ಲಂಡನ್: ನಿನ್ನೆ ನಡೆದ ಇಂಗ್ಲೆಂಡ್ ಮತ್ತು ಶ್ರೀಲಂಕಾ ನಡುವಿನ ವಿಶ್ವಕಪ್ ಕ್ರಿಕೆಟ್ ಪಂದ್ಯದಲ್ಲಿ ಅದ್ಭುತ ಪ್ರದರ್ಶನ ನೀಡಿ ಶ್ರೀಲಂಕಾ ತಂಡದ ಗೆಲುವಿಗೆ ಕಾರಣರಾದ ಲಸಿತ್ ಮಲಿಂಗಾಗೆ ಬಾರಿ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಕಳೆದ ಕೆಲ ಪಂದ್ಯಗಳಲ್ಲಿ ಸರಿಯಾಗಿ ಬೌಲಿಂಗ್ ಪ್ರದರ್ಶನ ತೋರದ ಮಲಿಂಗಾರನ್ನ ಹಲವರು ಟೀಕಿಸಿದ್ದರು. ಇತ್ತೀಚೆಗೆ ತುಂಬಾ ದಪ್ಪಗಾಗಿರುವ ಮಲಿಂಗಾ ಕ್ರಿಕೆಟ್ ಆಡಲು ಫಿಟ್ ಅಲ್ಲ. ನಿವೃತ್ತಿ ತೆಗೆದುಕೊಳ್ಳಬೇಕು ಎಂದು ಅಣಕಿಸಿದ್ದರು.
- " class="align-text-top noRightClick twitterSection" data="
">
ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಪ್ರಮುಖ ನಾಲ್ವರು ಆಟಗಾರರ ವಿಕೆಟ್ ಪಡೆದ ಮಲಿಂಗಾ, ಲಂಕಾ ಗೆಲುವಿಗೆ ಕಾರಣರಾದ್ರು. ಮಲಿಂಗಾ ಹೊಟ್ಟೆ ಬಿಟ್ಟಿರುವ ಫೋಟೊ ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿರುವ ಶ್ರೀಲಂಕಾ ಮಾಜಿ ಕ್ರಿಕೆಟ್ ಆಟಗಾರ ಮಹೆಲ ಜಯವರ್ಧನೆ ಕಳೆದ ವಾರ ನಿನ್ನನ್ನು ಆಡಿಕೊಂಡವರಿಗೆ ತಕ್ಕ ಉತ್ತರ ನೀಡಿದ್ದೀಯಾ ಎಂದು ಬರೆದುಕೊಂಡಿದ್ದಾರೆ.
-
WHAT. A. LEGEND. #CWC19 | #ENGvSL pic.twitter.com/o7E4p2zo5c
— Cricket World Cup (@cricketworldcup) June 21, 2019 " class="align-text-top noRightClick twitterSection" data="
">WHAT. A. LEGEND. #CWC19 | #ENGvSL pic.twitter.com/o7E4p2zo5c
— Cricket World Cup (@cricketworldcup) June 21, 2019WHAT. A. LEGEND. #CWC19 | #ENGvSL pic.twitter.com/o7E4p2zo5c
— Cricket World Cup (@cricketworldcup) June 21, 2019
ನಿನ್ನೆ ನಡೆದ ಪಂದ್ಯದಲ್ಲಿ ಮಲಿಂಗಾ, ಜೋ ರೂಟ್ ವಿಕೆಟ್ ಪಡೆಯುವ ಮೂಲಕ ವಿಶ್ವಕಪ್ ಟೂರ್ನಿಯಲ್ಲಿ 50 ವಿಕೆಟ್ ಪಡೆದ ನಾಲ್ಕನೇ ಅಟಗಾರ ಎಂಬ ದಾಖಲೆ ಬರೆದಿದ್ದಾರೆ.