ETV Bharat / sports

ಜ್ವರದಿಂದ ಚೇತರಿಸಿಕೊಂಡು ಒಂದು ಗಂಟೆ ನೆಟ್ ಅಭ್ಯಾಸ ಮಾಡಿದ ಕ್ರಿಕೆಟಿಗ ಶುಭ್​ಮನ್​ಗಿಲ್ - Shubman Gill in Ahmedabad

ಅಹಮದಾಬಾದ್​ನಲ್ಲಿ ಭಾರತ ತಂಡ ಸೇರಿಕೊಂಡಿರುವ ಶುಭ್​ಮನ್​ ಗಿಲ್​, ಒಂದು ಗಂಟೆ ನೆಟ್ ಅಭ್ಯಾಸ ಮಾಡಿದರು.

ಶುಭ್​ಮನ್​ಗಿಲ್
ಶುಭ್​ಮನ್​ಗಿಲ್
author img

By ETV Bharat Karnataka Team

Published : Oct 12, 2023, 8:11 PM IST

ಅಹಮದಾಬಾದ್ (ಗುಜರಾತ್): ಟೀಂ ಇಂಡಿಯಾದ ಭವಿಷ್ಯದ ತಾರೆ ಎಂದೇ ಗುರುತಿಸಿಕೊಂಡಿರುವ ಶುಭ್​​ಮನ್​ ಗಿಲ್​ ಡೆಂಘೀ ಜ್ವರದಿಂದ ಚೇತರಿಸಿಕೊಳ್ಳುತ್ತಿದ್ದು, ಇಂದು ಅವರು ಗುಜರಾತ್​ನ ಅಹಮದಾಬಾದ್​ಗೆ ಬಂದಿಳಿದರು. ಭಾರತ ಕ್ರಿಕೆಟ್​ ತಂಡವನ್ನು ಸೇರಿಕೊಂಡಿರುವ ಆಟಗಾರ, ಗುರುವಾರ ಸಂಜೆ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಒಂದು ಗಂಟೆ ಕಾಲ ನೆಟ್​ ಅಭ್ಯಾಸ ನಡೆಸಿದರು. ಇದು ತಂಡಕ್ಕೆ ದೊಡ್ಡ ನಿರಾಳತೆ ತಂದಿದೆ.

ವಿಶ್ವದ ದೊಡ್ಡ ಕ್ರೀಡಾಂಗಣವಾಗಿರುವ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಅಕ್ಟೋಬರ್ 14 ರಂದು ಬದ್ಧವೈರಿ ಪಾಕಿಸ್ತಾನ ವಿರುದ್ಧ ನಡೆಯಲಿರುವ ಹೈವೋಲ್ಟೇಜ್​ ಪಂದ್ಯಕ್ಕೆ ಗಿಲ್ ಲಭ್ಯರಾಗುವ ಬಗ್ಗೆ ದೃಢಪಟ್ಟಿಲ್ಲ. ಆದರೆ, ಜ್ವರದಿಂದ ಗುಣಮುಖರಾಗುತ್ತಿರುವ ಅವರು ತಂಡದ ಜೊತೆಗೆ ಕಾಣಿಸಿಕೊಂಡಿದ್ದು, ಕ್ರಿಕೆಟ್​ ಅಭಿಮಾನಿಗಳಲ್ಲಿ ಸಂತಸ ತಂದಿದೆ.

ವಿಶ್ವಕಪ್​ ಆರಂಭಕ್ಕೂ ಮೊದಲು ಅನಾರೋಗ್ಯಕ್ಕೀಡಾದ ಗಿಲ್ ಚೆನ್ನೈನಲ್ಲಿ ನಡೆದ ಆಸ್ಟ್ರೇಲಿಯಾ ಮತ್ತು ನವದೆಹಲಿಯಲ್ಲಿ ಅಫ್ಘಾನಿಸ್ತಾನದ ವಿರುದ್ಧದ ಮೊದಲೆರಡು ಪಂದ್ಯಗಳನ್ನು ತಪ್ಪಿಸಿಕೊಂಡರು. ತಂಡದ ಚೆನ್ನೈ ತೆರಳಿದ್ದಾಗ ಅಲ್ಲಿಯೇ ಆಸ್ಪತ್ರೆಗೆ ದಾಖಲಾಗಿದ್ದರು. ಬಿಳಿ ರಕ್ತದ ಕಣಗಳ ಕೊರತೆಯಿಂದ ನಿತ್ರಾಣಕ್ಕೀಡಾಗಿರುವ ಗಿಲ್​ ಮೇಲೆ ವೈದ್ಯರು ತೀವ್ರ ನಿಗಾ ಇಟ್ಟಿದ್ದಾರೆ. ಇದೀಗ ಆಟಗಾರನ ಆರೋಗ್ಯದಲ್ಲಿ ಸುಧಾರಣೆ ಕಾಣುತ್ತಿದೆ. ಭಾರತ-ಪಾಕಿಸ್ತಾನದ ಪಂದ್ಯದಲ್ಲಿ ಗಿಲ್ ಸ್ಥಾನ ಪಡೆಯದಿದ್ದರೂ, ತಂಡದ ಜೊತೆಗೆ ಕಾಣಿಸಿಕೊಳ್ಳಲಿದ್ದಾರೆ ಎಂದು ETV ಭಾರತ್ ಬುಧವಾರ ತನ್ನ ವರದಿ ಮಾಡಿತ್ತು. ಅದೀಗ ಸತ್ಯವಾಗಿದೆ.

