ETV Bharat / sports

World Cup 2023: ಮೈದಾನಕ್ಕೆ ಬಂದು ಆಟಗಾರರಿಗೆ ತೊಂದರೆ ಮಾಡಿದ ಯೂಟ್ಯೂಬರ್​.. ಯಾರೀತ ಜಾರ್ವೋ? - ಮೈದಾನಕ್ಕೆ ಬಂದು ಆಟಗಾರರಿಗೆ ತೊಂದರೆ ಮಾಡಿದ ಯೂಟ್ಯೂಬರ್

ಆಸ್ಟ್ರೇಲಿಯಾ ಮತ್ತು ಭಾರತದ ನಡುವೆ ನಡೆಯುತ್ತಿರುವ ವಿಶ್ವಕಪ್​ ಪಂದ್ಯದ ವೇಳೆ ಜಾರ್ವೋ ಎಂಬ ಯೂಟ್ಯೂಬರ್​ ಭದ್ರತಾ ನಿಯಮ ಉಲ್ಲಂಘಿಸಿ ಮೈದಾನಕ್ಕೆ ಬಂದಿದ್ದಾನೆ.

Etv Bharat
Etv Bharat
author img

By ETV Bharat Karnataka Team

Published : Oct 8, 2023, 5:57 PM IST

ಚೆನ್ನೈ (ತಮಿಳುನಾಡು): ಕ್ರಿಕೆಟ್​ನಲ್ಲಿ ಮೊದಲು ಅಭಿಮಾನಿಗಳು ನೇರ ಮೈದಾನಕ್ಕೆ ಬರುವಂತಿತ್ತು. ನಂತರದ ದಿನಗಳಲ್ಲಿ ಆಟಗಾರರ ರಕ್ಷಣೆ ಹೆಚ್ಚಾಗಿದ್ದು, ಗ್ಯಾಲರಿಯನ್ನು ದಾಟಿ ಮೈದಾನಕ್ಕೆ ಬರುವುದು ಹರಸಾಹಸದ ಕೆಲಸವಾಗಿದೆ. ಪ್ರೇಕ್ಷಕರ ಗ್ಯಾಲರಿ ಮತ್ತು ಮೈದಾನದ ನಡುವೆ 10 ಅಡಿಗೂ ಎತ್ತರದ ಕಬ್ಬಿಣದ ಗ್ಯಾಲರಿಯನ್ನು ಹಾಕಲಾಗಿರುತ್ತದೆ. ಆದರೆ ಕ್ರಿಕೆಟ್​ ಆಟಗಾರರ ಬಗೆಗಿನ ಹುಚ್ಚು ಪ್ರೀತಿಯಿಂದ ಕೆಲವೊಮ್ಮೆ ಈ ಕಬ್ಬಿಣದ ಕಂಬಿಗಳು ಅಭಿಮಾನಿಗಳಿಗೆ ಅಭೇದ್ಯವಾಗಿರುವುದಿಲ್ಲ. ಅದನ್ನು ದಾಟಿ ಮೈದಾನಕ್ಕೆ ಬಂದ ನಿದರ್ಶನಗಳೂ ತುಂಬಾ ಇವೆ.

ಅದರಲ್ಲಿ ಡೇನಿಯಲ್ ಜಾರ್ವಿಸ್ ಎಂಬಾತ ಮೈದಾನಕ್ಕೆ ಬರುವುದನ್ನೇ ಚಾಳಿಯಾಗಿ ಮಾಡಿಕೊಂಡಿದ್ದು ಆಗಾಗ ಮೈದಾನಕ್ಕೆ ಪ್ರವೇಶಿಸಿ ಆಟಗಾರರಿಗೆ ತೊಂದರೆ ಕೊಡುತ್ತಿರುತ್ತಾರೆ. ಇಂದು ಭಾರತ ಮತ್ತು ಆಸ್ಟ್ರೇಲಿಯಾದ ನಡುವೆ ಚೆನ್ನೈನ ಎಂ ಎ ಚಿದಂಬರಮ್​ ಕ್ರೀಡಾಂಗಣದಲ್ಲಿ ವಿಶ್ವಕಪ್​ನ 5ನೇ ಪಂದ್ಯ ನಡೆಯುತ್ತಿದ್ದು, ಈ ವೇಳೆಯು ಮೈದಾನಕ್ಕಿಳಿದಿದ್ದಾನೆ.

