ETV Bharat / sports

ಬಾಂಗ್ಲಾ ವಿರುದ್ಧ ಟಾಸ್​ ಗೆದ್ದ ಪಾಕ್​​ ಬ್ಯಾಟಿಂಗ್​ ಆಯ್ಕೆ: ಪವಾಡ ಮಾಡ್ತಾರಾ ಸರ್ಫರಾಜ್​ ಹುಡುಗರು? - ಇಂಗ್ಲೆಂಡ್

ರಿಚರ್ಡ್​ ಕೆಟೆಲ್ಬರೊ ಮೈದಾನದಲ್ಲಿ ಪಾಕ್​ ಮತ್ತು ಬಾಂಗ್ಲಾದೇಶ ಮುಖಾಮುಖಿಯಾಗುತ್ತಿದ್ದು, ಟಾಸ್ ಗೆದ್ದ ಪಾಕ್​ ಬ್ಯಾಟಿಂಗ್​ ಆಯ್ದುಕೊಂಡಿದೆ.

ಟಾಸ್​ ಗೆದ್ದ ಪಾಕಿಸ್ತಾನ ಬ್ಯಾಟಿಂಗ್​ ಆಯ್ಕೆ
author img

By

Published : Jul 5, 2019, 2:42 PM IST

ಲಂಡನ್: ವಿಶ್ವಕಪ್ ಟೂರ್ನಿಯಲ್ಲಿ ಲೀಗ್​ ಹಂತದ ಕೊನೆಯ ಪಂದ್ಯವಾಡುತ್ತಿರುವ ಪಾಕ್​ ಮತ್ತು ಬಾಂಗ್ಲಾದೇಶ ರಿಚರ್ಡ್​ ಕೆಟೆಲ್ಬರೊ ಮೈದಾನದಲ್ಲಿ ಮುಖಾಮುಖಿಯಾಗುತ್ತಿದ್ದು, ಟಾಸ್ ಗೆದ್ದ ಪಾಕ್​ ಬ್ಯಾಟಿಂಗ್​ ಆಯ್ದುಕೊಂಡಿದೆ.

ಸತತ ಮೂರು ಪಂದ್ಯಗಳಲ್ಲಿ ಜಯ ಸಾಧಿಸಿರುವ ಪಾಕಿಸ್ತಾನ ಇಂದಿನ ಪಂದ್ಯದಲ್ಲಿ ಗೆಲುವು ಸಾಧಿಸುವ ಹುಮ್ಮಸ್ಸಿನಲ್ಲಿದೆ. ಆದ್ರೆ ಬಲಿಷ್ಟ ತಂಡಗಳ ವಿರುದ್ಧ ಉತ್ತಮ ಪ್ರದರ್ಶನ ತೋರಿರುವ ಬಾಂಗ್ಲಾ ಹುಡುಗರನ್ನ ಸೋಲಿಸೋದು ಸುಲಭದ ಮಾತಲ್ಲ.

1999ರ ವಿಶ್ವಕಪ್​ನ ಟೂರ್ನಿಯಲ್ಲಿ ಪಾಕ್​ ಮತ್ತು ಬಾಂಗ್ಲಾದೇಶ ಮುಖಾಮುಖಿಯಾಗಿದ್ದು, ಬಾಂಗ್ಲಾ ತಂಡ ಪಾಕಿಸ್ತಾನದ ವಿರುದ್ಧ 62 ರನ್​ಗಳಿಂದ ಜಯ ಸಾಧಿಸಿದೆ. ಅಲ್ಲದೆ 2015ರಿಂದ ಇಲ್ಲಿಯವರೆಗೆ ಪಾಕ್​ ಮತ್ತು ಬಂಗ್ಲಾ ಏಕದಿನ ಪಂದ್ಯದಲ್ಲಿ 4 ಬಾರಿ ಎದುರಾಗಿದ್ದು, ನಾಲ್ಕರಲ್ಲೂ ಬಾಂಗ್ಲಾದೇಶ ಜಯಗಳಿಸಿದೆ.

Intro:Body:Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.