ಚೆನ್ನೈ (ತಮಿಳುನಾಡು): ಇಲ್ಲಿನ ಎಂ ಎ ಚಿದಂಬರಮ್ ಕ್ರೀಡಾಂಗಣದ ಪಿಚ್ ಸ್ಪಿನ್ ಬೌಲರ್ಗಳಿಗೆ ನೆಚ್ಚಿನದ್ದಾಗಿದೆ. ಅದರಂತೆ ವಿಶ್ವಕಪ್ನ ಮೊದಲ ಪಂದ್ಯದಲ್ಲಿ ಭಾರತದ ತ್ರಿವಳಿ ಸ್ಪಿನ್ನರ್ಗಳು ಯಶಸ್ವಿಯಾಗಿ ನಿಯಂತ್ರಿಸಿದರು. ಆಸ್ಟ್ರೇಲಿಯಾ 49.3 ಓವರ್ ಅಂತ್ಯಕ್ಕೆ 10 ವಿಕೆಟ್ ಕಳೆದುಕೊಂಡು 199 ರನ್ ಗಳಿಸಿದೆ. ವಿಶ್ವಕಪ್ನಲ್ಲಿ ಶುಭಾರಂಭ ಮಾಡಲು ರೋಹಿತ್ ಪಡೆ 200 ರನ್ ಗುರಿ ಭೇದಿಸಬೇಕಿದೆ.
ಚೆಪಾಕ್ ಮೈದಾನದಲ್ಲಿ ಟಾಸ್ ಗೆದ್ದ ಆಸಿಸ್ ನಾಯಕ ಪ್ಯಾಟ್ ಕಮಿನ್ಸ್ ಮೊದಲು ಬ್ಯಾಟಿಂಗ್ ಮಾಡುವ ನಿರ್ಧಾರವನ್ನು ಮಾಡಿದರು. ಆದರೆ ನಾಯಕನ ನಿರ್ಧಾರವನ್ನು ಸಮರ್ಥಿಸುವಲ್ಲಿ ಬ್ಯಾಟರ್ಗಳು ವಿಫಲರಾದರು ಅಥವಾ ಭಾರತೀಯ ಬೌಲರ್ಗಳು ಆಸ್ಟ್ರೇಲಿಯಾದ ಲೆಕ್ಕಾಚಾರವನ್ನು ಅಡಿಮೇಲು ಮಾಡಿದರು. ಹೊಸ ಬಾಲ್ನಲ್ಲಿ ಯಾವಾಗಲೂ ಪರಿಣಾಮಕಾರಿ ಆದ ಬುಮ್ರಾ ಆಸ್ಟ್ರೇಲಿಯಾವನ್ನು ಆರಂಭದಲ್ಲೇ ಕಾಡಿದರು. ನಂತರ ಸ್ಪಿನ್ನರ್ಗಳು ಆಸಿಸ್ನ ರನ್ ಬೇಟೆಗೆ ಕಡಿವಾಣ ಹಾಕಲು ಯಶಸ್ವಿ ಆದರು.
-
Innings break!
— BCCI (@BCCI) October 8, 2023 " class="align-text-top noRightClick twitterSection" data="
Australia are all out for 199 courtesy of a solid bowling performance from #TeamIndia 👏👏
Ravindra Jadeja the pick of the bowlers with figures of 3/28 👌👌
Scorecard ▶️ https://t.co/ToKaGif9ri#CWC23 | #INDvAUS | #MeninBlue pic.twitter.com/TSf9WN4Bkz
">Innings break!
— BCCI (@BCCI) October 8, 2023
Australia are all out for 199 courtesy of a solid bowling performance from #TeamIndia 👏👏
Ravindra Jadeja the pick of the bowlers with figures of 3/28 👌👌
Scorecard ▶️ https://t.co/ToKaGif9ri#CWC23 | #INDvAUS | #MeninBlue pic.twitter.com/TSf9WN4BkzInnings break!
— BCCI (@BCCI) October 8, 2023
Australia are all out for 199 courtesy of a solid bowling performance from #TeamIndia 👏👏
Ravindra Jadeja the pick of the bowlers with figures of 3/28 👌👌
Scorecard ▶️ https://t.co/ToKaGif9ri#CWC23 | #INDvAUS | #MeninBlue pic.twitter.com/TSf9WN4Bkz
ಇನ್ನಿಂಗ್ಸ್ನ ಮೂರನೇ ಮತ್ತು ವೈಯುಕ್ತಿಕ ಎರಡನೇ ಓವರ್ ಮಾಡಿದ ಬುಮ್ರಾ ಆರಂಭಿಕ ಆಟಗಾರ ಮಿಚೆಲ್ ಮಾರ್ಷ್ ಅವರ ವಿಕೆಟ್ ಪಡೆದರು. ಶೂನ್ಯಕ್ಕೆ ವಿಕೆಟ್ ಕೊಟ್ಟು ಮಾರ್ಷ್ ಪೆವಿಲಿಯನ್ಗೆ ಮರಳಿದರು. ಎರಡನೇ ವಿಕೆಟ್ಗೆ ಒಂದಾದ ಅನುಭವಿ ಜೋಡಿ ಸ್ಟೀವ್ ಸ್ಮಿತ್ ಮತ್ತು ಡೇವಿಡ್ ವಾರ್ನರ್ ವಿಕೆಟ್ ನಿಲ್ಲಿಸುವ ಸಲುವಾಗಿ ರನ್ ಕಡೆ ಗಮನಹರಿಸದೇ ನಿಧಾನವಾಗಿ ಆಡಿದರು.
