ಬರ್ಮಿಂಗ್ಹ್ಯಾಮ್: ಇಂಗ್ಲೆಂಡ್ ವಿರುದ್ಧ ಕೊನೆಯ ಐದು ಓವರ್ಗಳಲ್ಲಿ ನಿಧಾನಗತಿ ಬ್ಯಾಟಿಂಗ್ ನಡೆಸಿದ ಧೋನಿ ವಿರುದ್ಧ ಟೀಕೆಗಳು ಕೇಳಿ ಬಂದಿದ್ದು, ಅಭಿಮಾನಿಗಳಲ್ಲದೇ ಮಾಜಿ ಕ್ರಿಕೆಟ್ ಆಟಗಾರರು ಕೂಡ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಪಂದ್ಯ ಮುಗಿದ ಬಳಿಕ ಪ್ರತಿಕ್ರಿಯೆ ನೀಡಿರುವ ನಾಯಕ ವಿರಾಟ್ ಕೊಹ್ಲಿ, ‘ಧೋನಿ ಬೌಂಡರಿ ಗಳಿಸಲು ಸಾಕಷ್ಟು ಪ್ರಯತ್ನ ಪಟ್ಟಿದ್ದಾರೆ. ಆದರೆ, ನಿಧಾನಗತಿಯ ಪಿಚ್ನಿಂದ ಸಾಧ್ಯವಾಗಲಿಲ್ಲ. ಪಿಚ್ ವರ್ತನೆ ಬಗ್ಗೆ ಅರಿತ ಇಂಗ್ಲೆಂಡ್ ತಂಡದ ವೇಗಿಗಳು ಉತ್ತಮವಾಗಿ ಬೌಲಿಂಗ್ ಮಾಡಿದ್ರು’. ಎಂದು ಹೇಳಿದ್ದಾರೆ.
ದಾದಾಗೂ ಬೇಸರ ತರಿಸಿದ ಧೋನಿ ಆಟ... 'ಆ ಇನ್ನಿಂಗ್ಸ್ ಬಗ್ಗೆ ಕೇಳಬೇಡಿ, ನನ್ನ ಬಳಿ ಉತ್ತರವಿಲ್ಲ' ಎಂದ ಗಂಗೂಲಿ
ಇಂಗ್ಲೆಂಡ್ ವಿರುದ್ಧ 6 ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಧೋನಿ 50 ನೇ ಓವರ್ ತನಕ ಬ್ಯಾಟಿಂಗ್ ನಡೆಸಿ ಔಟಾಗದೇ ಉಳಿದರು. ಗೆಲುವಿಗಾಗಿ 338 ರನ್ಗಳ ಮೊತ್ತ ಚೇಸಿಂಗ್ ಮಾಡಬೇಕಿತ್ತು. ಬಿಗ್ ಹಿಟ್ಟರ್ ಪಾಂಡ್ಯ 46 ರನ್ಗಳಿಸಿ ಔಟಾದರು. ಈ ವೇಳೆ 31 ಎಸೆತಗಳಿಗೆ 71 ರನ್ಗಳ ಅಗತ್ಯವಿತ್ತು. ಆದರೆ, ಧೋನಿ ಹಾಗೂ ಕೇದಾರ್ ಜಾಧವ್ ಕೇವಲ 39 ರನ್ಗಳಿಸಿದ್ದರು.
ಕೊನೆಯ ಓವರ್ಗಳಲ್ಲಿ ಧೋನಿ ಹಾಗೂ ಜಾಧವ್ ಬೌಂಡರಿ ಬಾರಿಸುವ ಬಗ್ಗೆ ಯೋಚಿಸದೇ, ಕೇವಲ ಸಿಂಗಲ್ಗಳನ್ನು ತೆಗೆದುಕೊಳ್ಳುತ್ತಿದ್ದರು. ಇದು ವೀಕ್ಷಕರಿಗಷ್ಟೇ ಅಲ್ಲದೆ ಕಾಮೆಂಟರಿ ಮಾಡುತ್ತಿದ್ದ ನಾಸೀರ್ ಹುಸೇನ್ ಹಾಗೂ ಗಂಗೂಲಿಗೂ ಆಶ್ಚರ್ಯ ತಂದಿತ್ತು.