ETV Bharat / sports

ಮತ್ತೊಂದು ದಾಖಲೆ ಮೇಲೆ ಕಿಂಗ್​ ಕೊಹ್ಲಿ ಕಣ್ಣು: ಬ್ರೇಕ್​​ ಆಗುತ್ತಾ ಲಾರಾ, ಸಚಿನ್ ರೆಕಾರ್ಡ್​​?

author img

By

Published : Jun 21, 2019, 11:10 PM IST

ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ ಈಗಾಗಲೇ ದಾಖಲೆ ಮೇಲೆ ದಾಖಲೆ ನಿರ್ಮಿಸಿರುವ ಭಾರತ ಕ್ರಿಕೆಟ್​ ತಂಡದ ನಾಯಕ ವಿರಾಟ್​ ಕೊಹ್ಲಿ, ಈಗ ಮತ್ತೊಂದು ದಾಖಲೆ ನಿರ್ಮಿಸಲು ಸಜ್ಜಾಗಿದ್ದಾರೆ.

ಮತ್ತೊಂದು ದಾಖಲೆ ಮೇಲೆ ಕಿಂಗ್​ ಕೊಹ್ಲಿ ಕಣ್ಣು

ಸೌತಾಂಪ್ಟನ್: ವಿಶ್ವ ಕ್ರಿಕೆಟ್​ನಲ್ಲಿ ಹಲವು ಹಿರಿಯ ಕ್ರಿಕೆಟ್​ ದಿಗ್ಗಜರ ದಾಖಲೆಗಳನ್ನು ಪುಡಿ ಮಾಡಿರುವ ವಿರಾಟ್, ಇದೀಗ ಸಚಿನ್ ಮತ್ತು ಲಾರಾ ದಾಖಲೆ ಮೇಲೆ ಕಣ್ಣಿಟ್ಟಿದ್ದಾರೆ.

ಸದ್ಯ ವಿಶ್ವಕಪ್​ ಟೂರ್ನಿಯಲ್ಲಿ ಕ್ಯಾಪ್ಟನ್​ ಕೊಹ್ಲಿ ಅಮೋಘ ಪ್ರದರ್ಶನ ನೀಡುತ್ತಿದ್ದು, ಮುಂದಿನ ಪಂದ್ಯಗಳಲ್ಲಿ 104 ರನ್ ಗಳಸಿದರೆ ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ ಅತಿ ವೇಗವಾಗಿ 20 ಸಾವಿರ ರನ್​ ಪೂರೈಸಿದ ಆಟಗಾರ ಎಂಬ ದಾಖಲೆ ಬರೆಯಲಿದ್ದಾರೆ.

ಟೀಂ ಇಂಡಿಯಾ ಮಾಜಿ ಆಟಗಾರ ಸಚಿನ್​ ತೆಂಡುಲ್ಕರ್ ಮತ್ತು ವೆಸ್ಟ್​ ಇಂಡೀಸ್​ ಆಟಗಾರ ಬ್ರಿಯಾನ್ ಲಾರಾ 453 ಇನ್ನಿಂಗ್ಸ್​ಗಳಿಂದ 20 ಸಾವಿರ ರನ್​ ಗಳಿಸಿರುವ ದಾಖಲೆ ಹೊಂದಿದ್ದಾರೆ. ಆಸ್ಟ್ರೇಲಿಯಾ ತಂಡದ ಮಾಜಿ ಆಟಗಾರ ರಿಕಿ ಪಾಂಟಿಂಗ್ ಎರಡನೇ ಸ್ಥಾನದಲ್ಲಿದ್ದು 468 ಇನ್ನಿಂಗ್ಸ್​ಗಳಿಂದ 20 ಸಾವಿರ ರನ್​ ಗಳಿಸಿದ್ದಾರೆ.​

ಸದ್ಯ ವಿರಾಟ್ ಕೊಹ್ಲಿ 415 ಇನ್ನಿಂಗ್ಸ್​ಗಳಿಂದ 19,896 ರನ್ ​ಗಳಿಸಿದ್ದು, ಲಾರಾ ಮತ್ತು ಸಚಿನ್​ ಜಂಟಿಯಾಗಿ ಹೊಂದಿರುವ ದಾಖಲೆಯನ್ನ ಬ್ರೇಕ್ ಮಾಡಲು ಕೇವಲ 104ರನ್​ ಗಳಿಸಬೇಕಿದೆ. ವಿರಾಟ್ ಕಳೆದ ಪಂದ್ಯದಲ್ಲಷ್ಟೇ ಏಕದಿನ ಕ್ರಿಕೆಟ್​ನಲ್ಲಿ, ಅತಿ ಕಡಿಮೆ ಇನ್ನಿಂಗ್ಸ್​​ನಲ್ಲಿ 11 ಸಾವಿರ ರನ್​ ಪೂರೈಸಿದ ಆಟಗಾರ ಎಂಬ ದಾಖಲೆ ಬರೆದಿದ್ದರು.

Intro:Body:Conclusion:

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.