ಅಬುಧಾಬಿ: ಈಗಾಗಲೇ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿರುವ ಸಿಕ್ಸರ್ ಕಿಂಗ್ ಯುವರಾಜ್ ಸಿಂಗ್ ಮೈದಾನದಲ್ಲಿ ಮತ್ತೊಮ್ಮೆ ಬ್ಯಾಟ್ ಹಿಡಿದು ಘರ್ಜಿಸಲಿದ್ದಾರೆ.
ಯುವರಾಜ್ ಸಿಂಗ್ ಅಂತಾರಾಷ್ಟ್ರೀಯ ಕ್ರಿಕೆಟ್ನಿಂದ ನಿವೃತ್ತಿಯಾದ ಬಳಿಕ ಕೆನಡಾದಲ್ಲಿ ನಡೆದ ಗ್ಲೋಬಲ್ ಟಿ-20 ಟೂರ್ನಿಯಲ್ಲಿ ಭಾಗವಹಿಸಿದ್ದರು. ಆದರೆ, ಆ ಟೂರ್ನಿಯ ಬಳಿಕ ಯುವರಾಜ್ ಬ್ಯಾಟ್ ಹಿಡಿದಿರಲಿಲ್ಲ. ಆದರೆ, ಮುಂದಿನ ತಿಂಗಳಿಂದ ಅಬುಧಾಬಿಯಲ್ಲಿ ನವೆಂಬರ್ 15-24ರ ವರೆಗೆ ನಡೆಯಲಿರುವ ಟಿ10 ಲೀಗ್ನಲ್ಲಿ ಮರಾಠ ಅರೇಬಿಯನ್ಸ್ ತಂಡ ಐಕಾನ್ ಪ್ಲೇಯರ್ ಆಗಿ ಬ್ಯಾಟ್ ಬೀಸಲು ಸಜ್ಜಾಗಿದ್ದಾರೆ.
-
He has been there, done that. Be it Six Sixes or winning various formats of Cricket Worldcup. 🏏
— Maratha Arabians (@MarathaArabians) October 24, 2019 " class="align-text-top noRightClick twitterSection" data="
We are thrilled to welcome @YUVSTRONG12 as our Indian Icon Player for Season 3 of Abudhabi @T10League.
Come and support us!
#AalaReAala #YuvrajSingh #T10League pic.twitter.com/F1hqbtSCHD
">He has been there, done that. Be it Six Sixes or winning various formats of Cricket Worldcup. 🏏
— Maratha Arabians (@MarathaArabians) October 24, 2019
We are thrilled to welcome @YUVSTRONG12 as our Indian Icon Player for Season 3 of Abudhabi @T10League.
Come and support us!
#AalaReAala #YuvrajSingh #T10League pic.twitter.com/F1hqbtSCHDHe has been there, done that. Be it Six Sixes or winning various formats of Cricket Worldcup. 🏏
— Maratha Arabians (@MarathaArabians) October 24, 2019
We are thrilled to welcome @YUVSTRONG12 as our Indian Icon Player for Season 3 of Abudhabi @T10League.
Come and support us!
#AalaReAala #YuvrajSingh #T10League pic.twitter.com/F1hqbtSCHD
ವೆಸ್ಟ್ ಇಂಡೀಸ್ ಮಾಜಿ ನಾಯಕ ಡ್ವೇನ್ ಬ್ರಾವೋ ನೇತೃತ್ವದಲ್ಲಿ ಯುವಿ ಮರಾಠ ಅರೇಬಿಯನ್ಸ್ ತಂಡದಲ್ಲಿ ಆಡಲಿದ್ದಾರೆ. ಇದೇ ತಂಡದಲ್ಲಿ ಯುವಿ ಜೊತೆ ಆಸ್ಟ್ರೇಲಿಯಾದ ಸ್ಫೋಟಕ ಬ್ಯಾಟ್ಸ್‌ಮನ್ ಕ್ರಿಸ್ ಲಿನ್, ಅಫ್ಘಾನಿಸ್ತಾನದ ಹಝರತುಲ್ಹ ಝಾಝೈ ಹಾಗೂ ನಜೀಬುಲ್ಲ ಝಾದ್ರನ್, ಶ್ರೀಲಂಕಾ ಟಿ20 ತಂಡದ ನಾಯಕ ಲಸಿತ್ ಮಾಲಿಂಗ ಕೂಡ ಇದ್ದಾರೆ.
ಭಾರತದ ಜಹೀರ್ ಖಾನ್, ಮುನಾಫ್ ಪಟೇಲ್, ಪ್ರವೀಣ್ ಕುಮಾರ್, ಪ್ರವೀಣ್ ತಾಂಬೆ ಸೇರಿ 6-7 ಭಾರತೀಯ ಆಟಗಾರರು ಈಗಾಗಲೇ ಈ ಟೂರ್ನಿಯಲ್ಲಿ ಭಾಗವಹಿಸುತ್ತಿದ್ದಾರೆ. ವಿಂಡೀಸ್ ಆಟಗಾರರು, ಆಸ್ಟ್ರೇಲಿಯಾ ಹಾಗೂ ಪಾಕಿಸ್ತಾನದ ಕೆಲವು ಸ್ಟಾರ್ ಆಟಗಾರರು ಈ ಲೀಗ್ನಲ್ಲಿ ಪಾಲ್ಗೊಳ್ಳಲಿದ್ದಾರೆ.