ಜಾರ್ವೋ ಯಾರು?: ಜನಪ್ರಿಯ ಮತ್ತು ವಿವಾದಾತ್ಮಕ ಕುಚೇಷ್ಟೆಗಾರ ಡೇನಿಯಲ್ ಜಾರ್ವಿಸ್, ಜಾರ್ವೋ 69ನೇ ಬಾರಿ ಭದ್ರತೆಯನ್ನು ಉಲ್ಲಂಘಿಸಿ ಮೈದಾನಕ್ಕೆ ಬಂದಿದ್ದಾನೆ. ಫೀಲ್ಡಿಂಗ್​ ಮಾಡುತ್ತಿದ್ದ ಭಾರತೀಯ ಆಟಗಾರರ ಜೊತೆಗೆ ಜಾರ್ವೋ ಸೇರಿಕೊಂಡಿದ್ದಾನೆ. ಈ ವೇಳೆ ಭದ್ರತಾ ಸಿಬ್ಬಂದಿ ಆತನನ್ನು ಹೊರಗೆ ಕಳಿಸಿದ್ದಾರೆ. ಆಗ ವಿರಾಟ್​ ಕೊಹ್ಲಿ ಜಾರ್ವೋ ಬಳಿಗೆ ಬಂದು ಮಾತನಾಡಿಸಿ ಹೊರಗೆ ಹೋಗು ಎಂದು ಹೇಳಿದ್ದಾರೆ. ಇಂಗ್ಲೆಂಡ್​ನ ಜಾರ್ವೋ bmwjarvo ಹೆಸರಿನ ತನ್ನ YouTube ಚಾನಲ್​ ಮೂಲಕ ಹೆಸರುವಾಸಿಯಾಗಿದ್ದಾನೆ. ಅನೇಕ ಪಂದ್ಯಗಳಲ್ಲಿ ಈತ ಈ ರೀತಿಯ ಪ್ರ್ಯಾಂಕ್​ ವಿಡಿಯೋಗಳನ್ನು ಮಾಡುತ್ತಾ ಫೇಮಸ್​ ಆಗಿದ್ದಾನೆ.

ಈ ಹಿಂದೆ ಓವಲ್‌ನಲ್ಲಿ ನಡೆದಿದ್ದ ನಾಲ್ಕನೇ ಟೆಸ್ಟ್‌ನಲ್ಲಿ ಭಾರತ ಇಂಗ್ಲೆಂಡ್ ವಿರುದ್ಧ ಆಡುತ್ತಿದ್ದಾಗ ಜಾರ್ವೋ ಇದೇ ರೀತಿ ಮೈದಾನಕ್ಕೆ ಬಂದಿದ್ದ. ಈಗ ವಿಶ್ವಕಪ್​ನ ಪಂದ್ಯದಲ್ಲಿ ಕಾಣಿಸಿಕೊಂಡಿದ್ದಾನೆ. ಅಲ್ಲದೇ ಚೆಪಾಕ್​ನಲ್ಲಿ ಎರಡು ಬಾರಿ ಮೈದಾನಕ್ಕೆ ಬಂದಿದ್ದಾನೆ.

ಪಂದ್ಯದಲ್ಲಿ: ಚೆಪಾಕ್​ನ ಸ್ಪಿನ್​ ಮೈದಾನದಲ್ಲಿ ಭಾರತೀಯ ಸ್ಪಿನ್ನರ್​ಗಳು ಮೋಡಿ ಮಾಡುತ್ತಿದ್ದು, ಆಸ್ಟ್ರೇಲಿಯಾವನ್ನು ಕಾಡುತ್ತಿದ್ದಾರೆ. ರವೀಂದ್ರ ಜಡೇಜಾ, ಕುಲ್ದೀಪ್​ ಯಾದವ್​ ಮತ್ತು ರವಿಚಂದ್ರನ್​ ಅಶ್ವಿನ್​ ಜೋಡಿ ನಿಯಂತ್ರಿತ ಬೌಲಿಂಗ್​ ಜೊತೆಗೆ ವಿಕೆಟ್​ ತೆಗೆಯುವುದರಲ್ಲೂ ಯಶಸ್ವಿಯಾಗುತ್ತಿದ್ದಾರೆ. ಬಲಿಷ್ಠ ಆಸ್ಟ್ರೇಲಿಯಾವನ್ನು 200 ರ ಒಳಗೆ ನಿಯಂತ್ರಿಸುವ ಲೆಕ್ಕಾಚಾರದಲ್ಲಿ ಭಾರತ ಇದ್ದಂತಿದೆ. ಟಾಸ್​​ ಗೆದ್ದು ಬ್ಯಾಟಿಂಗ್​ ಆಯ್ಕೆ ಮಾಡಿಕೊಂಡ ಆಸ್ಟ್ರೇಲಿಯಾದ ದೊಡ್ಡ ಮೊತ್ತ ಕಲೆಹಾಕುವ ಲೆಕ್ಕಾಚಾರ ಅಡಿಮೇಲಾದಂತಿದೆ.

ಇದನ್ನೂ ಓದಿ: ನೆದರ್​ಲ್ಯಾಂಡ್ ವಿರುದ್ಧವೂ ಕಣಕ್ಕಿಳಿಯುತ್ತಿಲ್ಲ ಕಿವೀಸ್​ ನಾಯಕ.. ಮೂರನೇ ಪಂದ್ಯಕ್ಕೆ ಆಡುವ ನಿರೀಕ್ಷೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.