ETV Bharat / sports

ಧೋನಿಗೆ ಪ್ರತಿ ಬಾಲ್​ಗೆ ಒಂದರಂತೆ ರನ್​ ಗಳಿಸುವಂತೆ ಹೇಳಿ: ಸಂಜಯ್​​​ ಮಂಜ್ರೇಕರ್​​

author img

By

Published : Jul 1, 2019, 11:16 PM IST

ಮಾಜಿ ನಾಯಕ ಎಂ.ಎಸ್​.ಧೋನಿಯವರ ನಿಧಾನಗತಿಯ ಬ್ಯಾಟಿಂಗ್​ ಬಗ್ಗೆ ಹಲವರಿಂದ ಟೀಕೆ ವ್ಯಕ್ತವಾಗುತ್ತಿರುವಾಗಲೇ ಮಾಜಿ ಕ್ರಿಕೆಟಿಗ ಹಾಗೂ ಕಾಮೆಂಟೇಟರ್​​ ಸಂಜಯ್​ ಮಂಜ್ರೇಕರ್, ಟೀಂ ಮ್ಯಾನೇಜ್​ಮೆಂಟ್​ಗೆ​ ಸಲಹೆಯೊಂದನ್ನು ನೀಡಿದ್ದಾರೆ.

ಮಂಜ್ರೇಕರ್

ಲಂಡನ್​: ಭಾರತ ತಂಡದ ಮಾಜಿ ನಾಯಕ ಎಂ.ಎಸ್.ಧೋನಿಗೆ ಆರಂಭದಿಂದಲೂ ಎಸೆತಕ್ಕೆ ಒಂದರಂತೆ ರನ್​ ಗಳಿಸುತ್ತಾ ಬ್ಯಾಟಿಂಗ್​ ನಡೆಸುವಂತೆ ತಂಡದ ಮ್ಯಾನೇಜ್​ಮೆಂಟ್​​ ಹೇಳಬೇಕಿದೆ ಎಂದು ಮಾಜಿ ಕ್ರಿಕೆಟಿಗ ಹಾಗೂ ಕಾಮೆಂಟೇಟರ್​​ ಸಂಜಯ್​ ಮಂಜ್ರೇಕರ್​​ ಸಲಹೆ ನೀಡಿದ್ದಾರೆ.

ಧೋನಿಯ ನಿಧಾನಗತಿಯ ಬ್ಯಾಟಿಂಗ್​ ಟೀಕಿಸಿರುವ ಮಂಜ್ರೇಕರ್, ಎಂಎಸ್​ ಅಭ್ಯಾಸ ಪಂದ್ಯಗಳಲ್ಲಿ ಆಡುವಂತೆ ಆಡಿದರೆ ನೋಡಲು ಇಷ್ಟ. 30 ಬಾಲ್​ಗೆ 30 ರನ್​ ಬಾರಿಸುವುದನ್ನು ನೋಡಲು ಬಯಸುತ್ತೇನೆ. ತಂಡವು 12 ರನ್​ಗೆ 2 ವಿಕೆಟ್ ಕಳೆದುಕೊಂಡಿದ್ದರೆ, ಡಿಫೆನ್ಸ್​​ ಆಡುವುದು ಒಳಿತು. ಆದರೆ 20-22 ಓವರ್ ವೇಳೆ ಬ್ಯಾಟಿಂಗ್​ ಮಾಡುತ್ತಿದ್ದರೆ ಎಸೆತಕ್ಕೊಂದು ರನ್​ ಗಳಿಸಲೇಬೇಕು ಎಂಬುದು ಅವರ ಸಲಹೆಯಾಗಿದೆ.

ಇನ್ನು ಭಾರತಕ್ಕೆ ಗಾಯಾಳುಗಳ ಸಮಸ್ಯೆ ಎದುರಾಗಿದೆ. ವಿಜಯ್​ ಶಂಕರ್​ ಸ್ಥಾನಕ್ಕೆ ಮಯಾಂಕ್​ ಅಗರ್​ವಾಲ್​ ಆಯ್ಕೆಯಾಗಿರುವುದು ಖುಷಿಯ ವಿಚಾರ. ಅಗರ್​ವಾಲ್ ಇಂಡಿಯಾದ ಬ್ಯಾಟಿಂಗ್​ ವಿಭಾಗಕ್ಕೆ ಶಕ್ತಿ ತುಂಬಲಿದ್ದಾರೆ. ಟೀಂ ಇಂಡಿಯಾವು ಬಾಂಗ್ಲಾ ವಿರುದ್ಧ ಜಯ ಸಾಧಿಸಲೇಬೇಕು. ಕೊಹ್ಲಿ ಪಡೆ ಸೋತಿರುವುದು ಒಂದು ಪಂದ್ಯದಲ್ಲಿ ಮಾತ್ರ. ಅಲ್ಲಿನ ಪರಿಸ್ಥಿತಿ ಇಂಗ್ಲೆಂಡ್​ ಆಟದ ಶೈಲಿಗೆ ಹೊಂದಾಣಿಕೆ ಇರುವುದರಿಂದ ಭಾರತಕ್ಕೆ ಸೋಲು ಎದುರಾಯಿತು ಎಂದಿದ್ದಾರೆ.

Intro:Body:

dhoni

Conclusion:

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.