ಲಂಡನ್: ಐಸಿಸಿ ವಿಶ್ವಕಪ್ ಅಂತಿಮ ಹಣಾಹಣಿ ಪಂದ್ಯದಲ್ಲಿ ಆತಿಥೇಯ ಇಂಗ್ಲೆಂಡ್ಗೆ ನ್ಯೂಜಿಲೆಂಡ್ ನೀಡಿದ 242 ರನ್ಗಳ ಸ್ಪರ್ಧಾತ್ಮಕ ಮೊತ್ತದ ಬೆನ್ನತ್ತಿದೆ ನಾಯಕ ಇಯಾನ್ ಮಾರ್ಗನ್ ಪಡೆಗೆ ಆರಂಭಿಕ ಹೊಡೆತ ಬಿದ್ದಿದೆ.
ಇಂಗ್ಲೆಂಡ್ ಪರವಾಗಿ ಕಣಕಿಳಿದ ಆರಂಭಿಕ ದಾಂಡಿಗಾರದ ಜೇಸನ್ ರಾಯ್ ಹಾಗೂ ಜಾನಿ ಬೈರ್‌ಸ್ಟೋವ್ ಅವರು ಉತ್ತಮ ತಳಪಾಯ ಹಾಕುವಲ್ಲಿ ವಿಫಲವಾಗಿದ್ದಾರೆ. 20 ಬಾಲ್ ಎದುರಿಸಿ 17 ರನ್ಗಳಿಸಿದ ರಾಯ್ ನ್ಯೂಜಿಲೆಂಡ್ನ ವೇಗಿ ಮ್ಯಾಟ್ ಹೆನ್ರಿಗೆ ವಿಕೆಟ್ ಒಪ್ಪಿಸಿದ್ದಾರೆ.
ನ್ಯೂಜಿಲೆಂಡ್ ಕೂಡ ಆರಂಭಿಕ ಆಘಾತಕ್ಕೆ ಒಳಗಾಗಿ 29ಕ್ಕೆ ಒಂದು ವಿಕೆಟ್ ಕಳೆದುಕೊಂಡಿತ್ತು. ಇಂಗ್ಲೆಂಡ್ ಸಹ ಅದೇ ಹಾದಿಯತ್ತ ಸಾಗಿದೆ. ಸದ್ಯ ಜಾನಿ ಬೈರ್‌ಸ್ಟೋವ್ 20 ಎಸೆತಗಳಿಂದ 14 ರನ್ ಹಾಗೂ ಜೋ ರೂಟ್ 3 ಬಾಲ್ಗಳಿಂದ 0 ರನ್ ಮುಖೇನ ಬ್ಯಾಟಿಂಗ್ ನಡೆಸುತ್ತಿದ್ದಾರೆ. ಪ್ರಸ್ತುತ ಇಂಗ್ಲೆಂಡ್ ಸ್ಕೋರ್.. 9.2 ಓವರ್ಗೆ ಒಂದು ವಿಕೆಟ್ ನಷ್ಟಕ್ಕೆ 39 ರನ್ ಪೇರಿಸಿದೆ.