ಚಿತ್ತಗಾಂಗ್: ವೃತ್ತಿ ಬದುಕಿನ ಕೊನೆಯ ಪಂದ್ಯವಾಡಿದ ಜಿಂಬಾಬ್ವೆ ತಂಡದ ನಾಯಕ ಹ್ಯಾಮಿಲ್ಟನ್ ಮಸಕಡ್ಜಾ ಅಫ್ಘಾನಿಸ್ತಾನದ ವಿರುದ್ಧ 71 ರನ್ಗಳಿಸಿ ಗೆಲುವಿನ ರೂವಾರಿಯಾದರು.
ಅಫ್ಘಾನಿಸ್ತಾನ ನೀಡಿದ 155 ರನ್ಗಳ ಗುರಿಯನ್ನು ಹ್ಯಾಮಿಲ್ಟನ್ ಮಸಕಡ್ಜಾ ಅವರ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ಇನ್ನು 3 ಎಸೆತಗಳಿರುವಂತೆ ತಲುಪಿ ಜಯ ಸಾಧಿಸಿತು. 42 ಎಸೆತಗಳನ್ನೆದುರಿಸಿದ ಮಸಕಡ್ಜಾ 5 ಭರ್ಜರಿ ಸಿಕ್ಸರ್ ಹಾಗೂ 4 ಬೌಂಡರಿ ಸೇರಿದಂತೆ 71 ರನ್ಗಳಿಸಿ ಕೊನೆಯ ಪಂದ್ಯವನ್ನು ಸ್ಮರಣೀಯವನ್ನಾಗಿಸಿಕೊಂಡರು.
![Hamilton Masakadza](https://etvbharatimages.akamaized.net/etvbharat/prod-images/untitled-design-5-7_2109newsroom_1569036584_283.webp)
2001ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಪದಾರ್ಪಣೆ ಮಾಡಿದ ಹ್ಯಾಮಿಲ್ಟನ್ ಮಸಕಡ್ಜಾ ಜಿಂಬಾಂಬ್ವೆ ಪರ 38 ಟೆಸ್ಟ್, 209 ಏಕದಿನ ಹಾಗೂ 65 ಟಿ-20 ಪಂದ್ಯಗಳನ್ನಾಡಿದ್ದಾರೆ. ಏಕದಿನ ಕ್ರಿಕೆಟ್ನಲ್ಲಿ ಅತಿ ಹೆಚ್ಚು ರನ್ಗಳಿಸಿದ ಜಿಂಬಾಬ್ವೆಯ 4ನೇ ಬ್ಯಾಟ್ಸ್ಮನ್ ಎಂಬ ಹೆಗ್ಗಳಿಕೆಗೆ ಅವರು ಪಾತ್ರರಾಗಿದ್ದಾರೆ.
ವಿಶ್ವದಾಖಲೆಯೊಡನೆ ವಿದಾಯ
ಅಫ್ಘಾನಿಸ್ತಾನದ ಬೌಲರ್ಗಳನ್ನು ಬೆಂಡೆತ್ತಿದ ಹ್ಯಾಮಿಲ್ಟನ್ ಮಸಕಡ್ಜಾ 41 ಎಸೆತಗಳಲ್ಲಿ 71 ರನ್ಗಳಿಸುವ ಮೂಲಕ ನಿವೃತ್ತಿಯ ಪಂದ್ಯದಲ್ಲಿ ಗರಿಷ್ಠ ರನ್ ಬಾರಿಸಿ ವಿಶ್ವದಾಖಲೆಗೆ ಪಾತ್ರರಾದರು.