ಹೈದರಾಬಾದ್: ವಿಶ್ವದ ಕ್ರಿಕೆಟ್ ಪ್ರೇಮಿಗಳು ಕಾತರದಿಂದ ಎದುರು ನೋಡುತ್ತಿರುವ ಏಕದಿನ ವಿಶ್ವಕಪ್ ಸರಣಿ ಅಕ್ಟೋಬರ್ 5 ರಿಂದ ಪ್ರಾರಂಭವಾಗಲಿದೆ. ಈಗಾಗಲೇ ವಿಶ್ವಕಪ್ ಸರಣಿಯಲ್ಲಿ ಭಾಗಿಯಾಗಲಿರುವ ಎಲ್ಲ 10 ತಂಡಗಳು ಭಾರತಕ್ಕೆ ಬಂದಿಳಿದಿದ್ದು, ಅಭ್ಯಾಸ ಪಂದ್ಯಗಳನ್ನು ಆಡುತ್ತಿವೆ. ಇಂದು ನ್ಯೂಜಿಲ್ಯಾಂಡ್ ಮತ್ತು ಸೌತ್ ಆಫ್ರಿಕಾ ನಡುವಿನ ಅಭ್ಯಾಸ ಪಂದ್ಯ ಕೇರಳದ ರಾಜಧಾನಿ ತಿರುವನಂತಪುರಂನಲ್ಲಿ ನಡೆಯುತ್ತಿದೆ. ಇದಕ್ಕಾಗಿ ತಂಡದ ಆಟಗಾರರು ತಿರುವನಂತಪುರಂಗೆ ಆಗಮಿಸಿದ್ದಾರೆ. ಇದರ ನಡುವೆಯೇ ದಕ್ಷಿಣ ಆಫ್ರಿಕಾ ಆಟಗಾರರು ತಿರುವನಂತಪುರಂ ಉಚ್ಚಾರಣೆಯನ್ನು ಭಿನ್ನ ವಿಭಿನ್ನವಾಗಿ ಹೇಳಿರುವುದು ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ.
-
The South African have arrived in Thiruvananthapuram ! But can they tell anyone where they are? pic.twitter.com/N9LnyVLVH9
— Shashi Tharoor (@ShashiTharoor) October 1, 2023 " class="align-text-top noRightClick twitterSection" data="
">The South African have arrived in Thiruvananthapuram ! But can they tell anyone where they are? pic.twitter.com/N9LnyVLVH9
— Shashi Tharoor (@ShashiTharoor) October 1, 2023The South African have arrived in Thiruvananthapuram ! But can they tell anyone where they are? pic.twitter.com/N9LnyVLVH9
— Shashi Tharoor (@ShashiTharoor) October 1, 2023
ವಿಡಿಯೋದಲ್ಲಿ 'ತಿರುವನಂತಪುರಂ' ಹೆಸರನ್ನು ಸ್ಪಷ್ಟವಾಗಿ ಉಚ್ಚರಿಸಲು ಡೇವಿಡ್ ಮಿಲ್ಲರ್, ರಾಸ್ಸಿ ವ್ಯಾನ್ ಡೆರ್ ಡಸ್ಸೆನ್, ಮತ್ತು ಹೆನ್ರಿಚ್ ಕ್ಲಾಸೆನ್ ಬಾರಿ ಕಸರತ್ತು ಮಾಡಿದ್ದಾರೆ. ಅವರ ತಿರುವನಂತಪುರಂನ ಉಚ್ಛಾರಣೆ ಕ್ರಿಕೆಟ್ ಪ್ರೇಮಿಗಳನ್ನು ರಂಜಿಸಿವೆ. 'ತಿರುವರಪುತನಂ, ತಿರುಪುನವರ, ತಿರುವಂತಂಪಿತ್ರುಂ, ತಿರುಂಪುರಂಭಂ ಹೀಗೆ ಭಿನ್ನ ವಿಭಿನ್ನವಾಗಿ ಉಚ್ಚರಿಸಿದ್ದಾರೆ. ಈ ವಿಡಿಯೋವನ್ನು ತಿರುವನಂತಪುರಂನ ಸಂಸದರಾಗಿರುವ ಕಾಂಗ್ರೆಸ್ ನಾಯಕ ಶಶಿತರೂರ್ ತಮ್ಮ ಅಧಿಕೃತ ಎಕ್ಸ್ (ಟ್ವಿಟರ್) ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ದಕ್ಷಿಣ ಆಫ್ರಿಕಾ ಆಟಗಾರರು ತಿರುವನಂತಪುರಂಗೆ ಆಗಮಿಸಿದ್ದಾರೆ. ಆದರೆ ಅವರು ಯಾವ ಊರಲ್ಲಿದ್ದಾರೆ ಎಂಬುದು ಹೇಳಬಹುದೇ ಎಂದು ಬರೆದು ವಿಡಿಯೋವನ್ನು ಶೇರ್ ಮಾಡಿದ್ದಾರೆ.
