ಲಾರ್ಡ್ಸ್: ವಿಶ್ವಕಪ್ ಟೂರ್ನಿಯ ನಿರ್ಣಾಯಕ ಪಂದ್ಯದಲ್ಲಿ ಬಾಂಗ್ಲಾ ವಿರುದ್ಧ ಪಾಕಿಸ್ತಾನ ಗೆಲುವು ಸಾಧಿಸಿತು. ಆದ್ರೆ ಸೆಮಿಫೈನಲ್ಗೆ ಎಂಟ್ರಿ ಕೊಡಲು ಮ್ಯಾಜಿಕ್ ನಡೆಯದ ಕಾರಣ ಟೂರ್ನಿಯಿಂದ ಹೊರಬಿದ್ದಿದೆ.
ಲಾರ್ಡ್ಸ್ನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಪಾಕ್ ಬ್ಯಾಟಿಂಗ್ ಆಯ್ದುಕೊಂಡಿತು. ಇನ್ನು ಪಾಕ್ ಸೆಮಿಫೈನಲ್ ಕನಸು ಜೀವಂತವಾಗಿರಿಸಿಕೊಳ್ಳಲು 300ಕ್ಕೂ ಹೆಚ್ಚು ರನ್ಗಳಿಂದ ಗೆಲ್ಲಬೇಕಿತ್ತು. ಪಾಕ್ ಪರ ಇಮಾಮ್ ಉಲ್ ಹಕ್ (100), ಬಾಬರ್ ಅಜಂ (96) ಹಾಗೂ ಇಮಾದ್ ವಾಸೀಂ (43) ರನ್ ಪೇರಿಸಿದ್ದು ಬಿಟ್ಟರೆ ಉಳಿದವರು ಬಂದಷ್ಟೇ ವೇಗವಾಗಿ ಪೆವಿಲಿಯನ್ ಸೇರಿದರು. ಪರಿಣಾಮ 50 ಓವರ್ಗಳಲ್ಲಿ ಪಾಕ್ 315 ರನ್ ಕಲೆಹಾಕಿತು. ಇದರಿಂದ ಪಾಕ್ ಸೆಮೀಸ್ಗೆ ತಲುಪಲು ಬಾಂಗ್ಲಾವನ್ನು 7 ರನ್ಗೆ ಕಟ್ಟಿ ಹಾಕಬೇಕಿತ್ತು.
-
Pakistan win by 94 runs!
— Cricket World Cup (@cricketworldcup) July 5, 2019 " class="align-text-top noRightClick twitterSection" data="
Shaheen finishes with six. What a performance!#PAKvBAN | #CWC19 pic.twitter.com/bH4tKe2DJr
">Pakistan win by 94 runs!
— Cricket World Cup (@cricketworldcup) July 5, 2019
Shaheen finishes with six. What a performance!#PAKvBAN | #CWC19 pic.twitter.com/bH4tKe2DJrPakistan win by 94 runs!
— Cricket World Cup (@cricketworldcup) July 5, 2019
Shaheen finishes with six. What a performance!#PAKvBAN | #CWC19 pic.twitter.com/bH4tKe2DJr
ಆದ್ರೆ ಬ್ಯಾಟಿಂಗ್ ಆರಂಭಿಸಿದ ಬಾಂಗ್ಲಾ ಪಡೆ, 44.1 ಓವರ್ಗಳಲ್ಲಿ 221 ರನ್ ಗಳಿಸಿ ಆಲೌಟ್ ಆಯಿತು. ಈ ಮೂಲಕ 94 ರನ್ಗಳಿಂದ ಪಾಕ್ ಜಯಿಸಿದ್ರು ಕೂಡ ಸೆಮೀಸ್ ಕನಸು ಭಗ್ನವಾಯಿತು.
ಪಾಕ್ ಪರ ಶಾಹೀನ್ ಅಫ್ರಿದಿ 6, ಶಬಾದ್ ಖಾನ್ 2, ಮೊಹಮ್ಮದ್ ಅಮಿರ್ ಹಾಗೂ ರಿಯಾಜ್ ತಲಾ 1 ವಿಕೆಟ್ ಕಬಳಿಸಿದರು. ಇನ್ನು ಬಾಂಗ್ಲಾ ಪರ ಮುಸ್ತಫಿಜುರ್ ರಹಮಾನ್ 5, ಮೊಹಮ್ಮದ್ ಸೈಫುದ್ದಿನ್ 3 ವಿಕೆಟ್ ಕಿತ್ತರು.
ಸಂಕ್ಷಿಪ್ತ ಸ್ಕೋರ್:
ಪಾಕ್: 315/9 (50)
ಬಾಂಗ್ಲಾ: 221/10 (44.1)