ನವದೆಹಲಿ: ವಿಶ್ವಕಪ್ ಟೂರ್ನಿ ಆರಂಭವಾದಾಗಿನಿಂದ ಟೀಂ ಇಂಡಿಯಾಕ್ಕೆ ನಾಲ್ಕನೇ ಕ್ರಮಾಂಕಕ್ಕೆ ಯಾವ ಆಟಗಾರನನ್ನ ಕಣಕ್ಕಿಳಿಸಬೇಕು ಎಂಬುದೇ ಒಂದು ತಲೆನೋವಾಗಿದ್ದು, ಈವರೆಗೆ ಹಲವು ಆಟಗಾರರನ್ನ ಕೂಡ ಬದಲಾವಣೆ ಮಾಡಲಾಗಿದೆ.
ವಿಜಯ್ ಶಂಕರ್, ಕೆ ಎಲ್ ರಾಹುಲ್ ಮತ್ತು ರಿಷಭ್ ಪಂತ್‌ರನ್ನ ನಾಲ್ಕನೇ ಕ್ರಮಾಂಕದಲ್ಲಿ ಟೀಂ ಇಂಡಿಯಾ ಕಣಕ್ಕಿಳಿಸಿತ್ತು. ಅಂತಿಮವಾಗಿ ರಿಷಭ್ ಪಂತ್ ನಾಲ್ಕನೇ ಕ್ರಮಾಂಕಕ್ಕೆ ಸರಿಯಾದ ಆಟಗಾರನಾಗುತ್ತಾನೆ ಎಂದು ಭಾರತ ತಂಡದ ಮಾಜಿ ಆಟಗಾರ ಯುವರಾಜ್ ಸಿಂಗ್ ಭವಿಷ್ಯ ನುಡಿದಿದ್ದಾರೆ.
-
I think finally we have found our no 4 batsman for the future ! Let’s groom him properly yeah ! @RishabPant777
— yuvraj singh (@YUVSTRONG12) July 2, 2019 " class="align-text-top noRightClick twitterSection" data="
">I think finally we have found our no 4 batsman for the future ! Let’s groom him properly yeah ! @RishabPant777
— yuvraj singh (@YUVSTRONG12) July 2, 2019I think finally we have found our no 4 batsman for the future ! Let’s groom him properly yeah ! @RishabPant777
— yuvraj singh (@YUVSTRONG12) July 2, 2019
ನಿನ್ನೆ ನಡೆದ ಬಾಂಗ್ಲಾ ವಿರುದ್ಧದ ಪಂದ್ಯದಲ್ಲಿ ನಾಲ್ಕನೇ ಕಮಾಂಕದಲ್ಲಿ ಕಣಕ್ಕಿಳಿದ ರಿಷಭ್ ಪಂತ್ 41 ಎಸೆತಗಳಲ್ಲಿ6 ಬೌಡರಿ, ಒಂದು ಸಿಕ್ಸರ್ ಸಹಿತ 48 ರನ್ ಗಳಿಸಿದ್ದರು. ಪಂದ್ಯದ ಬಳಿಕ ಟ್ವೀಟ್ ಮಾಡಿರುವ ಯುವಿ, ಫೈನಲಿ ಭಾರತಕ್ಕೆ ಭವಿಷ್ಯದ ನಾಲ್ಕನೇ ಕ್ರಮಾಂಕದ ಆಟಗಾರ ಸಿಕ್ಕಾಯ್ತು ಎಂದು ಬರೆದುಕೊಂಡಿದ್ದಾರೆ. ಶಿಖರ್ ಧವನ್ ಗಾಯದ ಸಮಸ್ಯೆಯಿಂದ ವಿಶ್ವಕಪ್ ಟೂರ್ನಿಯಿಂದ ಹೊರಬಿದ್ದ ನಂತರ ಅವರ ಸ್ಥಾನಕ್ಕೆ ಬಿಸಿಸಿಐ, ರಿಷಭ್ ಪಂತ್‌ರನ್ನ ಆಯ್ಕೆಮಾಡಿತ್ತು.