ಚೆನ್ನೈನಲ್ಲಿ ಚಿಕಿತ್ಸೆ: ಶುಭ್‌ಮನ್ ಗಿಲ್ ಅವರು ಚೆನ್ನೈನ ಕಾವೇರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡರು. ಎಲ್ಲಾ ಪರೀಕ್ಷೆಗಳನ್ನು ನಡೆಸಲಾಗಿದ್ದು, ಡೆಂಘೀ ಚಿಕಿತ್ಸೆಗೆ ಸ್ಪಂದಿಸಿದರು. ಆಸ್ಪತ್ರೆಯಲ್ಲಿ ಒಂದು ರಾತ್ರಿ ಕಳೆದ ನಂತರ ಗಿಲ್ ಅವರನ್ನು ಹೋಟೆಲ್‌ಗೆ ವಾಪಸ್​ ಕರೆತರಲಾಯಿತು. ಅಲ್ಲಿಂದ ಬುಧವಾರ ರಾತ್ರಿ ಅಹಮದಾಬಾದ್‌ಗೆ ಬಂದಿಳಿದರು. ಇದೀಗ ತಂಡ ಸೇರಿಕೊಂಡಿದ್ದು, ಜೊತೆಗೆ ಕೆಲ ಕಾಲ ನೆಟ್​ನಲ್ಲಿ ಅಭ್ಯಾಸ ನಡೆಸಿರುವುದು ತಂಡಕ್ಕೆ ಪ್ಲಸ್​​ ಪಾಯಿಂಟ್​ ಆಗಿದೆ.

ನಿರೀಕ್ಷೆಗಿಂತ ಬೇಗ ಚೇತರಿಸಿಕೊಳ್ಳುತ್ತಿರುವ ಶುಭ್‌ಮನ್ ಗಿಲ್ ಮೇಲೆ ತಂಡದ ವೈದ್ಯ ರಿಜ್ವಾನ್ ನೇತೃತ್ವದಲ್ಲಿ ನಿಗಾ ವಹಿಸಲಾಗಿದೆ. ಪಾಕಿಸ್ತಾನ ವಿರುದ್ಧ ಕಣಕ್ಕಿಳಿಯದಿದ್ದರೂ, ಅಕ್ಟೋಬರ್ 19 ರಂದು ಪುಣೆಯಲ್ಲಿ ಬಾಂಗ್ಲಾದೇಶ ವಿರುದ್ಧ ಪಂದ್ಯಕ್ಕೆ ಲಭ್ಯವಿರುತ್ತಾರೆ ಎಂದು ಹೇಳಬಹುದು. ಐಸಿಸಿ ಈಚೆಗೆ ಬಿಡುಗಡೆ ಮಾಡಿರುವ ಪಟ್ಟಿಯಲ್ಲಿ ಗಿಲ್​ ವಿಶ್ವಕ್ರಿಕೆಟ್​ನ 2ನೇ ಅಗ್ರ ಬ್ಯಾಟರ್​ ಸ್ಥಾನದಲ್ಲಿ ಮುಂದುವರಿದಿದ್ದಾರೆ. ನಂಬರ್​ 1 ಸ್ಥಾನದಲ್ಲಿರುವ ಪಾಕಿಸ್ತಾನದ ಬಾಬರ್​ ಅಜಂಗಿಂತ 5 ರೇಟಿಂಗ್​ ಪಾಯಿಂಟ್​ ಮಾತ್ರ ಹಿಂದಿದ್ದಾರೆ.

ಇದನ್ನೂ ಓದಿ: ಸ್ಟಾರ್​ ಆಟಗಾರ ಶುಭ್‌ಮನ್ ಗಿಲ್ ಆಸ್ಪತ್ರೆಯಿಂದ ಡಿಸ್ಚಾರ್ಜ್: ಪಾಕ್ ವಿರುದ್ಧ ಕಣಕ್ಕೆ ಅನುಮಾನ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.