ಲಂಡನ್: ಇಂಗ್ಲೆಂಡ್ ನೆಲದಲ್ಲಿ ನಡೆಯುತ್ತಿರುವ 2019ನೇ ವಿಶ್ವಕಪ್ ಟೂರ್ನಿಯಲ್ಲಿ ಲೀಗ್ ಹಂತದ ಕೊನೆಯ ಪಂದ್ಯಗಳು ನಡೀತಿದ್ದು, ಕೆಲ ದಿನಗಳಲ್ಲೆ ಸೆಮಿಫೈನಲ್ ಪಂದ್ಯಗಳು ಪ್ರಾರಂಭವಾಗಲಿವೆ.
ಆಂಗ್ಲರ ನಾಡಿನಲ್ಲಿ ಸ್ಪಿನ್ನರ್ಗಳಿಗೆ ಹೆಚ್ಚಿನ ಮಹತ್ವವಿಲ್ಲ ಎಂದು ಹೇಳಲಾಗುತ್ತದೆ. ಆದರೂ ಕೆಲ ಪಂದ್ಯಗಳಲ್ಲಿ ಮಿಂಚಿದ ಸ್ಪಿನ್ ಬೌಲರ್ಸ್ ಪಂದ್ಯದ ಗತಿಯನ್ನೇ ಬದಲಿಸಿದ್ದಾರೆ. ಆದ್ರೆ, ಇಲ್ಲಿಯವರೆಗೆ ನಡೆದ ಪಂದ್ಯಗಳಲ್ಲಿ ಸ್ಪಿನ್ ಬೌಲರ್ಗಳಿಗೇ ಅತಿಹೆಚ್ಚು ಸಿಕ್ಸರ್ ಸಿಡಿಸಲಾಗಿದೆ.
-
Most sixes conceded in #CWC19 #CWC2019
— Mohandas Menon (@mohanstatsman) July 4, 2019 " class="align-text-top noRightClick twitterSection" data="
14 - Rashid Khan
13 - Yuzvendra Chahal
10 - Adil Rashid/Mohd Nabi
9 - Shakib Al Hasan/Dawlat Zadran
8 - Jofra Archer/Mustafizur Rahman/Mashrafe Mortaza/Matt Henry/Adam Zampa/Mitchell Santner#AfgvWI #WIvAfg (updated end of WI inns)
">Most sixes conceded in #CWC19 #CWC2019
— Mohandas Menon (@mohanstatsman) July 4, 2019
14 - Rashid Khan
13 - Yuzvendra Chahal
10 - Adil Rashid/Mohd Nabi
9 - Shakib Al Hasan/Dawlat Zadran
8 - Jofra Archer/Mustafizur Rahman/Mashrafe Mortaza/Matt Henry/Adam Zampa/Mitchell Santner#AfgvWI #WIvAfg (updated end of WI inns)Most sixes conceded in #CWC19 #CWC2019
— Mohandas Menon (@mohanstatsman) July 4, 2019
14 - Rashid Khan
13 - Yuzvendra Chahal
10 - Adil Rashid/Mohd Nabi
9 - Shakib Al Hasan/Dawlat Zadran
8 - Jofra Archer/Mustafizur Rahman/Mashrafe Mortaza/Matt Henry/Adam Zampa/Mitchell Santner#AfgvWI #WIvAfg (updated end of WI inns)
ಏಕದಿನ ಬೌಲಿಂಗ್ ರಾಂಕಿಂಗ್ನಲ್ಲಿ 3ನೇ ಸ್ಥಾನದಲ್ಲಿರುವ ಅಫ್ಘಾನಿಸ್ತಾನ ತಂಡದ ಸ್ಪಿನ್ನರ್ ರಶೀದ್ ಖಾನ್ ಬೌಲಿಂಗ್ನಲ್ಲಿ ಒಟ್ಟು 14 ಸಿಕ್ಸರ್ ಸಿಡಿಸಲಾಗಿದೆ. ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ 9 ಓವರ್ ಬೌಲಿಂಗ್ ಮಾಡಿದ್ದ ರಶೀದ್ 110 ರನ್ ಬಿಟ್ಟುಕೊಟ್ಟಿದ್ದರು.
ಎರಡನೇ ಸ್ಥಾನದಲ್ಲಿ ಭಾರತೀಯ ಬೌಲರ್ ಚಹಾಲ್:
ಟೀಂ ಇಂಡಿಯಾ ಸ್ಪಿನ್ನರ್ ಯಜುವೇಂದ್ರ ಚಹಾಲ್ ಬೌಲಿಂಗ್ನಲ್ಲಿ 13 ಸಿಕ್ಸರ್ ಸಿಡಿಸಲಾಗಿದೆ. ಅನೇಕ ಸಂದರ್ಭಗಳಲ್ಲಿ ತಂಡಕ್ಕೆ ಆಸರೆಯಾಗುತಿದ್ದ ಚಹಾಲ್ ಇಂಗ್ಲೆಂಡ್ ನೆಲದಲ್ಲಿ ಸ್ವಲ್ಪ ದುಬಾರಿಯಾಗಿದ್ದಾರೆ. ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ 10 ಓವರ್ ಬೌಲಿಂಗ್ ಮಾಡಿದ್ದ ಚಹಾಲ್ ಯಾವದೇ ವಿಕೆಟ್ ಪಡೆಯದೆ 88 ರನ್ ಬಿಟ್ಟುಕೊಟ್ಟಿದ್ದರು.
ಇನ್ನು ಇಂಗ್ಲೆಂಡ್ ತಂಡದ ಆದಿಲ್ ರಶೀದ್ ಬೌಲಿಂಗ್ನಲ್ಲಿ 10 ಮತ್ತು ಬಾಂಗ್ಲಾದೇಶದ ಸ್ಟಾರ್ ಅಲ್ರೌಡರ್ ಶಕೀಬ್ ಬೌಲಿಂಗ್ನಲ್ಲಿ 9 ಸಿಕ್ಸ್ ಸಿಡಿಸಲಾಗಿದೆ.