ETV Bharat / sports

ನನ್ನ ಮಗನ ಭವಿಷ್ಯ ಹಾಳಾಗಿದ್ದು ಆತನಿಂದಲೇ... ಧೋನಿ ಹೆಸರೇಳದೆ ಟೀಕಿಸಿದ ಯುವಿ ತಂದೆ - ಭಾರತ

ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ಈಚೆಗಷ್ಟೆ ವಿದಾಯ ಹೇಳಿದ ಆಲ್​ರೌಂಡರ್​ ಯುವರಾಜ್​ ಸಿಂಗ್​ ತಂದೆ ಯೋಗರಾಜ್​ ಸಿಂಗ್​ ಅವರು, ತಮ್ಮ ಮಗನ ಭವಿಷ್ಯ ಹಾಳಾಗಲು ಆತನೇ ಕಾರಣ ಎಂದು ಧೋನಿ ಹೆಸರೇಳದೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಯುವಿ
author img

By

Published : Jun 17, 2019, 12:25 PM IST

Updated : Jun 17, 2019, 1:28 PM IST

ಮುಂಬೈ: ನನ್ನ ಮಗ ಸೇರಿದಂತೆ ಹಲವು ಕ್ರಿಕೆಟಿಗರ ವೃತ್ತಿ​ ಜೀವನ ಮೈದಾನದಲ್ಲಿ ಅಂತ್ಯಗೊಳ್ಳದಂತಾಗಲು ಆತನೇ ಕಾರಣ ಎಂದು ಯುವರಾಜ್​ ಸಿಂಗ್​ ತಂದೆ ಯೋಗರಾಜ್​ ಸಿಂಗ್​ ಹೆಸರೇಳದೆ ಧೋನಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಭಾರತ ಕಂಡಂತಹ ಶ್ರೇಷ್ಠ ಆಲ್​ರೌಂಡರ್​ಗಳಲ್ಲಿ ಒಬ್ಬರಾದ ಯುವರಾಜ್​ ಸಿಂಗ್​ ಕಳೆದೆರಡು ವರ್ಷಗಳಿಂದ ರಾಷ್ಟ್ರೀಯ ತಂಡಕ್ಕೆ ಅವಕಾಶ ಸಿಗದೆ ಬೇಸರದಲ್ಲಿ ಕಳೆದ ವಾರವಷ್ಟೇ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ನಿವೃತ್ತಿ ಘೋಷಿಸಿದ್ದರು. ಆದರೆ ಉತ್ತಮ ಬೀಳ್ಕೊಡುಗೆ ಸಿಗಲಿಲ್ಲ ಎಂಬ ಕೊರಗು ಅವರಿಗೂ ಇದ್ದದ್ದೂ ನಿಜ, ಅದೇ ರೀತಿ ಅವರ ತಂದೆಗೂ ಮಗನ ಕ್ರಿಕೆಟ್​ ಜೀವನದ ಕೊನೆಯ ಪಂದ್ಯ ಅವಿಸ್ಮರಣೀಯವಾಗಲಿಲ್ಲ ಎಂಬ ಕೊರಗಿದ್ದು, ಇದಕ್ಕೆ ಕಾರಣ ಆಗಿದ್ದು ಒಬ್ಬ ವ್ಯಕ್ತಿ ಎಂದು ಸಂದರ್ಶನವೊಂದರಲ್ಲಿ ತಿಳಿಸಿದ್ದಾರೆ.

ವಿಶ್ವಕಪ್​ ನಡೆಯುತ್ತಿದೆ, ಇಡೀ ದೇಶವೇ ಭಾರತ ತಂಡವನ್ನು ಬೆಂಬಲಿಸುತ್ತಿದೆ. ಈ ಸಂದರ್ಭದಲ್ಲಿ ಕಳೆದ 15 ವರ್ಷಗಳಿಂದ ಭಾರತ ಕ್ರಿಕೆಟ್​ನಲ್ಲಿ ರಾಜಕೀಯ ನಡೆಸುತ್ತಿರುವ ಆತನ ಹೆಸರನ್ನು ಹೇಳುವುದು ಸರಿಯಲ್ಲ. ವಿಶ್ವಕಪ್​ ಮುಗಿದ ಮೇಲೆ ಆತನ ರಾಜಕೀಯ ಬಯಲಾಟವನ್ನು ಬಹಿರಂಗಪಡಿಸುವುದಾಗಿ ತಿಳಿಸಿದ್ದಾರೆ.

