ಹೈದರಾಬಾದ್: ಆಸೀಸ್ ವಿರುದ್ಧದ ಪ್ರವಾಸದಿಂದ ಕೈ ಬಿಟ್ಟಿದ್ದ ಟೀಂ ಇಂಡಿಯಾ ಆರಂಭಿಕ ಆಟಗಾರ ರೋಹಿತ್ ಶರ್ಮಾ ಅವರ ಗಾಯದ ಬಗ್ಗೆ ಯಾವುದೇ ಸ್ಪಷ್ಟತೆ ಇಲ್ಲ ಎಂದು ಮಾಜಿ ಕ್ರಿಕೆಟಿಗ ಸಂಜಯ್ ಮಂಜ್ರೇಕರ್ ಹೇಳಿದ್ದಾರೆ.
ಇದೀಗ ರೋಹಿತ್ ಶರ್ಮಾ ಅವರನ್ನು ಟೆಸ್ಟ್ ಸರಣಿಗೆ ಆಯ್ಕೆ ಮಾಡಲಾಗಿದೆ. ಆದಾಗ್ಯೂ, ಏಕದಿನ ಮತ್ತು ಟಿ -20 ಸರಣಿಯಿಂದ ಅವರಿಗೆ ವಿಶ್ರಾಂತಿ ನೀಡಲಾಗಿದೆ. ಇದೀಗ ರೋಹಿತ್ ಶರ್ಮಾ ಅವರ ಫಿಟ್ನೆಸ್ ವಿಷಯದಲ್ಲಿ ಶೂನ್ಯ ಸ್ಪಷ್ಟತೆ ಇದೆ ಎಂದು ಮಂಜ್ರೇಕರ್ ಹೇಳಿದ್ದಾರೆ.
ಶರ್ಮಾ ಅವರಿಗೆ ಮಂಡಿರಜ್ಜು ಗಾಯವಾಗಿದೆ ಎಂದು ಹೇಳಲಾಗುತ್ತಿತ್ತು. ಆದರೆ, ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಗಾಯಗೊಂಡ ಇತರ ಆಟಗಾರರ ಬಗ್ಗೆ ವಿವರಿಸಿದಂತೆ ರೋಹಿತ್ ಶರ್ಮಾ ಅವರ ಗಾಯದ ಸ್ವರೂಪದ ಬಗ್ಗೆ ಮಾಹಿತಿ ನೀಡದೇ ಮೌನವಾಗಿದೆ ಎಂದು ಹೇಳಿದ್ದಾರೆ.
"ರೋಹಿತ್ ಶರ್ಮಾ ಅವರ ಫಿಟ್ನೆಸ್ ವಿಷಯದಲ್ಲಿ ಶೂನ್ಯ ಸ್ಪಷ್ಟತೆ ಇದೆ. ಬಿಸಿಸಿಐ ಅಂತೆಯೇ ರೋಹಿತ್ ಅವರ ನಿಲುವು ಇದೆ ಎಂದು ನನಗೆ ಖಾತ್ರಿಯಿದೆ. ಈ ಬಗ್ಗೆ ಜನರಿಗೆ ಮಾಹಿತಿ ಸಿಗದಿದ್ದಾಗ ಊಹಾಪೋಹಗಳು ಉದ್ಭವಿಸುತ್ತವೆ. ಹಾಗಾಗಿ, ಏನು ನಡೆಯುತ್ತಿದೆ ಎಂಬುದರ ಬಗ್ಗೆ ನನಗೆ ಯಾವುದೇ ಸ್ಪಷ್ಟತೆ ಇಲ್ಲ" ಎಂದು ಪಾಕಿಸ್ತಾನದ ಯೂಟ್ಯೂಬ್ ಚಾನಲ್ ಜೊತೆ ಮಾತನಾಡುವಾಗ ಮಂಜ್ರೇಕರ್ ತಿಳಿಸಿದ್ದಾರೆ.