ETV Bharat / sports

ವಿಶ್ವಕಪ್‌ನಲ್ಲಿ ಮುಂದುವರೆದ ಮಳೆಯಾಟ! ಇಂಡೋ-ಪಾಕ್​ ಪಂದ್ಯಕ್ಕೆ ಅಡ್ಡಿ - undefined

ಈ ವಿಶ್ವಕಪ್​ನಲ್ಲಿ ಒಟ್ಟು ನಾಲ್ಕು ಪಂದ್ಯಗಳು ಮಳೆಯಿಂದಾಗಿ ರದ್ದಾಗಿವೆ. ಕಳೆದ ಭಾರತ- ನ್ಯೂಜಿಲ್ಯಾಂಡ್ ನಡುವಿನ ಪಂದ್ಯವೂ ವರುಣಾಗಮನದಿಂದಾಗಿ ಫಲಿತಾಂಶರಹಿತವಾಗಿತ್ತು. ಇಂದು ಮತ್ತೆ ಮ್ಯಾಂಚೆಸ್ಟರ್​ಗೆ ಎಂಟ್ರಿ ಕೊಟ್ಟಿರುವ ವರುಣ, ಭಾರತ-ಪಾಕ್​ ನಡುವಿನ ರೋಚಕ ಹಣಾಹಣಿಗೆ ಬ್ರೇಕ್​ ಹಾಕಿಬಿಟ್ಟ.

ಇಂಡೋ-ಪಾಕ್​ ಪಂದ್ಯಕ್ಕೆ ಮಳೆ ಅಡ್ಡಿ!
author img

By

Published : Jun 16, 2019, 6:55 PM IST

ಮ್ಯಾಂಚೆಸ್ಟರ್ ​(ಇಂಗ್ಲೆಂಡ್​): ಈ ವಿಶ್ವಕಪ್​ನ ಹಲವು ಪಂದ್ಯಗಳಲ್ಲಿ ಮಳೆ ಮೇಲುಗೈ ಸಾಧಿಸಿದ್ದೇ ಹೆಚ್ಚು. ಇಂದು ನಡೆಯುತ್ತಿರುವ ಭಾರತ- ಪಾಕಿಸ್ತಾನ ನಡುವಿನ ಪಂದ್ಯಕ್ಕೂ ಸದ್ಯ ಮಳೆ ಬ್ರೇಕ್​ ಹಾಕಿದೆ.

ಭಾರತ 46.4 ಓವರ್​ಗಳಿಗೆ ನಾಲ್ಕು ವಿಕೆಟ್​ ಕಳೆದುಕೊಂಡು 305 ರನ್​ ಗಳಿಸಿ ಆಡುತ್ತಿರುವಾಗ ದಿಢೀರ್​ ಸುರಿದ ಮಳೆ ರೋಚಕ ಪಂದ್ಯವನ್ನು ನಿಲ್ಲಿಸಿದೆ. ಹೀಗಾಗಿ, ವಿಶ್ವವೇ ಕುತೂಹಲದಿಂದ ವೀಕ್ಷಿಸುತ್ತಿರುವ ಪಂದ್ಯಕ್ಕೆ ಅಡ್ಡಿಯಾಗಿದೆ.

ಭಾರತ ಪರ, ನಾಯಕ ವಿರಾಟ್​ ಕೊಹ್ಲಿ 62 ಎಸೆತಗಳಲ್ಲಿ 71 ರನ್​ಗಳಿಸಿ ಆಡುತ್ತಿದ್ದರೆ, ಧೋನಿ ನಿರ್ಗಮನದ ಬಳಿಕ ಕ್ರೀಸ್​ಗಿಳಿದ ವಿಜಯ್ ಶಂಕರ್,​ 3 ರನ್​ ಗಳಿಸಿದ್ದಾರೆ. ಭಾರತದ ಇನ್ನಿಂಗ್ಸ್​ನಲ್ಲಿ ಇನ್ನೂ 20 ಎಸೆತಗಳು ಬಾಕಿ ಇದ್ದು, ಅಭಿಮಾನಿಗಳು ವರುಣನನ್ನು ಶಪಿಸುತ್ತಿದ್ದಾರೆ.

Intro:Body:

dsfhs

Conclusion:

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.