ETV Bharat / sports

ಈ ಗೆಲುವು ಅಷ್ಟು ಸುಲಭದ್ದಾಗಿರಲಿಲ್ಲ.. ನಮ್ಮ ಹುಡುಗರಿಗೆ ಇದೊಂದು ಪಾಠ: ರೋಹಿತ್​ ಶರ್ಮಾ - ರೋಹಿತ್​ ಶರ್ಮಾ ಭಾರತ ತಂಡದ ನಾಯಕ

ನ್ಯೂಜಿಲ್ಯಾಂಡ್​ ವಿರುದ್ಧದ ಮೊದಲ ಪಂದ್ಯದಲ್ಲಿ ಭಾರತ ಗೆಲುವು ಸಾಧಿಸಿದೆ. ಆದರೆ ಅದು ನಮ್ಮ ಹುಡುಗರಿಗೆ ಪಾಠ ಕಲಿಸಿದೆ. ಈ ಪಂದ್ಯದಲ್ಲಿ ಗೆಲುವು ಅಷ್ಟು ಸುಲಭವಾಗಿರಲಿಲ್ಲ ಎಂದು ಟೀಂ ಇಂಡಿಯಾ ನಾಯಕ ರೋಹಿತ್​ ಶರ್ಮಾ ಹೇಳಿದ್ದಾರೆ.

Ind vs NZ, 1st T20I: Win did not come easy, was great learning for our guys, says Rohit

author img

By

Published : Nov 18, 2021, 7:06 AM IST

ಜೈಪುರ: ಭಾರತ ಕ್ರಿಕೆಟ್​ ತಂಡ ಟಿ-20(Ind vs NZ, 1st T20I) ಅಂತಾರಾಷ್ಟ್ರೀಯ ಸರಣಿಯ ಮೊದಲ ಪಂದ್ಯದಲ್ಲಿ ನ್ಯೂಜಿಲ್ಯಾಂಡ್​ ವಿರುದ್ಧ ರೋಚಕ ಗೆಲುವು ಸಾಧಿಸಿ ಶುಭಾರಂಭ ಮಾಡಿದೆ. ಈ ಬಗ್ಗೆ ಪಂದ್ಯದ ಬಳಿಕ ಮಾತನಾಡಿದ ರೋಹಿತ್​ ಶರ್ಮಾ, ಪಂದ್ಯದ ಶುಭಾರಂಭದ ನಡುವೆಯೂ ಈ ಗೆಲುವು ಅನೇಕ ಪಾಠಗಳನ್ನು ಕಲಿಸಿದೆ ಎಂದು ಹೇಳಿದ್ದಾರೆ.

ನ್ಯೂಜಿಲ್ಯಾಂಡ್ ವಿರುದ್ಧದ ಮೂರು ಪಂದ್ಯಗಳ ಸರಣಿಯ ಮೊದಲ ಪಂದ್ಯದಲ್ಲಿ ಸೂರ್ಯಕುಮಾರ್​ ಯಾದವ್​​ 62 ರನ್​ ಹಾಗೂ ನಾಯಕ ರೋಹಿತ್​ ಶರ್ಮಾ (Rohit)48 ರನ್​ಗಳ ನೆರವಿನಿಂದ ಭಾರತ, ನ್ಯೂಜಿಲ್ಯಾಂಡ್ ನೀಡಿದ 164 ರನ್​ಗಳ ಗುರಿಯನ್ನು ಪ್ರಯಾಸದಿಂದಲೇ ತಲುಪಿ ವಿಜಯದ ನಗೆ ಬೀರಿದೆ.

ಇದನ್ನೋ ಓದಿ:IND vs NZ 1st T20: ಕಿವೀಸ್‌ ವಿರುದ್ಧ ಜಯದೊಂದಿಗೆ ರೋಹಿತ್‌-ದ್ರಾವಿಡ್‌ ಯುಗಾರಂಭ

ಸವಾಯ್​ ಮಾನ್​ಸಿಂಗ್​ ಸ್ಟೇಡಿಯಂನಲ್ಲಿ ನಡೆದ ಪಂದ್ಯದ ಬಳಿಕ ಮಾತನಾಡಿದ ನಾಯಕ ರೋಹಿತ್​ ಶರ್ಮಾ, ಪಂದ್ಯ ಜಯದೊಂದಿಗೆ ಮುಕ್ತಾಯವಾಯಿತು. ಆದರೆ ನಮಗೆ ಹಲವು ಪಾಠಗಳನ್ನೂ ಕಲಿಸಿತು. ಏಕೆಂದರೆ ನಮ್ಮ ಕೆಲ ಹುಡುಗರಿಗೆ ಇಂತಹ ಸಂದರ್ಭದಲ್ಲಿ ಹೇಗೆ ಬ್ಯಾಟ್​ ಬೀಸಬೇಕು ಎಂಬುದು ಹೊಸ ಅನುಭವವಾಗಿತ್ತು ಎಂದಿದ್ದಾರೆ.

ನಿರ್ಣಾಯಕ ಆಟದ ವೇಳೆ ಏನು ಮಾಡಬೇಕೆಂದು ಅರ್ಥಮಾಡಿಕೊಳ್ಳಲು ಇದು ಉತ್ತಮ ಅವಕಾಶವಾಗಿದೆ. ಇದು ಕೇವಲ ಪವರ್ - ಹಿಟ್ಟಿಂಗ್ ಮಾಡುವ ಸಮಯುವಲ್ಲ. ಚೆಂಡನ್ನು ಫೀಲ್ಡರ್ನ ಎಡ ಅಥವಾ ಬಲಕ್ಕೆ ಇರಿಸಿ ಮತ್ತು ಸಿಂಗಲ್ಸ್ ಅಥವಾ ಬೌಂಡರಿಗಳನ್ನು ಹುಡುಕಲು ಪ್ರಯತ್ನಿಸುವ ಬಗೆಯಷ್ಟೇ ಅಲ್ಲ, ಗೆಲುವಿಗೆ ಬೇಕಾದ ರನ್​ಗಳನ್ನು ಹೇಗೆ ಗಳಿಸಬೇಕು ಎಂಬುದಕ್ಕೂ ಪಾಠವಾಗಿದೆ ಎಂದು ರೋಹಿತ್​ ಶರ್ಮಾ ಹೇಳಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.