ETV Bharat / sports

ನ್ಯೂಜಿಲ್ಯಾಂಡ್​​ ಸರಣಿಗೆ ಹಿರಿಯ ಪ್ಲೇಯರ್ಸ್​​ಗೆ ವಿಶ್ರಾಂತಿ.. ಹಂಗಾಮಿ ಕೋಚ್​ ಆಗಲಿದ್ದಾರೆ ರಾಹುಲ್​ ದ್ರಾವಿಡ್

ಟಿ-20 ವಿಶ್ವಕಪ್​ ಮುಕ್ತಾಯವಾಗುತ್ತಿದ್ದಂತೆ ನ್ಯೂಜಿಲ್ಯಾಂಡ್​ ವಿರುದ್ಧದ ಕ್ರಿಕೆಟ್ ಸರಣಿ ಆರಂಭಗೊಳ್ಳಲಿರುವ ಕಾರಣ, ಕೆಲ ಹಿರಿಯ ಪ್ಲೇಯರ್ಸ್​ಗೆ ವಿಶ್ರಾಂತಿ ನೀಡುವ ಸಾಧ್ಯತೆ ದಟ್ಟವಾಗಿದೆ.

Rahul dravid
Rahul dravid
author img

By

Published : Oct 14, 2021, 7:04 PM IST

ನವದೆಹಲಿ: ಐಸಿಸಿ ಟಿ-20 ವಿಶ್ವಕಪ್​​ ಮುಕ್ತಾಯಗೊಳ್ಳುತ್ತಿದ್ದಂತೆ ಟೀಂ ಇಂಡಿಯಾ ನ್ಯೂಜಿಲ್ಯಾಂಡ್​ ವಿರುದ್ಧದ ಕ್ರಿಕೆಟ್​ ಸರಣಿಯಲ್ಲಿ ಭಾಗಿಯಾಗಲಿದ್ದು, ಈ ವೇಳೆ, ತಂಡದಲ್ಲಿ ಮಹತ್ವದ ಬದಲಾವಣೆಯಾಗಲಿವೆ.

ವಿಶ್ವಕಪ್​ ಮುಕ್ತಾಯಗೊಳ್ಳುತ್ತಿದ್ದಂತೆ ಈ ಸರಣಿ ಆರಂಭಗೊಳ್ಳಲಿರುವ ಕಾರಣ ಅನೇಕ ಹಿರಿಯ ಪ್ಲೇಯರ್ಸ್​ಗೆ ವಿಶ್ರಾಂತಿ ನೀಡಲು ಬಿಸಿಸಿಐ ನಿರ್ಧರಿಸಿದ್ದು, ಹಂಗಾಮಿ ಕೋಚ್​​ ಆಗಿ ದಿ ವಾಲ್​ ಖ್ಯಾತಿಯ ರಾಹುಲ್​ ದ್ರಾವಿಡ್​ ಆಯ್ಕೆಯಾಗುವುದು ಬಹುತೇಕ ಖಚಿತವಾಗಿದೆ.

ಭಾರತದಲ್ಲಿ ನ್ಯೂಜಿಲ್ಯಾಂಡ್​ ತಂಡ ಮೂರು ಟಿ - 20 ಪಂದ್ಯಗಳ ಸರಣಿಯಲ್ಲಿ ಭಾಗಿಯಾಗಲಿದ್ದು, ನವೆಂಬರ್​ 17,19 ಹಾಗೂ 21ರಂದು ಈ ಪಂದ್ಯಗಳು ಜೈಪುರ್​, ರಾಂಚಿ ಹಾಗೂ ಕೋಲ್ಕತ್ತಾದಲ್ಲಿ ನಡೆಯಲಿವೆ. ಇದಾದ ಬಳಿ ಎರಡು ಟೆಸ್ಟ್​​ ಪಂದ್ಯಗಳು ಕಾನ್ಪುರ್ ಹಾಗೂ ಮುಂಬೈನಲ್ಲಿ ಆಯೋಜನೆಗೊಂಡಿವೆ.

ಇದನ್ನೂ ಓದಿರಿ: IPL ಫೈನಲ್​ಗೆ ಲಗ್ಗೆ ಹಾಕಿದ ಕೋಲ್ಕತ್ತಾ: ಅಯ್ಯರ್​, ಗಿಲ್​ ಆಟ ಹಾಡಿ ಹೊಗಳಿದ ಮಾರ್ಗನ್​

ಯುವ ಪ್ಲೇಯರ್ಸ್​​ಗೆ ಮಣೆ ಸಾಧ್ಯತೆ

ಬಹುತೇಕ ಹಿರಿಯ ಪ್ಲೇಯರ್ಸ್​ ಈಗಾಗಲೇ ಐಪಿಎಲ್​ನಲ್ಲಿ ಭಾಗಿಯಾಗಿದ್ದು, ಇದರ ಬೆನ್ನಲ್ಲೇ ಟಿ - 20 ವಿಶ್ವಕಪ್​​ನಲ್ಲಿ ಆಡುವ ಕಾರಣ ಅವರಿಗೆ ವಿಶ್ರಾಂತಿ ನೀಡಲು ಬಿಸಿಸಿಐ ಮುಂದಾಗಿದೆ.

