿ ಮಾಡಿದ ಹರಿಣಗಳು 134 ರನ್‌ಗಳ ಜಯ ದಾಖಲಿಸಿದ್ದಾರೆ. ಪ್ರಸ್ತುತ ಅಂಕಪಟ್ಟಿಯಲ್ಲಿ ದಕ್ಷಿಣ ಆಫ್ರಿಕಾ ತಂಡ ಅಗ್ರಸ್ಥಾನದಲ್ಲಿದೆ.

ಇದನ್ನೂ ಓದಿ: ಇಂಡೋ - ಪಾಕ್​ ಪಂದ್ಯ: ಅಹಮದಾಬಾದ್​ನಲ್ಲಿ ಹೋಟೆಲ್​ಗಳ ರೂಮ್​ ಬಾಡಿಗೆ ಎಷ್ಟಾಗಿದೆ ಗೊತ್ತಾ?

ಆಸ್ಟ್ರೇಲಿಯಾ ವಿರುದ್ಧದ ಪಂದ್ಯದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ದಕ್ಷಿಣ ಆಫ್ರಿಕಾದ ಆಟಗಾರ ಕಗಿಸೊ ರಬಾಡ, "ವಿಶ್ವಕಪ್​ ಟೂರ್ನಿಯಲ್ಲಿ​ ನಾವು ಇನ್ನೂ ಬಹಳ ದೂರದಲ್ಲಿದ್ದೇವೆ. ಆದರೆ, ಮುಂದೆ ಸಾಗಲು ನಮಗೆ ಸಾಕಷ್ಟು ಧನಾತ್ಮಕ ಅಂಶಗಳಿವೆ. ಆದ್ದರಿಂದ ಇದು ಒಳ್ಳೆಯದು. ನಾವು ಮುಂದಿನ ಪಂದ್ಯವನ್ನು ಎದುರು ನೋಡುತ್ತಿದ್ದೇವೆ. ಜೊತೆಗೆ ನಾವು ಇನ್ನಷ್ಟು ಸುಧಾರಿಸಲು ಬಯಸುತ್ತೇವೆ. ನಮ್ಮ ಸಾಮರ್ಥ್ಯಗಳು ಹಾಗೂ ದೌರ್ಬಲ್ಯಗಳನ್ನು ಸರಿಪಡಿಸಿಕೊಳ್ಳಲು ಪ್ರಯತ್ನಿಸುತ್ತೇವೆ'' ಎಂದು ತಿಳಿಸಿದ್ದಾರೆ.

ಮುಂದುವರೆದು, ''ನಾವು ಸಾಮಾನ್ಯವಾಗಿ ಕ್ರಿಕೆಟ್‌ನ ಪರಿಪೂರ್ಣ ಆಟವನ್ನು ಆಡಿದ್ದೇವೆ ಎಂದು ನಾನು ಭಾವಿಸುತ್ತೇನೆ. ಆದ್ದರಿಂದ ಇದನ್ನು ಅಲ್ಲಿಗೆ ಬಿಟ್ಟು ಮುಂದಿನ ಆಟದತ್ತ ಗಮನ ಹರಿಸುತ್ತೇವೆ. ಪ್ರತಿ ಪಂದ್ಯವನ್ನು ನಾವು ನೋಡುವಾಗ ಯಾವಾಗಲೂ ಸುಧಾರಿಸಬೇಕಾದ ಅಂಶಗಳು ಇರುತ್ತವೆ. ಹಿಂದಿನ ಪಂದ್ಯದಲ್ಲಿ ನಾವು ಕೆಲವು ಕ್ಷೇತ್ರಗಳಲ್ಲಿ ಆಲಸ್ಯ ತೋರಿದ್ದೇವೆ ಎಂಬ ಅಂಶವನ್ನು ನಾವು ಅರಿತುಕೊಂಡಿದ್ದೇವೆ. ಆದರೆ, ಕ್ರಿಕೆಟ್ ಆಟದಲ್ಲಿ ಸುಧಾರಿಸಲು ಯಾವಾಗಲೂ ಸ್ಥಳಗಳು ಇದ್ದೇ ಇರುತ್ತವೆ. ನಾವು ಅವುಗಳನ್ನು ವಿಶ್ಲೇಷಣೆ ಮಾಡುತ್ತೇವೆ. ನಾವು ಹೇಗೆ ಮುಂದುವರೆಯಬೇಕು ಎಂಬುದನ್ನು ಗಮನಿಸುತ್ತೇವೆ'' ಎಂದು 28 ವರ್ಷದ ವೇಗಿ ವಿವರಿಸಿದ್ದಾರೆ.

ಗುರುವಾರದ ಪಂದ್ಯದಲ್ಲಿ ಸ್ಟೀವ್ ಸ್ಮಿತ್, ಜೋಶ್ ಇಂಗ್ಲಿಸ್ ಮತ್ತು ಮಾರ್ಕಸ್ ಸ್ಟೊಯಿನಿಸ್ ಅವರ ಪ್ರಮುಖ ವಿಕೆಟ್​ಗಳನ್ನು ಕಗಿಸೊ ರಬಾಡ ಉರುಳಿಸಿ ಆಸ್ಟ್ರೇಲಿಯಾದ ಮಧ್ಯಮ ಕ್ರಮಾಂಕವನ್ನು ಕಟ್ಟಿ ಹಾಕಿದ್ದರು. ಶ್ರೀಲಂಕಾದ ವಿರುದ್ಧದ ಪಂದ್ಯದಲ್ಲೂ ಅವರು ಎರಡು ವಿಕೆಟ್​ಗಳನ್ನು ಪಡೆದಿದ್ದರು. ತೆಂಬಾ ಬವುಮಾ ನೇತೃತ್ವದ ದಕ್ಷಿಣ ಆಫ್ರಿಕಾ ತಂಡವು ಅಕ್ಟೋಬರ್ 17ರಂದು ಧರ್ಮಶಾಲಾದಲ್ಲಿ ನೆದರ್​ಲೆಂಡ್ಸ್​ ತಂಡವನ್ನು ಎದುರಿಸಲಿದೆ.

ಇದನ್ನೂ ಓದಿ: ಏಕದಿನ ವಿಶ್ವಕಪ್​: 'ಕಾಂಗರೂ'ಗಳ ಬಗ್ಗುಬಡಿದ 'ಹರಿಣ'ಗಳಿಗೆ ಸತತ 2ನೇ ಗೆಲುವು, ಪಾಯಿಂಟ್​ ಪಟ್ಟಿಯಲ್ಲಿ ಅಗ್ರಸ್ಥಾನ

Last Updated : Oct 13, 2023, 2:08 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.