ಲಂಡನ್: ಇಲ್ಲಿನ ಲಾರ್ಡ್ಸ್ ಮೈದಾನದಲ್ಲಿ ನಡೆಯುತ್ತಿರುವ ಐಸಿಸಿ ವಿಶ್ವಕಪ್ ರೋಚಕ ಫೈನಲ್ ಮುಖಾಮುಖಿ ಪಂದ್ಯಂದಲ್ಲಿ ನ್ಯೂಜಿಲೆಂಡ್ ಒಡ್ಡಿರುವ 242 ರನ್ ಗೆಲುವಿನ ಗುರಿ ಬೆನ್ನಟ್ಟುತ್ತಿರುವ ಇಂಗ್ಲೆಂಡ್ನ ಮೊದಲು ನಾಲ್ವರು ದಾಂಡಿಗರು ಪೆವಿಲಿಯನ್ ಸೇರಿದ್ದಾರೆ.
ಆರಂಭಿಕರಾಗಿ ಕಣಕ್ಕಿಳಿದ ಜೇಸನ್ ರಾಯ್ ಹಾಗೂ ಜಾನಿ ಬೈರ್‌ಸ್ಟೋವ್ ಅವರು ಉತ್ತಮ ರನ್ ಪೇರಿಸುವಲ್ಲಿ ಎಡವಿದ್ದು, ಈ ಜೋಡಿ ಮೊದಲ ವಿಕೆಟ್ಗೆ 28 ರನ್ಗಳನ್ನಷ್ಟೇ ಸೇರಿಸಿದರು. 'ಜೇಸನ್' ರಾಯ್ 17 (20), 'ಜಾನಿ' ರೋಟ್ 36 (55), 'ಜೋ' ರೂಟ್ 7 (30) ಹಾಗೂ ನಾಯಕ ಇಯಾನ್ ಮಾರ್ಗನ್ 5 (22) ರನ್ ಗಳಿಸಿ ಪೆವಿಲಿಯನತ್ತ ಹೆಜ್ಜೆ ಹಾಕಿದರು.
ಕಿವೀಸ್ ಪರ ಮಾರಕ ದಾಳಿ ನಡಿಸಿ ಆರಂಭದಿಂದಲೇ ಆಂಗ್ಲ ಬ್ಯಾಟಿಂಗ್ ಪಡೆಯ ಮೇಲೆ ಒತ್ತಡ ಹಾಕಿದ ಮ್ಯಾಟ್ ಹೆನ್ರಿ, ಟ್ರೆಂಟ್ ಬೌಲ್ಟ್, ಜೇಮ್ಸ್ ನೀಶಮ್ ಮತ್ತು ಲಾಕಿ ಫರ್ಗುಸನ್ ತಲಾ ಒಂದು ವಿಕೆಟ್ ಪಡೆದರು. ಪ್ರಸ್ತುತ ಇಂಗ್ಲೆಂಡ್ 23.1 ಓವರ್ಗಳಲ್ಲಿ 86 ರನ್ ಗಳಿಸಿ 4 ವಿಕೆಟ್ಗಳನ್ನು ಕಳೆದುಕೊಂಡಿದೆ. ಗೆಲುವಿಗೆ ಏಳು ವಿಕೆಟ್ಗಳಿಂದ 156 ರನ್ ಗಳಿಸಬೇಕಾದ ಒತ್ತಡಕ್ಕೆ ಸಿಲುಕಿದೆ.