ಇಂಗ್ಲೆಂಡ್: ವಿಂಡೀಸ್ ಮತ್ತು ಪಾಕ್ ನಡುವೆ ನಡೆದ ವಿಶ್ವಕಪ್ ಕ್ರಿಕೆಟ್ ಟೂರ್ನಿಯ ಎರಡನೇ ಪಂದ್ಯದಲ್ಲಿ ವಿಂಡೀಸ್ ತಂಡ ಭರ್ಜರಿ ಜಯ ಗಳಿಸಿದೆ. ಪಾಕಿಸ್ತಾನ ಬೇಗನೆ ಆಲೌಟ್ ಆದ ಕಾರಣ ಪಂದ್ಯ ಬಹುಬೇಗನೆ ಮುಕ್ತಾಯ ಕಂಡಿತು.
ಪಂದ್ಯ ನೋಡಲು ಆಗಮಿಸಿದ ಅಪಾರ ಕ್ರಿಕೆಟ್ ಅಭಿಮಾನಿಗಳು ಟ್ರೆಂಟ್ ಬ್ರಿಡ್ಜ್ನಲ್ಲಿ ಟಿಕೆಟ್ ಪಡೆಯಲು ಸರತಿ ಸಾಲಲ್ಲಿ ನಿಂತಿದ್ದರು. ಟಿಕೆಟ್ಗಾಗಿ ಅತಿ ದೊಡ್ಡ ಕ್ಯೂ ಇದ್ದ ಕಾರಣ ಹಲವು ಮಂದಿ ಗಂಟೆಗಟ್ಟಲೆ ನಿಲ್ಲಬೇಕಾಯ್ತು.
ಗಂಟೆಗಟ್ಟಲೆ ಸರತಿಯಲ್ಲಿ ನಿಂತು ಟಿಕೆಟ್ ಪಡೆದು ಮ್ಯಾಚ್ ನೋಡಲು ಬಂದವರಿಗೆ ಆಘಾತವಾಯ್ತು. ಯಾಕಂದ್ರೆ, ಕೆಲವೇ ನಿಮಿಷಗಳಲ್ಲಿ ಪಂದ್ಯ ಮುಗಿದೇ ಹೋಗಿತ್ತು. ಇದರಿಂದ ಸಾಕಷ್ಟು ಅಭಿಮಾನಿಗಳು ನಿರಾಸೆಗೊಳಗಾದ್ರು.
ಇನ್ನು ಹಲವರಿಗೆ ಸರಿಯಾದ ಸಮಯದಲ್ಲಿ ಟಿಕೆಟ್ ತಲುಪಿಸುವಲ್ಲಿ ಐಸಿಸಿ ವಿಫಲವಾಗಿದೆ. ಹೀಗಾಗಿ ಅಭಿಮಾನಿಗಳಲ್ಲಿ ಕ್ಷಮೆ ಕೇಳಿರುವ ಅಂತರಾಷ್ಟ್ರೀಯ ಕ್ರಿಕೆಟ್ ಆಡಳಿತ ಮಂಡಳಿ ಹಣ ವಾಪಾಸ್ ನೀಡುವ ಭರವಸೆ ನೀಡಿದೆ.
ನಿನ್ನೆ ನಡೆದ ಪಂದ್ಯದಲ್ಲಿ ಪಾಕಿಸ್ತಾನ ತಂಡ 21.4 ಓವರ್ಗಳಲ್ಲಿ 105 ರನ್ಗಳಿಗೆ ಸರ್ವ ಪತನ ಕಂಡಿತ್ತು. ಸುಲಭ ಗುರಿ ಬೆನ್ನತ್ತಿದ ವೆಸ್ಟ್ ಇಂಡೀಸ್ 13.4 ಓವರ್ಗಳಲ್ಲಿ 108 ರನ್ಗಳಿಸಿ ಜಯದ ನಗೆ ಬೀರಿತು.