ನವದೆಹಲಿ: ಆರ್ ಅಶ್ವಿನ್ ಭಾರತದ ಶ್ರೇಷ್ಠ ಸ್ಪಿನ್ನರ್ ಹಾಗೂ ಟೆಸ್ಟ್ ಕ್ರಿಕೆಟ್ನಲ್ಲಿ ಸಾಕಷ್ಟು ಯಶಸ್ಸು ಸಾಧಿಸಿದ್ದಾರೆ. ಆದರೆ ಅವರನ್ನು ಏಕದಿನ ಕ್ರಿಕೆಟ್ನಲ್ಲಿ ಕಡೆಗಣಿಸಲಾಗುತ್ತಿದೆ ಎಂದು ಪಾಕಿಸ್ತಾನದ ಮಾಜಿ ಸ್ಪಿನ್ನರ್ ಸಕ್ಲೈನ್ ಮುಷ್ತಾಕ್ ಬೇಸರ ವ್ಯಕ್ತಪಡಿಸಿದ್ದಾರೆ.
ಅಶ್ವಿನ್ ಐಪಿಎಲ್ನಲ್ಲಿ ಸತತವಾಗಿ ಆಡುತ್ತಿದ್ದಾರೆ. ಆದರೆ ಅವರು 2017 ಜುಲೈನಿಂದ ಸೀಮಿತ ಓವರ್ಗಳ ಕ್ರಿಕೆಟ್ನಲ್ಲಿ ಕಾಣಿಸಿಕೊಂಡಿಲ್ಲ. ರವೀಂದ್ರ ಜಡೇಜಾ ಕೂಡ ಅದೇ ರೀತಿಯ ಸನ್ನಿವೇಶದಲ್ಲಿದ್ದರು, ಆದ್ರೆ ಅವರ ಆಲ್ರೌಂಡರ್ ಪ್ರದರ್ಶನದಿಂದ ಮತ್ತೆ ಮೂರು ಮಾದರಿಯ ಕ್ರಿಕೆಟ್ಗೆ ಮರಳಿದ್ದಾರೆ.
ನೀವು ಫಿಂಗರ್ ಸ್ಪಿನ್ನರ್ ಅಥವಾ ರಿಸ್ಟ್ ಸ್ಪಿನ್ನರ್ ಆಗಿದ್ದರೂ ಬೌಲಿಂಗ್ ಮಾಡುವ ವರ್ಗ ಶಾಶ್ವತವಾಗಿರುತ್ತದೆ. ನಿಮ್ಮ ಬೌಲಿಂಗ್ ಕೌಶಲ್ಯ, ಪಂದ್ಯದ ಬಗ್ಗೆ ತಿಳಿದುಕೊಳ್ಳುವ ಸಾಮರ್ಥ್ಯ ಇಲ್ಲಿ ಪ್ರಮುಖವಾಗಿರುತ್ತದೆ. ರವಿಚಂದ್ರನ್ ಅಶ್ವಿನ್ರನ್ನು ಸೀಮಿತ ಓವರ್ಗಳ ಕ್ರಿಕೆಟ್ನಿಂದ ದೂರ ಮಾಡಿರುವುದು ನಿಜಕ್ಕೂ ಆಶ್ಚರ್ಯ ತಂದಿದೆ ಎಂದು ದೂಸ್ರ ಎಸೆತಗಳನ್ನು ಪರಿಚಯಿಸಿದ ಸಕ್ಲೈನ್ ಅಭಿಪ್ರಯಪಟ್ಟಿದ್ದಾರೆ.
ಇನ್ನು ಪಾಕಿಸ್ತಾನದ ಮಾಜಿ ಕ್ರಿಕೆಟಿಗರಾದ ಅಖ್ತರ್, ಅಫ್ರಿದಿಯಂತೆ ಸಕ್ಲೈನ್ ಕೂಡ ಇಂಡೋ-ಪಾಕ್ ನಡುವಿನ ಕ್ರಿಕೆಟ್ ನಡೆಯಬೇಕು ಎಂದು ಬಯಸಿದ್ದಾರೆ.
