ETV Bharat / sports

ಟೆಸ್ಟ್ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದು ಧೋನಿಯ ಧೈರ್ಯಶಾಲಿ, ನಿಸ್ವಾರ್ಥ ನಿರ್ಧಾರ: ರವಿಶಾಸ್ತ್ರಿ - ರವಿಶಾಸ್ತ್ರಿ

ಧೋನಿ 100 ಟೆಸ್ಟ್‌ ಪಂದ್ಯಗಳನ್ನು ಪೂರ್ಣಗೊಳಿಸಲು ಕೇವಲ 10 ಪಂದ್ಯಗಳಷ್ಟೇ ಬಾಕಿ ಇದ್ದವು. ಆದರೆ ಅದ್ಯಾವುದನ್ನೂ ಲೆಕ್ಕಿಸದೆ ನಿವೃತ್ತಿ ನಿರ್ಧಾರ ತೆಗೆದುಕೊಂಡಿದ್ದರು ಎಂದು ರವಿಶಾಸ್ತ್ರಿ ಕೊಂಡಾಡಿದ್ದಾರೆ.

ರವಿಶಾಸ್ತ್ರಿ
ರವಿಶಾಸ್ತ್ರಿ
author img

By

Published : Sep 3, 2021, 5:24 PM IST

ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಟೆಸ್ಟ್ ಕ್ರಿಕೆಟ್‌ನಿಂದ ನಿವೃತ್ತಿಯಾಗುವ ನಿರ್ಧಾರ ತೆಗೆದುಕೊಂಡಿದ್ದು ಧೈರ್ಯಶಾಲಿ ಮತ್ತು ನಿಸ್ವಾರ್ಥವಾಗಿತ್ತು ಎಂದು ಭಾರತೀಯ ತಂಡದ ಕೋಚ್ ರವಿಶಾಸ್ತ್ರಿ ಹೇಳಿದ್ದಾರೆ. 2014ರಲ್ಲಿ ಧೋನಿ 90 ಟೆಸ್ಟ್ ಆಡಿದ್ದರು, ಆದರೆ ಅವರು 100 ಟೆಸ್ಟ್ ಆಡುವವರೆಗೂ ಕಾಯಲಿಲ್ಲ ಎಂದು ಪ್ರಶಂಸಿಸಿದ್ದಾರೆ.

ರವಿಶಾಸ್ತ್ರಿ ಬರೆದಿರುವ Stargazing: The Players in My Life ಪುಸ್ತಕದಲ್ಲಿ ಈ ಬಗ್ಗೆ ಬರೆದುಕೊಂಡಿದ್ದಾರೆ. ಧೋನಿ ಆ ಸಮಯದಲ್ಲಿ ಕೇವಲ ಭಾರತ ಮಾತ್ರವಲ್ಲದೆ, ವಿಶ್ವದ ಶ್ರೇಷ್ಠ ಆಟಗಾರರಾಗಿದ್ದರು. ಎರಡು ವಿಶ್ವಕಪ್ ಸೇರಿದಂತೆ ಮೂರು ಐಸಿಸಿಯ ಮಹತ್ವದ ಟ್ರೋಫಿಗಳನ್ನು ಗೆದ್ದು ದಾಖಲೆ ಬರೆದಿದ್ದರು. ಆ ಸಮಯದಲ್ಲಿ ಅವರ ಫಾರ್ಮ್ ಉತ್ತಮವಾಗಿತ್ತು. ಅವರು 100 ಟೆಸ್ಟ್‌ಗಳನ್ನು ಪೂರ್ಣಗೊಳಿಸಲು ಕೇವಲ 10 ಪಂದ್ಯಗಳಷ್ಟೇ ಬಾಕಿ ಇದ್ದವು. ಆದರೆ ಧೋನಿ ಇದ್ಯಾವುದನ್ನೂ ಲೆಕ್ಕಿಸದೆ ನಿವೃತ್ತಿ ನಿರ್ಧಾರ ತೆಗೆದುಕೊಂಡಿದ್ದರು ರವಿಶಾಸ್ತ್ರಿ ಎಂದು ಕೊಂಡಾಡಿದ್ದಾರೆ.

ಧೋನಿ ತಂಡದ ಮೂರು ಮಾದರಿಯ ಕ್ರಿಕೆಟ್​​ಗೆ ಫಿಟ್ ಆಟಗಾರರಾಗಿದ್ದರು. ಅವರ ವೃತ್ತಿಜೀವನವನ್ನು ಹೆಚ್ಚಿಸಲು ಮತ್ತಷ್ಟು ಅವಕಾಶವಿತ್ತು. ಆತ ತುಂಬಾ ಚಿಕ್ಕವನಲ್ಲ ಎಂಬುದು ನಿಜ, ಆದರೆ ಅಷ್ಟೊಂದು ವಯಸ್ಸಂತೂ ಆಗಿರಲಿಲ್ಲ ಎಂದು ಬರೆದಿದ್ದಾರೆ.