ಪ್ರಮುಖವಾಗಿ ಕಳೆದ ಜೂನ್​ ತಿಂಗಳಲ್ಲಿ ನ್ಯೂಜಿಲ್ಯಾಂಡ್​ ವಿರುದ್ಧ ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ ಆರಂಭಗೊಂಡಾಗಿನಿಂದಲೂ ಟೀಂ ಇಂಡಿಯಾದ ಅಗ್ರ ಪ್ಲೇಯರ್ಸ್​​ಗಳಾದ ವಿರಾಟ್​ ಕೊಹ್ಲಿ, ರೋಹಿತ್​ ಶರ್ಮಾ, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್​ ಶಮಿ, ಜಡೇಜಾ ಸೇರಿದಂತೆ ಅನೇಕರು ಬಯೋ - ಬಬಲ್​​ನಲ್ಲಿದ್ದಾರೆ. ಹೀಗಾಗಿ ಅವರಿಗೆ ವಿಶ್ರಾಂತಿ ನೀಡುವ ಸಾಧ್ಯತೆ ಇದೆ.

ಹೀಗಾಗಿ ಯುವ ಪ್ಲೇಯರ್ಸ್​ಗಳಾದ ಋತುರಾಜ್ ಗಾಯಕ್ವಾಡ್, ಹರ್ಷಲ್ ಪಟೇಲ್​,ಆವೇಶ್ ಖಾನ್​, ವೆಂಕಟೇಶ್ ಅಯ್ಯರ್​​ನಂತರ ಪ್ಲೇಯರ್ಸ್​ ಈ ಸರಣಿಯಲ್ಲಿ ಅವಕಾಶ ಪಡೆದುಕೊಳ್ಳಬಹುದಾಗಿದೆ.

ಹಂಗಾಮಿ ಕೋಚ್​​ ಆಗಿ ರಾಹಲ್​ ದ್ರಾವಿಡ್​

ವಿಶ್ವಕಪ್​ ಮುಗಿಯುತ್ತಿದ್ದಂತೆ ಟೀಂ ಇಂಡಿಯಾ ಕೋಚ್​ ರವಿಶಾಸ್ತ್ರಿ ಅಧಿಕಾರ ಅವಧಿ ಮುಕ್ತಾಯಗೊಳ್ಳಲಿದೆ. ಹೀಗಾಗಿ ನ್ಯೂಜಿಲ್ಯಾಂಡ್​ ಸರಣಿಯಲ್ಲಿ ದ್ರಾವಿಡ್​ ಹಂಗಾಮಿ ಕೋಚ್​ ಆಗಿ ಸೇವೆ ಸಲ್ಲಿಸುವ ಸಾಧ್ಯತೆ ಇದೆ.

ಈಗಾಗಲೇ ರಾಷ್ಟ್ರೀಯ ಕ್ರಿಕೆಟ್​ ಅಕಾಡೆಮಿ ಮುಖ್ಯಸ್ಥರಾಗಿರುವ ದ್ರಾವಿಡ್ ಅವರ ಮೇಲೆ​​ ಮುಂದಿನ ವರ್ಷ ನಡೆಯಲಿರುವ ಅಂಡರ್​​-19 ವಿಶ್ವಕಪ್​ಗಾಗಿ ತಂಡ ಸಿದ್ಧಪಡಿಸಬೇಕಾದ ದೊಡ್ಡ ಜವಾಬ್ದಾರಿಯೂ ಇದೆ. ಇದರ ಮಧ್ಯೆ ನ್ಯೂಜಿಲ್ಯಾಂಡ್ ಸರಣಿಗೆ ಅವರು ಕೋಚ್​ ಆಗುವ ಸಾಧ್ಯತೆ ಇದೆ.

ಟೀಂ ಇಂಡಿಯಾ ಕೋಚ್​​ ಆಯ್ಕೆ ಪ್ರಕ್ರಿಯೆಯಲ್ಲಿ ಬಿಸಿಸಿಐ ಈಗಾಗಲೇ ಮಗ್ನವಾಗಿದ್ದು, ಭಾರತದ ಅನಿಲ್ ಕುಂಬ್ಳೆ, ವಿವಿಎಸ್​ ಲಕ್ಷ್ಮಣ್, ದ್ರಾವಿಡ್​ ಸೇರಿದಂತೆ ಅನೇಕರ ಹೆಸರು ಈ ಪಟ್ಟಿಯಲ್ಲಿ ಕೇಳಿ ಬರುತ್ತಿವೆ. ಈ ಹಿಂದೆ ಟೀಂ ಇಂಡಿಯಾ ಇಂಗ್ಲೆಂಡ್​ ಪ್ರವಾಸದಲ್ಲಿದ್ದಾಗ ಶ್ರೀಲಂಕಾ ವಿರುದ್ಧದ ಸರಣಿಯಲ್ಲಿ ಭಾಗಿಯಾಗಿದ್ದ ಯುವ ಪಡೆಗೆ ರಾಹುಲ್​ ದ್ರಾವಿಡ್ ಕೋಚ್​ ಆಗಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.