ಇಂಗ್ಲೆಂಡ್: ಭಾರತದಲ್ಲಿ ಕ್ರೀಡಾ ಅಭಿಮಾನಿಗಳಿಗೇನು ಕಡಿಮೆ ಇಲ್ಲ. ಅದರಲ್ಲೂ ಕ್ರಿಕೆಟ್ ಎಂದರೆ ಭಾರತೀಯರಿಗೆ ಅಚ್ಚು ಮೆಚ್ಚು, ಸಚಿನ್ ಅಭಿಮಾನಿ ಸುಧೀರ್, ಧೋನಿ ಅಭಿಮಾನಿ ರಾಮ್ ಬಾಬು ಅವರಂತೆ ಟೀಂ ಇಂಡಿಯಾಗೆ ಕೂಡ ಒಬ್ಬ ಕನ್ನಡದ ಅಭಿಮಾನಿ ಇದ್ದಾರೆ.
ಕನ್ನಡಿಗ ಸುಗುಮಾರ್ ಕುಮಾರ್ ಆರ್ಸಿಬಿ ತಂಡದ ಕಟ್ಟಾ ಅಭಿಮಾನಿಯಾಗಿದ್ದು, ವಿಶ್ವಕಪ್ ಟೂರ್ನಿಯಲ್ಲಿ ಭಾರತ ತಂಡವನ್ನ ಚಿಯರ್ ಮಾಡಲು ಇಂಗ್ಲೆಂಡ್ಗೆ ತೆರಳಿದ್ದು, ಕನ್ನಡ ಬಾವುಟ ಹಿಡಿದು ಆಟಗಾರರನ್ನ ಹುರಿದುಂಬಿಸುತ್ತಿದ್ದಾರೆ.
ಸುಗುಮಾರ್ ಕುಮಾರ್ ಕೇಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಹಿರಿಯ ಕಾರ್ಯ ನಿರ್ವಾಹಕ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಕಟ್ಟಾ ಅಭಿಮಾನಿ. ಈ ಹಿಂದೆ ಐಪಿಎಲ್ ಪಂದ್ಯಗಳ ವೇಳೆ 'ಆಹಾರವನ್ನು ಉಳಿಸಿ, ಜೀವ ಉಳಿಸಿ' ಎಂಬ ಭಿತ್ತಿಪತ್ರಗಳನ್ನ ಹಿಡಿದು ಸುದ್ದಿಯಾಗಿದ್ದರು.
ಕಲೆ ಮತ್ತು ಸಂಸ್ಕೃತಿಯಲ್ಲಿ ಡಾಕ್ಟರೇಟ್ ಪಡೆದಿರುವ ಸುಗುಮಾರ್ ಬೀದಿ ಮಕ್ಕಳ ಹಸಿವು ನೀಗಿಸಲು ಅನೇಕ ಅಭಿಯಾನಗಳನ್ನು ನಡೆಸಿದ್ದಾರೆ.