ಅಫ್ಘಾನಿಸ್ತಾನ ವಿರುದ್ಧದ ದಕ್ಷಿಣ ಆಫ್ರಿಕಾದ ಮೊದಲ ಅಭ್ಯಾಸ ಪಂದ್ಯ ಮಳೆಯಿಂದಾಗಿ ರದ್ದಾಗಿತ್ತು. ಇಂದು ನ್ಯೂಜಿಲ್ಯಾಂಡ್ ವಿರುದ್ಧ ಅಭ್ಯಾಸ ಪಂದ್ಯ ನಡೆಯಲಿದೆ. ಇದು ಆ ತಂಡಗಳ ಅಂತಿಮ ಅಭ್ಯಾಸ ಪಂದ್ಯವಾಗಿದೆ. ಅಕ್ಟೋಬರ್ 7 ರಿಂದ ದಕ್ಷಿಣ ಆಫ್ರಿಕಾದ ವಿಶ್ವಕಪ್ ಅಭಿಯಾನ ಆರಂಭಗೊಳ್ಳಲಿದೆ. ತೆಂಬಾ ಬವುಮಾ ನೇತೃತ್ವದ ತಂಡ ಶ್ರೀಲಂಕಾ ವಿರುದ್ಧ ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಸೆಣಸಲಿದೆ.
ಬಲಿಷ್ಠ ತಂಡಗಳಾಗಿರುವ ನ್ಯೂಜಿಲ್ಯಾಂಡ್ ಮತ್ತು ಸೌತ್ ಆಫ್ರಿಕಾ ಈ ವರೆಗೂ ವಿಶ್ವಕಪ್ಗಳನ್ನು ಗೆದ್ದಿಲ್ಲ. 1992 ವಿಶ್ವಕಪ್ ಸರಣಿಯಲ್ಲಿ ಸೆಮಿ-ಫೈನಲ್ ಹಂತಕ್ಕೆ ತಲುಪಿದ್ದ ದಕ್ಷಿಣ ಆಫ್ರಿಕಾ ಡಿಎಲ್ಎಸ್ ನಿಯಮದಿಂದ ಪರಾಜಯಗೊಂಡಿತ್ತು. 1996 ರಲ್ಲಿ ಕ್ವಾರ್ಟರ್-ಫೈನಲ್‌ನಲ್ಲಿ ಕೂಡಾ ಸೋಲನುಭವಿಸಿತ್ತು. 1999ರಲ್ಲಿ ಸೆಮಿ-ಫೈನಲ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಸೋಲನುಭವಿಸಿತ್ತು. 2007 ಮತ್ತು 2011 ಮತ್ತು 2015 ರ ಆವೃತ್ತಿಗಳಲ್ಲಿ ಕ್ರಮವಾಗಿ ಕ್ವಾರ್ಟರ್ ಫೈನಲ್ ಮತ್ತು ಸೆಮಿ-ಫೈನಲ್ ಹಂತದ ವರೆಗೂ ಆಗಮಿಸಿರುವ ಸೌತ್ ಆಫ್ರಿಕಾ ಕೊನೆಯ ಹಂತದಲ್ಲಿ ಸರಣಿಯಿಂದ ಹೊರ ಬೀಳುತ್ತಿದೆ. ಈ ಬಾರಿಯ ಟೂರ್ನಿಯಲ್ಲಿ ಈ ಎರಡು ತಂಡಗಳು ಟ್ರೋಫಿ ಮೇಲೆ ಕಣ್ಣಿಟ್ಟಿದ್ದು, ಪ್ರಬಲ ಪೈಪೋಟಿ ನೀಡಲಿವೆ.
ಇದನ್ನೂ ಓದಿ: ಶೂನ್ಯದಿಂದ ಸ್ಟಾರ್ ಪಟ್ಟ! ಟೀಂ ಇಂಡಿಯಾ ವೇಗದ ಬೌಲರ್ ಮಹಮ್ಮದ್ ಸಿರಾಜ್ ರೋಚಕ ಕಹಾನಿ