ಆತನೊಬ್ಬನಿಂದಲೇ ವಿವಿಎಸ್​ ಲಕ್ಷ್ಮಣ್​, ನಂತರ ಸೆಹ್ವಾಗ್​, ಗಂಭೀರ್​ ಇದೀಗ ನನ್ನ ಮಗನ ಕ್ರಿಕೆಟ್​ ಜೀವನ ಅಂತ್ಯಗೊಂಡಿದೆ. ನನ್ನ ಮಗನಿಗೆ ಕೊನೆಯ ಪಂದ್ಯವಾಡುವ ಅವಕಾಶವನ್ನು ನೀಡುತ್ತೇವೆಂದ ಬಿಸಿಸಿಐ, ಬೇಕಂತಲೇ ಯೋ ಯೋ ಟೆಸ್ಟ್​ನಲ್ಲಿ ಫೇಲಾಗುವಂತೆ ಮಾಡಿದ್ದಾರೆ. ಇದಕ್ಕೆಲ್ಲಾ ಕಾರಣ ಒಬ್ಬನೇ ಎಂದು ಧೋನಿ ವಿರುದ್ಧ ಕಿಡಿಕಾರಿದ ಯೋಗರಾಜ್​, ಸತ್ಯ ಹೇಳಲು ನನಗೆ ಯಾರ ಭಯವೂ ಇಲ್ಲ, ನಾನು ಸತ್ಯ ಹೇಳುವಾಗ ನನ್ನ ಮುಂದೆ ಮಾತನಾಡಲು ಯಾರೂ ಬರುವುದಿಲ್ಲ, ಸದ್ಯಕ್ಕೆ ವಿಶ್ವಕಪ್​ ಮುಗಿಯಲಿ ಮುಂದೆ ಇದಕ್ಕೆಲ್ಲಾ ಕಾರಣ ಯಾರು ಎಂದು ಬಹಿರಂಗ ಪಡಿಸುವೆ ಎಂದಿದ್ದಾರೆ.

Yuvraj Singh
ಯುವರಾಜ್​ ಸಿಂಗ್​

2015ರಲ್ಲೂ ಧೋನಿ ವಿರುದ್ಧ ಆರೋಪ!

2015ರ ವಿಶ್ವಕಪ್​ನಲ್ಲಿ ಯುವರಾಜ್​ ಸಿಂಗ್​ಗೆ ಅವಕಾಶ ಸಿಗದಿದ್ದಾಗಲೂ ಯೋಗರಾಜ್​ ಧೋನಿ ವಿರುದ್ಧ ಸಿಡಿದೆದ್ದಿದ್ದರು. ಅಂದೂ ತನ್ನ ಮಗನಿಗೆ ಅವಕಾಶ ಸಿಗದಿರಲು ಕಾರಣ ಧೋನಿ ಎಂದು ಬಹಿರಂಗ ಹೇಳಿಕೆ ನೀಡಿದ್ದರು. ಭಾರತ ತಂಡಕ್ಕೆ ದೋನಿ ಕೊಡುಗೆ ಏನೂ ಇಲ್ಲ, ಎಲ್ಲಾ ಮಾಧ್ಯಮಗಳಿಂದ ಧೋನಿ ಹೀರೋ ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು.

2017 ರಲ್ಲಿ ಯೂಟರ್ನ್

2017 ರಲ್ಲಿ ಯುವರಾಜ್​ ಸಿಂಗ್​ಗೆ ಏಕದಿನ ಕ್ರಿಕೆಟ್​ನಲ್ಲಿ ಅವಕಾಶ ಸಿಗುತ್ತಿದ್ದಂತೆ ಯೂಟರ್ನ್​ ಹೊಡೆದಿದ್ದ ಯೋಗರಾಜ್​, ತಮ್ಮ ಮಗನಿಗೆ ಕೆಟ್ಟದ್ದು ಮಾಡಿದ ಧೋನಿಯನ್ನು ನಾನು ಕ್ಷಮಿಸಿದ್ದೇನೆ, ಧೋನಿ ಮಾಡಿರುವ ತಪ್ಪನ್ನು ದೇವರು ನೋಡಿಕೊಳ್ಳುತ್ತಾನೆ ಎಂದು ಹೇಳಿಕೆ ನೀಡಿದ್ದರು.

ಇದೀಗ ಯುವರಾಜ್​ ಸಿಂಗ್​ ನಿವೃತ್ತಿ ಹೊಂದಿದ ಮೇಲೆ ಮತ್ತೆ ಯೋಗರಾಜ್​ ಧೋನಿಯನ್ನು ಟಾರ್ಗೆಟ್​ ಮಾಡುತ್ತಿದ್ದು, ವಿಶ್ವಕಪ್​ ನಂತರ ಧೋನಿ ವಿರುದ್ಧ ಬಹಿರಂಗವಾಗಿ ಆರೋಪ ಮಾಡಲು ಸಿದ್ದರಾಗಿರುವಂತೆ ಕಂಡುಬರುತ್ತಿದೆ. ಒಟ್ಟಿನಲ್ಲಿ ತಮ್ಮ ಚಾಣಾಕ್ಷ ನಾಯಕತ್ವದಿಂದ ಟೆಸ್ಟ್​ ಕ್ರಿಕೆಟ್​ನಲ್ಲಿ ಮೊದಲ ಬಾರಿಗೆ ಮೊದಲ ಸ್ಥಾನಕ್ಕೆ ಕೊಂಡೊಯ್ದಿದ್ದ ಧೋನಿ ಭಾರತ ತಂಡಕ್ಕೆ 2 ವಿಶ್ವಕಪ್​ ದೊರೆಕಿಸಿಕೊಡುವಲ್ಲಿ ಯಶಸ್ವಿಯಾಗಿದ್ದರೂ, ಇಂತಹ ಆರೋಪಗಳು ಕೇಳಿಬರುವುದು ಸರಿಯೋ? ತಪ್ಪೋ..? ಎಂಬುದೇ ಯಕ್ಷ ಪ್ರಶ್ನೆಯಾಗಿದೆ.

Intro:Body:Conclusion:
Last Updated : Jun 17, 2019, 1:28 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.