ಸೌತಾಂಪ್ಟನ್: ಬುಧವಾರ ಕೊನೆಗೊಂಡ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಪಂದ್ಯದಲ್ಲಿ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿಯನ್ನು ಎರಡೂ ಇನ್ನಿಂಗ್ಸ್ನಲ್ಲಿ ಔಟ್ ಮಾಡಿದ್ದು ಅದ್ಭುತ ಎನಿಸುತ್ತಿದೆ ಎಂದು ನ್ಯೂಜಿಲೆಂಡ್ ವೇಗಿ ಕೈಲ್ ಜೆಮೀಸನ್ ಹೇಳಿದ್ದಾರೆ.
ಆರ್ಸಿಬಿ ಪರ ಕೊಹ್ಲಿ ನಾಯಕತ್ವದಲ್ಲಿ ಆಡುವ ಆಲ್‌ರೌಂಡರ್ ಕೈಲ್ ಜೇಮಿಸನ್ ಫೈನಲ್ ಪಂದ್ಯದಲ್ಲಿ ಮೊದಲ ಇನ್ನಿಂಗ್ಸ್ನಲ್ಲಿ 5 ವಿಕೆಟ್ ಮತ್ತು 2ನೇ ಇನ್ನಿಂಗ್ಸ್ನಲ್ಲಿ ಪ್ರಮುಖ 2 ವಿಕೆಟ್ ಪಡೆದು ನ್ಯೂಜಿಲ್ಯಾಂಡ್ ಗೆಲುವಿನಲ್ಲಿನ ಪ್ರಮುಖ ಪಾತ್ರವಹಿಸಿದ್ದರು. ವಿಶೇಷವಾಗಿ ಭಾರತ ತಂಡದ ನಾಯಕ ಕೊಹ್ಲಿ ಅವರನ್ನು 2 ಬಾರಿ ಔಟ್ ಮಾಡಿದ್ದರು. ಎರಡೂ ಸಂದರ್ಭದಲ್ಲಿ ಮೊದಲ 10 ಓವರ್ ಒಳಗೆ ಕೊಹ್ಲಿ ವಿಕೆಟ್ ಪಡೆದಿದ್ದು ವಿಶೇಷವಾಗಿತ್ತು.
ಇದೊಂದು ದೊಡ್ಡ ಕ್ಷಣವಾಗಿದೆ. ತಂಡದ ಇತರ ಬೌಲರ್ಗಳ ಜೊತೆಗೆ ಕೆಲಸ ಮಾಡಿದ್ದು ನನ್ನ ಸಾಧನೆಗೆ ನೆರವಾಗಿದೆ. ವಿರಾಟ್ ಕೊಹ್ಲಿ ವಿಶ್ವದರ್ಜೆಯ ಆಟಗಾರ. ಅವರ ಜೊತೆ ಆರ್ಸಿಬಿಯಲ್ಲಿ ಅವರ ವಿರುದ್ಧ ಬೌಲಿಂಗ್ ಮಾಡಿದ್ದು ಕೆಲವು ಅನುಭವ ನನಗೆ ನೆರವಾಯಿತು. ಟೆಸ್ಟ್ ಪಂದ್ಯದಲ್ಲಿ ಅವರ ವಿಕೆಟ್ ಎರಡು ಬಾರಿ ಪಡೆಯುವುದು ನಿಜಕ್ಕೂ ಅದ್ಭುತ ಎಂದು ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದ ಜೆಮೀಸನ್ ಹೇಳಿದ್ದಾರೆ.
ಭಾರತ ನೀಡಿದ್ದ 139 ರನ್ಗಳ ಸಾಧಾರಣ ಗುರಿಯನ್ನು ನ್ಯೂಜಿಲ್ಯಾಂಡ್ ತಂಡ ಕೇನ್ ವಿಲಿಯಮ್ಸನ್(52) ಮತ್ತು ರಾಸ್ ಟೇಲರ್(47) ಅದ್ಭುತ ಜೊತೆಯಾಟದಿಂದ ಚೊಚ್ಚಲ ಟ್ರೋಫಿ ಎತ್ತಿ ಹಿಡಿದಿತ್ತು.
ಇದನ್ನು ಓದಿ:WTC records: ಅಶ್ವಿನ್, ಲಾಬುಶೇನ್ ಸೇರಿದಂತೆ ಟೂರ್ನಿಯಲ್ಲಿನ ವೈಯಕ್ತಿಕ ದಾಖಲೆಗಳ ವಿವರ ಇಲ್ಲಿದೆ