ETV Bharat / sports

ಟೀಂ ಇಂಡಿಯಾ ಗೆಲುವಿಗೆ ಪಾಕ್​ ಪ್ರಾರ್ಥನೆ: ಇಂಡೋ- ಇಂಗ್ಲೆಂಡ್ ವಾರ್​ ನೋಡ್ತಿವಿ ಎಂದ ಪಾಕ್​ ನಾಯಕ - undefined

ಇಂದು ನಡೆಯುವ ಭಾರತ ಮತ್ತು ಇಂಗ್ಲೆಂಡ್​ ನಡುವಿನ ಪಂದ್ಯ ಕೇವಲ ಇಂಗ್ಲೆಂಡ್​ಗೆ ಮಾತ್ರ ಮಹತ್ವದ್ದಾಗಿಲ್ಲ, ಪಾಕಿಸ್ತಾನಕ್ಕೂ ಮಹತ್ವದ್ದಾಗಿದೆ.

ಇಂಡೋ- ಇಗ್ಲೆಂಡ್ ವಾರ್​ ನೋಡ್ತೀವಿ ಎಂದ ಪಾಕ್​ ನಾಯಕ
author img

By

Published : Jun 30, 2019, 9:43 AM IST

Updated : Jun 30, 2019, 10:08 AM IST

ಬರ್ಮಿಂಗ್​ಹ್ಯಾಮ್: ಇಂದು ನಡೆಯಲಿರುವ ಭಾರತ ಮತ್ತು ಇಂಗ್ಲೆಂಡ್​ ನಡುವಿನ ವಿಶ್ವಕಪ್​ ಪಂದ್ಯದಲ್ಲಿ ಪಾಕಿಸ್ತಾನ ತಂಡದ ಅಭಿಮಾನಿಗಳು ಟೀಂ ಇಂಡಿಯಾ ಗೆಲುವು ಸಾಧಿಸಲಿ ಎಂದು ಪ್ರಾರ್ಥಿಸುತ್ತಿದ್ದಾರೆ.

ವಿಶ್ವಕಪ್​ ಟೂರ್ನಿಯಲ್ಲಿ ಈಗಾಗಲೇ 3 ಪಂದ್ಯಗಳನ್ನ ಸೋತಿರುವ ಅತಿಥೇಯ ಇಂಗ್ಲೆಂಡ್​ ತಂಡ ಸೆಮಿಫೈನಲ್​ ತಲುಪಲು ಮುಂದಿನ ಎರಡು ಪಂದ್ಯಗಳನ್ನ ಗೆಲ್ಲಲೇಬೇಕಾದ ಒತ್ತಡಕ್ಕೆ ಸಿಲುಕಿದೆ. ಇತ್ತ ಪಾಕಿಸ್ತಾನ ಕೂಡ ಸೆಮಿಸ್​ ರೇಸ್​ನಲ್ಲಿ ಉಳಿದುಕೊಳ್ಳಲು 1 ಪಂದ್ಯವನ್ನ ಗೆಲ್ಲಲೇಬೇಕಿದೆ.

ಇಂಗ್ಲೆಂಡ್​ ಸೋತರೆ ಪಾಕ್​ ಸೆಮೀಸ್​ ಆಸೆ ಜೀವಂತ:
ಭಾರತದ ವಿರುದ್ಧದ ಪಂದ್ಯದಲ್ಲಿ ಇಂಗ್ಲೆಂಡ್​ ಸೋಲು ಕಂಡು ಮುಂದಿನ ಪಂದ್ಯ ಗೆದ್ದರೂ ಕೂಡ ಒಟ್ಟು 10 ಅಂಕ ಗಳಿಸಲಿದೆ. 9 ಅಂಕ ಗಳಿಸಿರುವ ಪಾಕಿಸ್ತಾನ ಮುಂದಿನ 1 ಪಂದ್ಯ ಗೆದ್ದು, 11 ಅಂಕಗಳೊಂದಿಗೆ ಸೆಮಿಫೈನಲ್​ ತಲುಪುವ ಕನಸು ಕಾಣುತ್ತಿದೆ.

ಭಾರತಕ್ಕೆ ಪಾಕ್ ಅಭಿಮಾನಿಗಳ ಬೆಂಬಲ:
ಪಾಕಿಸ್ತಾನ​ ಸೆಮಿಫೈನಲ್​ ತಲುಪಬೇಕಾದರೆ ಇಂಗ್ಲೆಂಡ್​ ಸೋಲಬೇಕು. ಹೀಗಾಗಿ ಇಂದು ನಡೆಯಲಿರುವ ಇಂಗ್ಲೆಂಡ್​ ಮತ್ತು ಭಾರತ ನಡುವಿನ ಪಂದ್ಯದಲ್ಲಿ ಪಾಕ್​ ಅಭಿಮಾನಿಗಳು ಟೀಂ ಇಂಡಿಯಾಗೆ ಬೆಂಬಲ ನೀಡೋದಾಗಿ ಹೇಳಿದ್ದಾರೆ.

ನಿನ್ನೆ ನಡೆದ ಅಫ್ಘಾನಿಸ್ತಾನ ವಿರುದ್ಧದ ಪಂದ್ಯದಲ್ಲಿ ಪಾಕಿಸ್ತಾನ ಜಯ ಸಾಧಿಸಿದ್ದು ಇಂದು ಇಂಗ್ಲೆಂಡ್​ ತಂಡದ ಸೋಲು, ಗೆಲುವಿನ ಮೇಲೆ ಪಾಕ್ ಸೆಮೀಸ್​ ಕನಸು ನಿಂತಿದೆ. ನಿನ್ನೆ ಪಂದ್ಯ ಮುಗಿದ ನಂತರ ಮಾತನಾಡಿದ ಪಾಕ್ ನಾಯಕ ಸರ್ಫರಾಜ್ ಅಹ್ಮದ್​, ಭಾರತ ಮತ್ತು ಇಂಗ್ಲೆಂಡ್​ ನುವಿನ ಪಂದ್ಯವನ್ನ ನಾವು ವೀಕ್ಷಿಸುತ್ತೇವೆ. ಉತ್ತಮ ತಂಡ ಗೆಲುವು ಸಾಧಿಸುತ್ತದೆ, ಆ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಂಡಿಲ್ಲ ಎಂದಿದ್ದಾರೆ.

Intro:Body:Conclusion:
Last Updated : Jun 30, 2019, 10:08 AM IST

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.