ಮುಂಬೈ: 13ನೇ ಆವೃತ್ತಿಯಲ್ಲಿ ಮುಂಬೈ ಇಂಡಿಯನ್ಸ್ ತಂಡ ಚಾಂಪಿಯನ್ ಪಟ್ಟಕ್ಕೇರಲು ಪ್ರಮುಖ ಪಾತ್ರವಹಿಸಿರುವ ಯುವ ಬ್ಯಾಟ್ಸ್ಮನ್ ಇಶಾನ್ ಕಿಶನ್ರನ್ನು ಭಾರತ ತಂಡದ ಮಾಜಿ ಆಟಗಾರ ಯುವರಾಜ್ ಸಿಂಗ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಮಂಗಳವಾರ ನಡೆದ ಐಪಿಎಲ್ ಫೈನಲ್ ಪಂದ್ಯದಲ್ಲಿ ರೋಹಿತ್ ನೇತೃತ್ವದ ಮುಂಬೈ ಇಂಡಿಯನ್ಸ್ ತಂಡ 5 ವಿಕೆಟ್ಗಳ ಅಂತರದಿಂದ ಡೆಲ್ಲಿ ತಂಡವನ್ನು ಮಣಿಸಿ ಚಾಂಪಿಯನ್ ಪಟ್ಟಕ್ಕೇರಿದೆ. ಟ್ವಿಟರ್ ಮೂಲಕ ಮುಂಬೈ ಇಂಡಿಯನ್ಸ್ಗೆ ಶುಭಕೋರಿರುವ ಯುವರಾಜ್ ಸಿಂಗ್ ಯುವ ಪ್ರತಿಭೆ ಇಶಾನ್ ಕಿಶನ್ರ ಬಗ್ಗೆಯೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಇಶಾನ್ ಕಿಶನ್ ಈ ಆವೃತ್ತಿಯಲ್ಲಿ ಮುಂಬೈನ ಖಾಯಂ ಆಟಗಾರನಾಗಿರಲಿಲ್ಲ. ಮೊದಲಿಗೆ ಸೌರಭ್ ತಿವಾರಿ ಗಾಯಗೊಂಡ ನಂತರ ತಂಡ ಸೇರಿದ್ದ ಕಿಶನ್ ತಮ್ಮ ಮೊದಲ ಪಂದ್ಯದಲ್ಲೇ 99 ರನ್ ಸಿಡಿಸಿ ತಂಡದಲ್ಲಿ ಖಾಯಂ ಸ್ಥಾನಗಿಟ್ಟಿಸಿಕೊಂಡರು.
ಅಲ್ಲದೆ ಟೂರ್ನಿಯಲ್ಲಿ ಮುಂಬೈ ಯಶಸ್ಸಿಗೆ ಎಲೆಮರೆಕಾಯಿಯಂತೆ ಶ್ರಮಿಸಿದ 22 ವರ್ಷದ ಆಟಗಾರ 14 ಪಂದ್ಯಗಳಲ್ಲಿ 516 ರನ್ ಸಿಡಿಸಿ 2020ರ ಐಪಿಎಲ್ನ ಗರಿಷ್ಠ ಸ್ಕೋರರ್ಗಳ ಪಟ್ಟಿಯಲ್ಲಿ 5ನೇ ಸ್ಥಾನ ಪಡೆದುಕೊಂಡಿದ್ದಾರೆ. ವಿಶೇಷವೆಂದರೆ, ಎಬಿಡಿ, ಕ್ರಿಸ್ ಗೇಲ್, ಪೊಲಾರ್ಡ್,ಪಾಂಡ್ಯರಂತಹ ಸ್ಫೋಟಕ ಬ್ಯಾಟ್ಸ್ಮನ್ಗಳನ್ನೇ ಹಿಂದಿಕ್ಕಿ ಟೂರ್ನಿಯ ಗರಿಷ್ಠ ಸಿಕ್ಸರ್ ಸಿಡಿಸಿದ ಬ್ಯಾಟ್ಸ್ಮನ್ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ. ಕೊನೆಯ ಪಂದ್ಯದಲ್ಲೂ ಕೇವಲ 20 ಎಸೆತಗಳಲ್ಲಿ 33 ರನ್ಗಳಿಸಿದರು.
-
Congratulations @mipaltan by far the best team in the #ipl @ImRo45 captains knock in the final ! Heart goes out for @DelhiCapitals had an outstanding tournament! @ishankishan51 special very special player in the making . #IPL2020
— Yuvraj Singh (@YUVSTRONG12) November 10, 2020 " class="align-text-top noRightClick twitterSection" data="
">Congratulations @mipaltan by far the best team in the #ipl @ImRo45 captains knock in the final ! Heart goes out for @DelhiCapitals had an outstanding tournament! @ishankishan51 special very special player in the making . #IPL2020
— Yuvraj Singh (@YUVSTRONG12) November 10, 2020Congratulations @mipaltan by far the best team in the #ipl @ImRo45 captains knock in the final ! Heart goes out for @DelhiCapitals had an outstanding tournament! @ishankishan51 special very special player in the making . #IPL2020
— Yuvraj Singh (@YUVSTRONG12) November 10, 2020
" ಐಪಿಎಲ್ ಉತ್ತಮ ತಂಡವಾದ ಮುಂಬೈ ಇಂಡಿಯನ್ಸ್ಗೆ ಹಾಗೂ ಫೈನಲ್ ಪಂದ್ಯದಲ್ಲಿ ನಾಯಕನ ಆಟವಾಡಿದ ರೋಹಿತ್ ಶರ್ಮಾರಿಗೆ ಅಭಿನಂಧನೆಗಳು.
ಡೆಲ್ಲಿ ಕ್ಯಾಪಿಟಲ್ಸ್ ಕೂಡ ಟೂರ್ನಿಯಲ್ಲಿ ಅದ್ಭುತ ಪ್ರದರ್ಶನ ತೋರಿದೆ. ಇಶಾನ್ ಕಿಶನ್ ಒಬ್ಬ ವಿಶೇಷ ಆಟಗಾರನಾಗಿ ರೂಪುಗೊಂಡಿದ್ದಾರೆ " ಎಂದು ಟ್ವಿಟರ್ ನಲ್ಲಿ ಯುವಿ ಬರೆದುಕೊಂಡಿದ್ದಾರೆ.