ಇಬ್ಬರು ಅನುಭವಿ ಆಟಗಾರರು ಅರ್ಧಶತಕಕ್ಕೂ ಮುನ್ನ ವಿಕೆಟ್ ಒಪ್ಪಿಸಿ ತಂಡಕ್ಕೆ ದೊಡ್ಡ ಇನ್ನಿಂಗ್ಸ್ ಕಟ್ಟುವಲ್ಲಿ ವಿಫಲರಾದರು. ಆದರೆ ಈ ಜೋಡಿ 69 ರನ್ನ ಪಾಲುದಾರಿಕೆಯನ್ನು ಮಾಡಿತು. ಇದೇ ಇನ್ನಿಂಗ್ಸ್ನ ದೊಡ್ಡ ಜೊತೆಯಾಟವಾಗಿದೆ. 52 ಬಾಲ್ನಲ್ಲಿ 41 ರನ್ ಗಳಿಸಿ ಆಡುತ್ತಿದ್ದ ವಾರ್ನರ್ ಕುಲ್ದೀಪ್ಗೆ ವಿಕೆಟ್ ಕೊಟ್ಟರೆ, 71 ಬಾಲ್ ಆಡಿ 46 ರನ್ ಗಳಿಸಿದ್ದ ಸ್ಮಿತ್ ಜಡೇಜಾಗೆ ವಿಕೆಟ್ ಒಪ್ಪಿಸಿದರು.
ಸ್ಮಿತ್ ವಿಕೆಟ್ ಪಡೆದ ನಂತರ ಜಡೇಜ ಆಸಿಸ್ನ ಮತ್ತೆರಡು ವಿಕೆಟ್ಗಳನ್ನು ತಮ್ಮ ಬತ್ತಳಿಕೆಗೆ ಸೇರಿಸಿಕೊಂಡರು. ಮಾರ್ನಸ್ ಲಬುಶೇನ್ (27) ಪಿಚ್ಗೆ ಸೆಟಲ್ ಆಗುವಷ್ಟರಲ್ಲಿ ಜಡೇಜಾ ಸ್ಪಿನ್ಗೆ ಔಟ್ ಆದರೆ, ಅವರ ಬೆನ್ನಲ್ಲೇ ಶೂನ್ಯಕ್ಕೆ ಅಲೆಕ್ಸ್ ಕ್ಯಾರಿ ಸಹ ಪೆವಿಲಿಯನ್ಗೆ ಮರಳಿದರು. ನಂತರ ಕ್ಯಾಮೆರಾನ್ ಗ್ರೀನ್ (8) ಅಶ್ವಿನ್ಗೆ ಬಲಿಯಾದರು. ನಾಯಕ ಪ್ಯಾಟ್ ಕಮಿನ್ಸ್ 15 ರನ್ಗೆ ಬುಮ್ರಾಗೆ ವಿಕೆಟ್ ಕೊಟ್ಟರು.
ನಂತರ ಟೇಲ್ ಎಂಡರ್ಗಳಾದ ಝಂಪಾ ಮತ್ತು ಸ್ಟಾರ್ಕ್ ವಿಕೆಟ್ನ್ನು ಹಾರ್ದಿಕ್ ಪಾಂಡ್ಯ ಮತ್ತು ಸಿರಾಜ್ ಪಡೆದು 49.3 ಓವರ್ ಆಸ್ಟ್ರೇಲಿಯಾವನ್ನು ಆಲ್ಔಟ್ಗೆ ತಳ್ಳಿದರು. 199 ರನ್ಗೆ ಆಸ್ಟ್ರೇಲಿಯಾ ಸರ್ವಪತನ ಕಂಡಿತು. ಭಾರತ ಪರ ಜಡೇಜಾ 3, ಕುಲ್ದೀಪ್, ಬುಮ್ರಾ 2 ವಿಕೆಟ್ ಪಡೆದರು. ಅಶ್ವಿನ್, ಸಿರಾಜ್, ಪಾಂಡ್ಯ ತಲಾ ಒಂದು ವಿಕೆಟ್ ಪಡೆದುಕೊಂಡರು.
ಇದನ್ನೂ ಓದಿ: ಏಷ್ಯನ್ ಗೇಮ್ಸ್: ಭಾರತೀಯ ಅಥ್ಲೀಟ್‌ಗಳು 107 ಪದಕ ಗೆದ್ದಿರುವುದು ಐತಿಹಾಸಿಕ ಸಾಧನೆ- ಪ್ರಧಾನಿ ಮೋದಿ ಮೆಚ್ಚುಗೆ