ಸೀಮಿತ ಓವರ್ಗಳ ಕ್ರಿಕೆಟ್ಗಿಂತ ಕಠಿಣವಾದ ಮಾದರಿಯಾದ ಟೆಸ್ಟ್ ಕ್ರಿಕೆಟ್ನಲ್ಲಿ ಬ್ಯಾಟ್ಸ್ಮನ್ಗಳನ್ನು ಹೇಗೆ ಔಟ್ ಮಾಡಬೇಕೆಂದು ಅಶ್ವಿನ್ ತಿಳಿದಿದ್ದಾರೆ. ಪಂದ್ಯದಲ್ಲಿ ನಿಯಂತ್ರಕನ ಜವಾಬ್ದಾರಿಯನ್ನು ಯಾರು ಬೇಕಾದರೂ ನಿರ್ವಹಿಸಬಹುದು, ಆದರೆ ಹೇಗೆ ವಿಕೆಟ್ ಪಡೆಯಬೇಕು ಎಂಬ ವಿಚಾರ ಮುಖ್ಯ. ಇವರೆಡನ್ನು ಅಶ್ವಿನ್ ಬಲ್ಲವರಾಗಿದ್ದಾರೆ. ಹೀಗಿರುವಾಗ ಅವರನ್ನು ಹೇಗೆ ಹೊರಗಿಟ್ಟಿದ್ದೀರಾ?ನೀವು ನಿಮ್ಮ ಉತ್ತಮ ಬೌಲರ್ಗಳ ಹಿಂದೆ ನಿಲ್ಲಬೇಕು ಎಂದಿದ್ದಾರೆ.
ಅಶ್ವಿನ್ ಬಂದಾಗ ಭಜ್ಜಿಯನ್ನು ಕಡೆಗಣಿಸಿದರು. ಇದೀಗ ಅಶ್ವಿನ್ ಜಾಗದಲ್ಲಿ ಹಲವಾರು ಸ್ಪಿನ್ನರ್ಗಳನ್ನು ಪ್ರಯೋಗಿಸಿದರೂ ಅಶ್ವಿನ್ರಷ್ಟು ಯಶಸ್ಸು ಕಾಣಲಿಲ್ಲ. ಹರ್ಭಜನ್ರನ್ನು ಹೊರಗಿಟ್ಟಾಗಲು ನನಗೆ ಆಶ್ಚರ್ಯವಾಗಿತ್ತು. ಇಬ್ಬರೂ ಬಲಗೈ ಸ್ಪಿನ್ನರ್ಗಳೆಂದು ತಂಡದಲ್ಲಿ ಅವಕಾಶ ನೀಡಿರಲಿಲ್ಲ. ಆದ್ರೆ ಇಬ್ಬರ ಬೌಲಿಂಗ್ ವಿಭಿನ್ನವಾಗಿತ್ತು. ತಂಡದಲ್ಲಿ ಇಬ್ಬರಯ ಬಲಗೈ ವೇಗಿಗಳಿಗೆ ಅವಕಾಶ ನೀಡುವಾಗ ಇಬ್ಬರು ಸ್ಪಿನ್ನರ್ಗಳಿಗೆ ಏಕೆ ಅವಕಾಶ ಕೊಡುವುದಿಲ್ಲ ಎಂದು ಅವರು ಪ್ರಶ್ನಿಸಿದ್ದಾರೆ.
ಟೆಸ್ಟ್ ಕ್ರಿಕೆಟ್ನಲ್ಲಿ ಭಜ್ಜಿಗೆ(413 ವಿಕೆಟ್ ) 700 ವಿಕೆಟ್‌ಗಳನ್ನು ಪಡೆಯುವ ಸಾಮರ್ಥ್ಯವಿತ್ತು. ಆದರೆ ಅವರಿಗೆ ಸರಿಯಾಗಿ ಅವಕಾಶಗಳು ಸಿಗಲಿಲ್ಲ ಎಂದು ಕೇವಲ ಐಪಿಎಲ್ನಲ್ಲಿ ವೃತ್ತಿ ಜೀವನ ಅಂತ್ಯಗೊಳಿಸುತ್ತಿರುವ ಭಾರತೀಯನ ಬೌಲರ್ ಬಗ್ಗೆ ವಿಷಾಧ ವ್ಯಕ್ತಪಡಿಸಿದ್ದಾರೆ.
ಇನ್ನುಅಶ್ವಿನ್ ಮತ್ತು ರವೀಂದ್ರ ಜಡೇಜ ಇನ್ನಷ್ಟು ಸಮಯ ಕ್ರಿಕೆಟ್ ಆಡಬಲ್ಲ ಸಾಮರ್ಥ್ಯ ಹೊಂದಿದ್ದಾರೆ. ಇವರಿಬ್ಬರೂ ತಲಾ 100 ಟೆಸ್ಟ್ ಪಂದ್ಯಗಳನ್ನು ಆಡಲಿದ್ದಾರೆ' ಎಂದೂ ವಿಶ್ವಾಸ ವ್ಯಕ್ತಪಡಿಸಿದ್ದಾರೆ.