ಚೆಲ್ಮ್ಸ್ಫೋರ್ಡ್: ಇಂಗ್ಲೆಂಡ್ನಲ್ಲಿ ನಡೆಯುತ್ತಿರುವ ಅಂಡರ್-19 ತ್ರಿಕೋನ ಏಕದಿನ ಸರಣಿಯಲ್ಲಿ ಭಾರತದ ಯುವ ಪಡೆ ಇಂಗ್ಲೆಂಡ್ ವಿರುದ್ಧ 1 ವಿಕೆಟ್ನಿಂದ ರೋಚಕ ಜಯ ಸಾಧಿಸಿದೆ.
ಇಂಗ್ಲೆಂಡ್ ನೀಡಿದ 205 ರನ್ಗಳ ಗುರಿಯನ್ನು ಭಾರತದ ಯುವ ಪಡೆ 36.3 ಓವರ್ಗಳಲ್ಲಿ 9 ವಿಕೆಟ್ ಕಳೆದುಕೊಂಡು ತಲುಪಿತು. ಆರಂಭಿಕನಾಗಿ ಕಣಕ್ಕಿಳಿದಿದ್ದ ಯಶಸ್ವಿ ಜೈಸ್ವಾಲ್ 82 ಎಸೆತಗಳಲ್ಲಿ 10 ಬೌಂಡರಿ ಹಾಗೂ 2 ಸಿಕ್ಸರ್ ಸಿಡಿಸಿ 78 ರನ್ಗಳಿಸಿ ಗೆಲುವಿನ ರೂವಾರಿಯಾದರು.
ಇವರನ್ನು ಹೊರೆತುಪಡಿಸಿದರೆ,ದಿವ್ಯಾನ್ಶ್ ಸಕ್ಸೇನಾ 33 ರನ್ಸಿಡಿಸಿದರೆ, 10ನೇ ಬ್ಯಾಟ್ಸ್ಮನ್ ಆಗಿ ಕಣಕ್ಕಿಳಿದಿದ್ದ ಸುಶಾಂತ್ ಮಿಶ್ರ 12 ಎಸೆಗಳಲ್ಲಿ 2 ಸಿಕ್ಸರ್ ಹಾಗೂ 1 ಬೌಂಡರಿ ಸಿಡಿಸಿ ಭಾರತ ತಂಡಕ್ಕೆ 1 ವಿಕೆಟ್ಗಳ ರೋಚಕ ಜಯ ತಂದುಕೊಟ್ಟರು. ಕೊನೆಯ ವಿಕೆಟ್ಗೆ ಅಗತ್ಯವಿದ್ದ 19 ರನ್ಗಳಲ್ಲಿ 18 ರನ್ ಸುಶಾಂತ್ ಸಿಡಿಸಿದ್ದು ವಿಶೇಷವಾಗಿತ್ತು.
ಈ ಗೆಲುವಿನೊಂದಿಗೆ ಅಂಕ ಪಟ್ಟಿಯಲ್ಲಿ 7 ಅಂಕ ಪಡೆದು ಎರಡನೇ ಸ್ಥಾನಕ್ಕೇರಿದಲ್ಲದೆ ಫೈನಲ್ ಹಾದಿ ಖಚಿತಪಡಿಸಿಕೊಂಡಿತು. ಈಗಾಗಲೇ 6 ಪಂದ್ಯಗಳಲ್ಲಿ 9 ಅಂಕ ಪಡೆದಿರುವ ಬಾಂಗ್ಲಾದೇಶ ತಂಡ ಫೈನಲ್ ಎಂಟ್ರಿ ಖಚಿತಪಡಿಸಿಕೊಂಡಿತ್ತು. ಎಲ್ಲಾ ತಂಡಗಳಿಗೂ ಇನ್ನೂ ತಲಾ ಎರಡು ಪಂದ್ಯಗಳಿದೆ. ಇಂಗ್ಲೆಂಡ್ ಉಳಿದೆರಡು ಪಂದ್ಯಗಳನ್ನು ಗೆದ್ದರೂ ಫೈನಲ್ಗೇರಲು ಸಾಧ್ಯವಿಲ್ಲ. ಹೀಗಾಗಿ ಮುಂದಿನ ಮೂರು ಪಂದ್ಯಗಳು ಔಪಚಾರಿಕವಾಗಿವೆ. ಅಗಸ್ಟ್ 11 ರಂದು ಫೈನಲ್ ಪಂದ್ಯ ನಡೆಯಲಿದೆ.