ಲಂಡನ್: ಐಸಿಸಿ ವಿಶ್ವಕಪ್ ಅಂತಿಮ ಹಣಾಹಣಿ ಪಂದ್ಯದಲ್ಲಿ ಆತಿಥೇಯ ಇಂಗ್ಲೆಂಡ್ ತಂಡವು ಕಿವೀಸ್ ಮೇಲೆ ಮೇಲುಗೈ ಸಾಧಿಸುವತ್ತ ಸಾಗಿದೆ.
ನ್ಯೂಜಿಲೆಂಡ್ ಆರಂಭಿಕ ಹೊಡೆತದಿಂದ ಚೇತರಿಸಿಕೊಳ್ಳುವ ಹಂತದಲ್ಲಿ ಇರುವಾಗಲೇ ಇಂಗ್ಲೆಂಡ್ನ ಬೌಲಿಂಗ್ ಪಡೆಯು ವಿಕೆಟ್ಗಳನ್ನು ಉರುಳಿಸುತ್ತಿದೆ. ಕಿವೀಸ್ ಈವರೆಗೆ 37 ಓವರ್ಗಳಲ್ಲಿ 4.23 ಸರಾಸರಿಯಲ್ಲಿ 164 ರನ್ಗಳಿಸಿ ಪ್ರಮುಖ ನಾಲ್ಕು ವಿಕೆಟ್ಗಳನ್ನು ಕಳೆದುಕೊಂಡಿದೆ.
ಆರಂಭಿಕ ಆಟಗಾರ ಹೆನ್ರಿ ನಿಕೋಲ್ಸ್ ಹೊರತುಪಡಿಸಿ ಉಳಿದ ಯಾವೊಬ್ಬ ಆಟಗಾರ ಇಂಗ್ಲೆಂಡ್ನ ಮೊನಚಿನ ಬಾಲಿಂಗ್ ದಾಳಿಯನ್ನು ಎದುರಿಸೋದಕ್ಕೆ ಸಾಧ್ಯವಾಗಿಲ್ಲ. ನಾಯಕ ಕೇನ್ ವಿಲಿಯಮ್ಸನ್ ರಕ್ಷಣಾತ್ಮಕ ಆಟದ ಮೂಲಕ 53 ಎಸೆತಗಳಲ್ಲಿ 30 ರನ್ಗಳಿಸಿ ಅಲ್ಪ ಕಾಣಿಕೆ ನೀಡಿದ್ದುಬಿಟ್ಟರೆ, ಮಾರ್ಟಿನ್ ಗಫ್ಟಿಲ್ (19) ಮತ್ತು ರಾಸ್ ಟೇಲರ್ (15) ಸಂಪೂರ್ಣವಾಗಿ ವಿಫಲವಾಗಿದ್ದಾರೆ.
ಈವರೆಗೂ ಇಂಗ್ಲೆಂಡ್ನ ಲಿಯಾಮ್ ಪ್ಲಂಕೆಟ್ ಅವರು 8 ಓವರ್ ಎಸೆದು 32ರನ್ ನೀಡಿ ಪ್ರಮುಖ ಎರಡು ವಿಕೆಟ್ ಪಡೆದಿದ್ದರೇ, ಕ್ರಿಸ್ ವೋಕ್ಸ್ 7 ಓವರ್ಗಳಲ್ಲಿ 19 ರನ್ ನೀಡಿ 1 ವಿಕೆಟ್ ಹಾಗೂ ಮಾರ್ಕ್‌ವುಡ್ 7 ಓವರ್ ಎಸೆದು 1 ವಿಕೆಟ್ ಕಿತ್ತಿದ್ದಾರೆ. ಈ ಮೂಲಕ ಅಂತಿಮ ಪಂದ್ಯದಲ್ಲಿ ಕಿವೀಸ್ ಮೇಲೆ ಹಿಡಿತ ಸಾಧಿಸಿದ್ದಾರೆ.