ETV Bharat / sports

ಇಂದು ಲಂಕನ್ನರಿಗೆ ಹರಿಣ ಪಡೆ ಸವಾಲು: ಸೆಮೀಸ್​ನತ್ತ ಸಿಂಹಳಿಯರ ಚಿತ್ತ - undefined

ಚಸ್ಟರ್ ಲಿ ಸ್ಟ್ರೀಟ್​ನ ರಿವರ್ಸೈಡ್ ಗ್ರೌಂಡ್​ನಲ್ಲಿ ಇಂದು ಶ್ರೀಲಂಕಾ ಮತ್ತು ದಕ್ಷಿಣ ಆಫ್ರಿಕಾ ತಂಡಗಳು ಕಾದಾಟ ನಡೆಸಲಿವೆ.

ಸೆಮೀಸ್​ನತ್ತ ಸಿಂಹಳಿಯರ ಚಿತ್ತ
author img

By

Published : Jun 28, 2019, 12:13 PM IST

ಲಂಡನ್: ಐಸಿಸಿ ವಿಶ್ವಕಪ್​ ಟೂರ್ನಿಯ 35ನೇ ಪಂದ್ಯದಲ್ಲಿ ಇಂದು ಶ್ರೀಲಂಕಾ ಮತ್ತು ದಕ್ಷಿಣ ಆಫ್ರಿಕಾ ತಂಡಗಳು ಮುಖಾಮುಖಿಯಾಗುತಿದ್ದು, ಸೆಮೀಸ್​ ಆಸೆ ಜೀವಂತವಾಗಿರಿಸಿಕೊಳ್ಳಲು ಶ್ರೀಲಂಕಾ ತಂಡ ಇಂದಿನ ಪಂದ್ಯವನ್ನ ಗೆಲ್ಲಲೇ ಬೇಕಾದ ಅನಿವಾರ್ಯತೆಗೆ ಸಿಲುಕಿದೆ.

  • "It does only take one magical performance to then turn things around."

    "We'll just try and play as we did in the last game."

    Friday's #CWC19 encounter will see Sri Lanka take on South Africa in Durham. pic.twitter.com/mI91MGNDJG

    — ICC (@ICC) June 28, 2019 " class="align-text-top noRightClick twitterSection" data=" ">

ದಕ್ಷಿಣ ಆಫ್ರಿಕಾ ತಂಡ ಈಗಾಗಲೆ ವಿಶ್ವಕಪ್​ ಟೂರ್ನಿಯಿಂದ ಹೊರ ಬಿದ್ದಿದ್ದು, ಇಂದಿನ ಪಂದ್ಯ ಹರಿಣ ಪಡೆಗೆ ಮಹತ್ವದ್ದೇನಲ್ಲ. ಆದರೆ, ಶ್ರೀಲಂಕಾ ತಂಡ ಮಾತ್ರ ಇಂದಿನ ಪಂದ್ಯವನ್ನ ಗೆಲ್ಲಲೇ ಬೇಕಾಗಿದೆ. ಲಂಕನ್ನರು 2 ಪಂದ್ಯದಲ್ಲಿ ಜಯ ಸಾಧಿಸಿದ್ರೆ, ಎರಡು ಪಂದ್ಯ ಮಳೆಯಿಂದ ರದ್ದಾಗಿದ್ದು, ಎರಡು ಪಂದ್ಯದಲ್ಲಿ ಸೋಲು ಕಂಡಿದೆ. ಒಟ್ಟು 6 ಅಂಕ ಗಳಿಸಿದ್ದು, ಅಂತಿಮ ನಾಲ್ಕರ ಘಟ್ಟ ತಲುಪುವ ಕನಸು ಕಾಣುತ್ತಿದೆ.

ವಿಶ್ವಕಪ್ ಟೂರ್ನಿಯಲ್ಲಿ ಇದುವರೆಗೂ ದಕ್ಷಿಣ ಆಫ್ರಿಕಾ ಮತ್ತು ಶ್ರೀಲಂಕಾ ತಂಡ 5 ಬಾರಿ ಮುಖಾಮುಖಿಯಾಗಿವೆ. ದಕ್ಷಿಣ ಆಫ್ರಿಕಾ ತಂಡ ಮೂರು ಪಂದ್ಯದಲ್ಲಿ ಜಯಗಳಿಸಿದ್ದರೆ, ಲಂಕಾ ತಂಡ ಒಂದು ಪಂದ್ಯದಲ್ಲಿ ಜಯ ಸಾಧಿಸಿದ್ದು, ಒಂದು ಪಂದ್ಯ ಡ್ರಾನಲ್ಲಿ ಅಂತ್ಯಕಂಡಿದೆ.

ಮೊದಲ ಬಾರಿಗೆ ಚಸ್ಟರ್ ಲಿ ಸ್ಟ್ರೀಟ್​​ನ ರಿವರ್ಸೈಡ್ ಗ್ರೌಂಡ್​ನಲ್ಲಿ ಈ ಪಂದ್ಯ ನಡೆಯುತಿದ್ದು, ಎರಡೂ ತಂಡಗಳಿಗೆ ಪಿಚ್​ ಕಂಡೀಷನ್​ ಬಗ್ಗೆ ಗೊತ್ತಿಲ್ಲ. ಇಲ್ಲಿಯವರೆಗೆ ಈ ಮೈದಾನದಲ್ಲಿ ಚೇಸಿಂಗ್​ ಮಾಡಿದ ತಂಡಗಳೇ ಹೆಚ್ಚು ಬಾರಿ ಗೆಲುವು ಸಾಧಿಸಿವೆ.

ಸಂಭಾವ್ಯ ತಂಡಗಳು:

ಶ್ರೀಲಂಕಾ ತಂಡ: ದಿಮುತ್ ಕರುಣಾರತ್ನೆ (ನಾಯಕ), ಧನಂಜಯ್​ ಡಿ ಸಿಲ್ವಾ, ಮಿಲಿಂದ್​ ಸಿರಿವರ್ಧನೆ​, ಲಸಿತ್​ ಮಲಿಂಗ, ಏಂಜೆಲೊ ಮ್ಯಾಥ್ಯೂಸ್​, ಕುಶಾಲ್ ಮೆಂಡಿಸ್​, ಕುಶಾಲ್​ ಪೆರೆರ, ತಿಸಾರ ಪೆರೆರ, ಲಾಹಿರು ತಿರುಮನ್ನೆ, ಇಸುರು ಉದಾನ, ನುವಾನ್​ ಪ್ರದೀಪ್​

ದಕ್ಷಿಣ ಆಫ್ರಿಕಾ: ಕ್ವಿಂಟನ್ ಡಿ ಕಾಕ್, ಹಾಶಿಮ್ ಆಮ್ಲಾ, ಮಾರ್ಕ್ರಾಮ್, ಫಾಫ್ ಡು ಪ್ಲೆಸಿಸ್ (ನಾಯಕ), ಡೆರ್ ಡಸೆನ್, ಡೇವಿಡ್ ಮಿಲ್ಲರ್, ಆಂಡಿಲೆ ಫೆಹಲುಕ್ವೇವೊ, ಕ್ರಿಸ್ ಮೋರಿಸ್, ಕಾಗಿಸೊ ರಬಾಡ, ಇಮ್ರಾನ್ ತಾಹಿರ್, ಹೆಂಡ್ರಿಕ್ಸ್, ಲುಂಗಿ ಎನ್​ಗಿಡಿ

Intro:Body:

Sports

Conclusion:

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.