ಭಾರತದ ಮಾಜಿ ಆಲ್‌ರೌಂಡರ್ ರವಿಶಾಸ್ತ್ರಿ, ತಮ್ಮ ಪುಸ್ತಕದಲ್ಲಿ ಅನೇಕ ಆಟಗಾರರ ಬಗ್ಗೆ ಬರೆದಿದ್ದಾರೆ. ಧೋನಿ ಅವರು ತಮ್ಮ ನಿರ್ಧಾರವನ್ನು ಮರುಪರಿಶೀಲಿಸುವಂತೆ ಭಾರತದ ಮಾಜಿ ವಿಕೆಟ್ ಕೀಪರ್ ಮನವೊಲಿಸಲು ಪ್ರಯತ್ನಿಸಿದ್ದರು. ಆದಾಗ್ಯೂ, ಧೋನಿ ಯಾರ ಮಾತೂ ಕೇಳದೆ, ನಿರ್ಧಾರ ತೆಗೆದುಕೊಂಡಿದ್ದರು. ಧೋನಿ ನಿವೃತ್ತರಾದಾಗ ರವಿಶಾಸ್ತ್ರಿ ತಂಡದ ಕೋಚ್​ ಆಗಿದ್ದರು.

ಎಲ್ಲಾ ಆಟಗಾರರು ತಮ್ಮ ವೃತ್ತಿ ಜೀವನದಲ್ಲಿ ಹೆಗ್ಗುರುತುಗಳನ್ನು ಮೂಡಿಸಿರುತ್ತಾರೆ. ಆದರೆ ಧೋನಿಯು ತಮ್ಮ ವೃತ್ತಿ ಜೀವನದ ನಿವೃತ್ತಿಯ ನಿರ್ಧಾರ ದಿಟ್ಟ ಮತ್ತು ನಿಸ್ವಾರ್ಥವಾಗಿತ್ತು ಎಂದು ನಾನು ಭಾವಿಸುತ್ತೇನೆ. ಕ್ರಿಕೆಟ್‌ನಲ್ಲಿ ಅತ್ಯಂತ ಶಕ್ತಿಶಾಲಿ ಸ್ಥಾನವನ್ನು ಬಿಡುವುದು ಅಷ್ಟು ಸುಲಭವಲ್ಲ.

ಧೋನಿ ಅಸಾಂಪ್ರದಾಯಿಕ ಕ್ರಿಕೆಟಿಗ. ವಿಕೆಟ್ ಹಿಂದೆ ಮತ್ತು ಮುಂದೆ ಅವರ ಕೌಶಲ ಅನುಕರಣೀಯ. ಯುವಕರಿಗೆ ಹೊಸ ಸಲಹೆಗಳನ್ನು ನೀಡುವ ಮೂಲಕ ತಂಡವನ್ನು ಅವರು ಬಲಪಡಿಸುತ್ತಿದ್ದರು. ಮೈದಾನದಲ್ಲಿ ಏನಾಗುತ್ತಿದೆ ಎಂಬುದನ್ನು ಧೋನಿ ತಕ್ಷಣ ಗಮನಿಸುತ್ತಿದ್ದರು ಮತ್ತು ಅದರ ಆಧಾರದ ಮೇಲೆ ಸಮಯೋಚಿತ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದ್ದರು ಎಂದು ರವಿಶಾಸ್ತ್ರಿ ಹೇಳಿದ್ದಾರೆ.

ಸಚಿನ್ ತೆಂಡೂಲ್ಕರ್ ಮತ್ತು ಕಪಿಲ್ ದೇವ್ ಹೊರತುಪಡಿಸಿ ಧೋನಿ ಭಾರತದ ಮೂವರು ಪ್ರಭಾವಿ ಕ್ರಿಕೆಟಿಗರಲ್ಲಿ ಒಬ್ಬರು ಎಂದು ಶಾಸ್ತ್ರಿ ಬಣ್ಣಿಸಿದ್ದಾರೆ.

ಇದನ್ನೂ ಓದಿ: ಇಂಗ್ಲೆಂಡ್‌ ವಿರುದ್ಧದ 4ನೇ ಟೆಸ್ಟ್​​ನಿಂದ ಆರ್​.ಅಶ್ವಿನ್ ಕೈಬಿಟ್ಟಿದ್ದಕ್ಕೆ ಆಕ್ರೋಶ: ​ಯಾರು, ಏನಂದ್ರು? ಇಲ್ಲಿದೆ ನೋಡಿ..

ETV Bharat Logo

Copyright © 2024 Ushodaya Enterprises Pvt. Ltd., All Rights Reserved.