ಸೌತಾಂಪ್ಟನ್: ಪಾಕ್ ವಿರುದ್ಧದ ಮೂರನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ಬೃಹತ್ ರನ್ಗಳಿಸುವತ್ತ ದಾಪುಗಾಲು ಹಾಕಿದೆ. ಇದರ ಮಧ್ಯೆ ಇಂಗ್ಲೆಂಡ್ನ ಉದಯೋನ್ಮುಖ ಬ್ಯಾಟ್ಸ್ಮನ್ ಜಾಕ್ ಕ್ರಾಲಿ ದ್ವಿಶತಕ ಸಿಡಿಸಿ ಮಿಂಚಿದ್ದಾರೆ.
ಮೂರನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡಲು ಕಣಕ್ಕಿಳಿದ 22 ವರ್ಷದ ಜಾಕ್ ಕ್ರಾಲಿ ಅದ್ಭುತ ಬ್ಯಾಟಿಂಗ್ ಪ್ರದರ್ಶನ ನೀಡಿದರು. ಇದರ ಜತೆಗೆ ತಾವು ಸಿಡಿಸಿದ ಶತಕವನ್ನು ದ್ವಿಶತಕವಾಗಿ ಪರಿವರ್ತಿಸಿರುವ ಇಂಗ್ಲೆಂಡ್ನ 7ನೇ ಬ್ಯಾಟ್ಸ್ಮನ್ ಆಗಿದ್ದಾರೆ. ಹಾಗೆಯೇ ಚಿಕ್ಕ ವಯಸ್ಸಿನಲ್ಲಿ ಡಬಲ್ ಸೆಂಚುರಿ ಬಾರಿಸಿರುವ ಇಂಗ್ಲೆಂಡ್ನ ಮೂರನೇ ಪ್ಲೇಯರ್ ಎಂಬ ಸಾಧನೆ ಮಾಡಿದ್ದಾರೆ.
-
A superb innings comes to an end!
— ICC (@ICC) August 22, 2020 " class="align-text-top noRightClick twitterSection" data="
How impressed have you been with Mohammad Rizwan's wicket-keeping in this series? 🧤pic.twitter.com/ZKWFQb4F4k
">A superb innings comes to an end!
— ICC (@ICC) August 22, 2020
How impressed have you been with Mohammad Rizwan's wicket-keeping in this series? 🧤pic.twitter.com/ZKWFQb4F4kA superb innings comes to an end!
— ICC (@ICC) August 22, 2020
How impressed have you been with Mohammad Rizwan's wicket-keeping in this series? 🧤pic.twitter.com/ZKWFQb4F4k
ಈಗಾಗಲೇ ಇಂಗ್ಲೆಂಡ್ ತಂಡದ ಎಲ್.ಹಟ್ಟನ್ 22 ವರ್ಷ 58 ದಿನಕ್ಕೆ ಈ ಸಾಧನೆ ಮಾಡಿದ್ರೆ, ಡೇವಿಡ್ ಗೋವರ್ 22 ವರ್ಷ 102ನೇ ದಿನ ಹಾಗೂ ಕ್ರಾಲಿ 22 ವರ್ಷ 201ನೇ ದಿನಕ್ಕೆ ಈ ರೆಕಾರ್ಡ್ ಬರೆದಿದ್ದಾರೆ.
ಇದರ ಜತೆಗೆ ಪಾಕ್ ವಿರುದ್ಧ ದ್ವಿಶತಕ ಸಿಡಿಸಿರುವ ನಾಲ್ಕನೇ ಯುವ ಆಟಗಾರ ಎಂಬ ಹೆಗ್ಗಳಿಕೆಗೂ ಇವರು ಪಾತ್ರರಾಗಿದ್ದಾರೆ. ಈಗಾಗಲೇ ಟೆಡ್ ಡೆಕ್ಸ್ಟರ್, ಕುಕ್, ಜೋ ರೂಟ್ ಈ ಸಾಧನೆ ಮಾಡಿದ್ದಾರೆ. 267ರನ್ಗಳಿಕೆ ಮಾಡಿದ್ದ ವೇಳೆ ಜಾಕ್ ಕ್ರಾಲಿ ವಿಕೆಟ್ ಒಪ್ಪಿಸಿದರು.