ETV Bharat / sports

T-20 ವಿಶ್ವಕಪ್​: ಅಭ್ಯಾಸ ಪಂದ್ಯದಲ್ಲಿ ಬಾಂಗ್ಲಾ ವಿರುದ್ಧ ಗೆದ್ದ ಐರ್ಲೆಂಡ್​, ಲಂಕಾಗೂ ಜಯದ ನಗೆ - ಅಭ್ಯಾಸ ಪಂದ್ಯದಲ್ಲಿ ಗೆದ್ದ ಲಂಕಾ

ಐಸಿಸಿ ಟಿ-20 ವಿಶ್ವಕಪ್​​ನ ಅಭ್ಯಾಸ ಪಂದ್ಯಗಳು ಆರಂಭಗೊಂಡಿದ್ದು, ಇಂದಿನ ಪಂದ್ಯದಲ್ಲಿ ಶ್ರೀಲಂಕಾ ಹಾಗೂ ಐರ್ಲೆಂಡ್​​ ಗೆಲುವು ಸಾಧಿಸುವ ಮೂಲಕ ಆತ್ಮವಿಶ್ವಾಸ ಹೆಚ್ಚಿಸಿಕೊಂಡಿವೆ.

Ireland
Ireland
author img

By

Published : Oct 14, 2021, 6:38 PM IST

ಅಬುಧಾಬಿ: ಐಸಿಸಿ ಟಿ-20 ವಿಶ್ವಕಪ್​​ ಆರಂಭಗೊಳ್ಳಲು ದಿನಗಣನೇ ಆರಂಭಗೊಂಡಿದ್ದು, ಈಗಾಗಲೇ ಅಭ್ಯಾಸ ಪಂದ್ಯಗಳು ಶುರುವಾಗಿವೆ. ಇಂದಿನ ಪಂದ್ಯದಲ್ಲಿ ಐರ್ಲೆಂಡ್ ಹಾಗೂ ಶ್ರೀಲಂಕಾ ಗೆಲುವು ದಾಖಲು ಮಾಡಿವೆ.

ಬಲಿಷ್ಠ ಬಾಂಗ್ಲಾ ವಿರುದ್ಧ ಐರ್ಲೆಂಡ್​ ಜಯ ಸಾಧಿಸಿದ್ದು, ಮತ್ತೊಂದು ಪಂದ್ಯದಲ್ಲಿ ಪಪುವಾ ನ್ಯೂಗಿನಿಯಾ ವಿರುದ್ಧ ಶ್ರೀಲಂಕಾ ಗೆಲುವಿನ ನಗೆ ಬೀರಿದೆ. ಬಾಂಗ್ಲಾ ವಿರುದ್ಧ ಮೊದಲ ಬ್ಯಾಟ್​ ಮಾಡಿದ ಐರ್ಲೆಂಡ್​​ ನಿಗದಿತ 20 ಓವರ್​ಗಳಲ್ಲಿ 3ವಿಕೆಟ್​ನಷ್ಟಕ್ಕೆ 177ರನ್​ಗಳಿಕೆ ಮಾಡಿತು. ಇದರ ಬೆನ್ನಟ್ಟಿದ್ದ ಬಾಂಗ್ಲಾದೇಶ ತನ್ನೆಲ್ಲ ವಿಕೆಟ್​ ಕಳೆದುಕೊಂಡು ಕೇವಲ 144ರನ್​​ ಮಾತ್ರ ಗಳಿಸಿತು.

ಮತ್ತೊಂದು ಪಂದ್ಯದಲ್ಲಿ ಶ್ರೀಲಂಕಾ 20 ಓವರ್​ಗಳಲ್ಲಿ 5 ವಿಕೆಟ್​​ನಷ್ಟಕ್ಕೆ 162ರನ್​ಗಳಿಕೆ ಮಾಡಿದ್ದು, ಇದಕ್ಕೆ ಪ್ರತಿಯಾಗಿ ಪಂದ್ಯದಲ್ಲಿ ಪಪುವಾ ನ್ಯೂಗಿನಿಯಾ 20 ಓವರ್​ಗಳಲ್ಲಿ 7ವಿಕೆಟ್​ನಷ್ಟಕ್ಕೆ 123ರನ್​ ಮಾತ್ರ ಗಳಿಸಿತು. ಇದಕ್ಕೂ ಮುಂಚಿತವಾಗಿ ನಡೆದ ಪಂದ್ಯದಲ್ಲಿ ಓಮನ್​ ವಿರುದ್ಧ ನೆದರ್​ಲ್ಯಾಂಡ್ 4ರನ್​ಗಳ ಅಂತರದಿಂದ ಹಾಗೂ ನಮೀಬಿಯಾ ವಿರುದ್ಧ ಸ್ಕ್ಯಾಟ್​ಲ್ಯಾಂಡ್​ 19ರನ್​​ಗಳ ಗೆಲುವು ದಾಖಲು ಮಾಡಿದೆ.

ಟಿ-20 ವಿಶ್ವಕಪ್​​ನಲ್ಲಿ ಟೀಂ ಇಂಡಿಯಾ ಅಕ್ಟೋಬರ್​​ 20 ಹಾಗೂ 22ರಂದು ಕ್ರಮವಾಗಿ ಇಂಗ್ಲೆಂಡ್ ಹಾಗೂ ಆಸ್ಟ್ರೇಲಿಯಾ ವಿರುದ್ಧ ಅಭ್ಯಾಸ ಪಂದ್ಯದಲ್ಲಿ ಭಾಗಿಯಾಗಲಿವೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.