ಲಂಡನ್: ಟೀಂ ಇಂಡಿಯಾ ಆಟಗಾರ ಕೆ.ಎಲ್.ರಾಹುಲ್, ಮಾಜಿ ಆಟಗಾರ ರಾಹುಲ್ ದ್ರಾವಿಡ್ ಅವರಂತೆ ಬಹುಮುಖ ಪ್ರತಿಭೆಯುಳ್ಳ ಆಟಗಾರನಾಗಬೇಕು ಎಂದು ಟೀಂ ಇಂಡಿಯಾ ಸಹಾಯಕ ಕೋಚ್ ಸಂಜಯ್ ಬಂಗಾರ ಹೇಳಿದ್ದಾರೆ.
ಕೀಪಿಂಗ್ ಮಾಡಬಲ್ಲ ಸಾಮರ್ಥ್ಯವಿದ್ದ ದ್ರಾವಿಡ್ ಭಾರತ ತಂಡಕ್ಕೆ ಅಗತ್ಯಬಿದ್ದ ಸ್ಥಾನದಲ್ಲಿ ಬ್ಯಾಟ್ ಬೀಸುತ್ತಿದ್ದರು. ಇದೀಗ ರಾಹುಲ್ ಕೂಡ ಅವರಂತೆ ಉತ್ತಮ ಆಟಗಾರ, ಅವರಲ್ಲಿದ್ದ ಪ್ರತಿಭೆ ರಾಹುಲ್ ಅವರಲ್ಲೂ ಕಾಣಬಹುದು ಎಂದು ಸಂಜಯ್ ಬಂಗಾರ್ ಹೇಳಿದ್ದಾರೆ.
ಶಿಖರ್ ಧವನ್ ಅನುಪಸ್ಥಿತಿಯನ್ನ ರಾಹುಲ್ ತುಂಬ ಬಲ್ಲರು. ಒಂದು ವೇಳೆ ಆರಂಭಿಕನಾಗಿ ರಾಹುಲ್ ಯಶಸ್ಸುಗಳಿಸಿದರೆ, ಭಾರತ ತಂಡಕ್ಕೆ ಸಹಕಾರಿಯಾಗಲಿದೆ. ಮಧ್ಯಮ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡೋದಕ್ಕೂ, ಆರಂಭಿಕನಾಗಿ ಬ್ಯಾಟಿಂಗ್ ಮಾಡೋದಕ್ಕೂ ತುಂಬಾ ವ್ಯತ್ಯಾಸವಿದೆ. ಪಿಚ್ ಕಂಡೀಷನ್ ಅರಿತು ಬ್ಯಾಟ್ ಬೀಸಬೇಕಾಗುತ್ತದೆ.
ದ್ರಾವಿಡ್ ಹಲವು ಬಾರಿ ಬೇರೆ ಬೇರೆ ಸ್ಥಾನದಲ್ಲಿ ಬ್ಯಾಟಿಂಗ್ ಮಾಡಿ ಟೀಂ ಇಂಡಿಯಾಕ್ಕೆ ನೆರವಾಗಿದ್ದಾರೆ. ಇದೀಗ ರಾಹುಲ್ಗೆ ಕೂಡ ಅಂತ ಅವಕಾಶ ದೊರೆತಿದೆ, ಉತ್ತಮ ಪ್ರದರ್ಶನ ನೀಡಿದ್ರೆ ವೈಯಕ್ತಿಕವಾಗಿ ಉತ್ತಮ ಹೆಸರು ಗಳಿಸಬಹುದು ಮತ್ತು ತಂಡಕ್ಕೂ ನೆರವಾಗುತ್ತದೆ ಎಂದು ಬಂಗಾರ ಹೇಳಿದ್ದಾರೆ.